ಸರಕಾರ ತರಾತುರಿಯಲ್ಲಿ ಶಾಲೆ ಆರಂಭಿಸಕೂಡದು

ಹೆತ್ತವರು ಸದ್ಯ ಮಕ್ಕಳನ್ನು ತರಗತಿಗಳಿಗೆ ಕಳುಹಿಸುವ ಯೋಚನೆ ಮಾಡದಿರುವುದೇ ಒಳ್ಳೆಯದು

Team Udayavani, Jun 9, 2020, 6:00 AM IST

ಸರಕಾರ ತರಾತುರಿಯಲ್ಲಿ ಶಾಲೆ ಆರಂಭಿಸಕೂಡದು

ಬೆಂಗಳೂರು: ಪ್ರತಿ ಜೀವವೂ ಅಮೂಲ್ಯ. ಕೋವಿಡ್‌-19 ನಾಗರಿಕತೆಗೆ ತಂದೊಡ್ಡಿರುವ ಅಪಾಯ ಊಹಿಸಲು ಅಸಾಧ್ಯವಾದದ್ದು. ಇಂತಹ ಸಮಯದಲ್ಲಿ ಶಾಲೆಗಳನ್ನು ಬೇಗ ಪುನರಾರಂಭಗೊಳಿಸುವ ಯೋಚನೆಯೇ ಮಾಡಬಾರದು. ಸಣ್ಣ ಮಕ್ಕಳು ಸಾಮಾಜಿಕ ಅಂತರ, ವೈರಾಣು ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂದೇ ನನ್ನ ಅನಿಸಿಕೆ.

ಶೈಕ್ಷಣಿಕವಾಗಿ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಇದು ಅನಿವಾರ್ಯ. ಜೀವಕ್ಕಿಂತ ಮಿಗಿಲಾದ ಆದ್ಯತೆ ಮತ್ತೂಂದು ಇಲ್ಲ. ನಮ್ಮ ಪ್ರಾಥಮಿಕ- ಪ್ರೌಢ ಶಿಕ್ಷಣ ಸಚಿವರು ಸಮರ್ಥರು. ಅವರು ಸೂಕ್ತ, ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವ ಭರವಸೆ ನನಗಿದೆ. ಹೆತ್ತವರು ಆತಂಕಕ್ಕೆ ಒಳಗಾಗುವುದು ಬೇಡ. ನಿಮ್ಮ ಮಕ್ಕಳ ಶಿಕ್ಷಣ ಮತ್ತು ಅವರ ಸುರಕ್ಷೆ ಈ ನಾಗರಿಕ ಜಗತ್ತಿನ ಹೊಣೆಯಾಗಿದೆ.

ಮಕ್ಕಳು ಬೇಗನೆ ಶಾಲೆಗೆ ಹೋಗದಿದ್ದರೆ ಏನಾದೀತೋ ಎಂಬ ಯೋಚನೆಯನ್ನು ಹೆತ್ತವರು ಬಿಡಬೇಕು. ಮಕ್ಕಳಿಗೆ ಸದ್ಯದ ಮಟ್ಟಿಗೆ ಸಾಧ್ಯತೆ ಇರುವವರು ಮನೆ  ಯಲ್ಲೇ ಪಾಠ ಹೇಳಿಕೊಡಲಿ. ಜುಲೈ ಅಂತ್ಯದವರೆಗೂ ಶಾಲೆ ಆರಂಭದ ಯೋಚನೆ ಮಾಡಬಾರದು.

ಹೆತ್ತವರ ಅಭಿಪ್ರಾಯ ಸಂಗ್ರಹ, ಚರ್ಚೆ ಒಳ್ಳೆಯ ಕೆಲಸ. ಎಲ್ಲರ ಅಭಿಪ್ರಾಯ ಪಡೆದು ಕೈಗೊಳ್ಳುವ ನಿರ್ಣಯ ಸಮರ್ಪಕವಾಗಿರಬೇಕು. ಇದರಲ್ಲಿ ರಾಜಿ ಇರಬಾರದು. ಯಾರೋ ಶೇ.20 ಜನರ ಒತ್ತಡ, ಅವರ ಕೆಟ್ಟ ಅಭಿಪ್ರಾಯಕ್ಕೆ ಮನ್ನಣೆ ಕೊಡುವ ಅಗತ್ಯವಿಲ್ಲ. ನಮ್ಮ ಎದುರಿಗೆ ಕೋವಿಡ್‌-19 ಮತ್ತು ಹಸಿವು ಎಂಬ ಹಾವಿದೆ ಎಂಬುದನ್ನು ಮರೆಯಬಾರದು.

ಗ್ರಾಮೀಣ ಮಕ್ಕಳ ಪಾಡೇನು?
ಆನ್‌ಲೈನ್‌ ಮೂಲಕ ಹೇಳಿಕೊಡುತ್ತೇನೆ ಎನ್ನುವುದು ಸರಿಯಲ್ಲ. ಹಲವೆಡೆ ಪಟ್ಟಣ ಬಿಟ್ಟು ಎರಡು ಕಿ.ಮೀ. ಹೊರಹೋದರೆ ನೆಟ್‌ವರ್ಕ್‌ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಶಿಕ್ಷಣ ಸರಿಯಲ್ಲ. ನಗರ ಪ್ರದೇಶದ ಕೆಲವರಿಗೆ ಇದರಿಂದ ಅನುಕೂಲ ನಿಜ, ಆದರೆ ಗ್ರಾಮೀಣ ಮಕ್ಕಳ ಪಾಡೇನು? ಅಮೆರಿಕದಲ್ಲೇ ಸೆಪ್ಟೆಂಬರ್‌ನಿಂದ ಶಾಲೆ ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಸರಕಾರ ಯೋಚನೆ ಮಾಡುವಾಗ ಕಟ್ಟಕಡೆಯ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ತಡವಾಗಿ ಶಾಲೆ ಆರಂಭಿಸಿದರೆ ಮುಂದಿನ ಬೇಸಗೆ ರಜೆ ಅವ ಧಿ ಕಡಿಮೆ ಮಾಡಬಹುದು. ಪಾಠ ಕಡಿಮೆ ಮಾಡಬಹುದು.

ಸಮಾನ ಸಾಮರ್ಥ್ಯ ಒದಗಿಸುವ ಶಿಕ್ಷಣ
ಎಲ್ಲ ಮಕ್ಕಳ ಜ್ಞಾನದ ಮಟ್ಟ ಸಮಾನ ವಾಗಿರು ವಂತೆ ನೋಡಿಕೊಳ್ಳಬೇಕು ಎಂಬುದು ನನ್ನ ಆಲೋಚನೆ.ಸಮಾನ ಶಿಕ್ಷಣ ದೊರೆಯುವಂತಾಗಬೇಕು. ಇಡೀ ದೇಶದಲ್ಲಿ ಎಲ್ಲ  ರಿಗೂ ಒಂದೇ ರೀತಿ ಸಿಲೆಬಸ್‌ ಇರ ಬೇಕು ಎಂಬುದು ನನ್ನ ಆಲೋಚನೆ. ಶಾಲೆಗಳ ಅಭಿವೃದ್ಧಿಗೆ ಇದು ಸೂಕ್ತ ಸಮಯ. ಒಂದು ಗ್ರಾ.ಪಂ.ನಲ್ಲಿ ಐದಾರು ಶಾಲೆಗಳಿವೆ. ಇಂಥ ಕಡೆ ವಾಹನ ವ್ಯವಸ್ಥೆ ಮಾಡಿ ಒಂದೇ ಕಡೆ ಶಿಕ್ಷಣ ಕೊಡಬಹುದು. ಸರಕಾರ ಬಿಸಿಯೂಟ, ಹಾಲು, ಪುಸ್ತಕ, ಬಟ್ಟೆ ಕೊಡುತ್ತಿದೆ. ಅದರ ಜತೆಗೆ ವಾಹನ ವ್ಯವಸ್ಥೆ ಮಾಡಬಹುದು.

 - ಕಿಮ್ಮನೆ ರತ್ನಾಕರ್‌, ಮಾಜಿ ಶಿಕ್ಷಣ ಸಚಿವರು

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.