Wimbledon-2023: ಜೊಕೋವಿಕ್‌-ವಾವ್ರಿಂಕ ಮುಖಾಮುಖಿ


Team Udayavani, Jul 7, 2023, 6:37 AM IST

DJOKOVIC

ಲಂಡನ್‌: ವಿಂಬಲ್ಡನ್‌ ಪಂದ್ಯಾವಳಿಯ 3ನೇ ಸುತ್ತಿನ ಸ್ಪರ್ಧೆಗೆ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಮತ್ತು ಸ್ವಿಜರ್ಲೆಂಡ್‌ನ‌ ಸ್ಟಾನಿಸ್ಲಾಸ್‌ ವಾವ್ರಿಂಕ ಅಣಿಯಾಗಿದ್ದಾರೆ. ಈ ಬಿಗ್‌ ಮ್ಯಾಚ್‌ ಶುಕ್ರವಾರ ನಡೆಯಲಿದೆ.

ಗುರುವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ 38 ವರ್ಷದ ವಾವ್ರಿಂಕ 6-3, 4-6, 6-4, 6-2 ಅಂತರದಿಂದ ಆರ್ಜೆಂಟೀನಾದ ಥಾಮಸ್‌ ಎಶೆವೆರಿ ಅವರನ್ನು ಮಣಿಸಿದರು.

ಜೊಕೋ 350 ಗೆಲುವು
ಆಸ್ಟ್ರೇಲಿಯದ ಜೋರ್ಡನ್‌ ಥಾಮ್ಸನ್‌ ವಿರುದ್ಧದ ದ್ವಿತೀಯ ಸುತ್ತಿನ ಪಂದ್ಯವನ್ನು ಗೆಲ್ಲುವ ಮೂಲಕ ನೊವಾಕ್‌ ಜೊಕೋವಿಕ್‌ ನೂತನ ಮೈಲುಗಲ್ಲು ನೆಟ್ಟರು. ಇದು ಗ್ರ್ಯಾನ್‌ಸ್ಲಾಮ್‌ ಪಂದ್ಯಗಳಲ್ಲಿ ಅವರು ಸಾಧಿಸಿದ 350ನೇ ಜಯವಾಗಿದೆ. ಜೊಕೋವಿಕ್‌ ಈ ಎತ್ತರ ತಲುಪಿದ ವಿಶ್ವದ ಕೇವಲ 3ನೇ ಸಾಧಕ. ಉಳಿದಿಬ್ಬರೆಂದರೆ ರೋಜರ್‌ ಫೆಡರರ್‌ ಮತ್ತು ಸೆರೆನಾ ವಿಲಿಯಮ್ಸ್‌.

ಹಾಲಿ ಚಾಂಪಿಯನ್‌ ಖ್ಯಾತಿಯ ಜೊಕೋವಿಕ್‌ 70ನೇ ರ್‍ಯಾಂಕಿಂಗ್‌ ಆಟಗಾರ ಜೋರ್ಡನ್‌ ಥಾಮ್ಸನ್‌ ವಿರುದ್ಧ ಮೇಲುಗೈ ಸಾಧಿಸಲು ಭಾರೀ ಹೋರಾಟ ನಡೆಸಬೇಕಾಯಿತು. ಇದಕ್ಕೆ ಗೆಲುವಿನ ಅಂತರವೇ ಸಾಕ್ಷಿ. ಅದು ಹೀಗಿತ್ತು: 6-3, 7-6 (7 -4), 7-5.

8ನೇ ರ್‍ಯಾಂಕಿಂಗ್‌ ಆಟಗಾರ ಜಾನಿಕ್‌ ಸಿನ್ನರ್‌ ಆರ್ಜೆಂಟೀನಾದ ಡೀಗೋ ಶಾರ್ಟ್ಸ್ಮನ್‌ ಅವರನ್ನು 7-5, 6-1, 6-2ರಿಂದ ಮಣಿಸಿ ತೃತೀಯ ಸುತ್ತಿಗೆ ಏರಿದರು. ಕಳೆದ ವರ್ಷ ಕ್ವಾರ್ಟರ್‌ ಫೈನಲ್‌ ತನಕ ಸಾಗಿದ್ದ ಸಿನ್ನರ್‌, ಅಲ್ಲಿ ಜೊಕೋವಿಕ್‌ಗೆ ಶರಣಾಗಿದ್ದರು.

ಡೇವಿಡ್‌ ಶಪೊವಲೋವ್‌, ಅಲೆಕ್ಸಾಂಡರ್‌ ಬಬ್ಲಿಕ್‌, ಹ್ಯೂಬರ್ಟ್‌ ಹುರ್ಕಾಜ್‌ ಕೂಡ 3ನೇ ಸುತ್ತು ತಲುಪಿದ್ದಾರೆ. ಡೆವಿಡೋವಿಕ್‌ ಫೋಕಿನ ಮತ್ತು ಅಲೆಕ್ಸಾಂಡರ್‌ ಜ್ವೆರೇವ್‌ ದ್ವಿತೀಯ ಸುತ್ತಿಗೆ ಏರಿದ್ದಾರೆ.

ಅಜರೆಂಕಾ ಗೆಲುವು
2018ರ ವನಿತಾ ವಿಭಾಗದ ರನ್ನರ್ ಅಪ್‌ ವಿಕ್ಟೋರಿಯಾ ಅಜರೆಂಕಾ 3ನೇ ಸುತ್ತು ತಲುಪಿದ್ದಾರೆ. ಅವರು ಆರ್ಜೆಂಟೀನಾದ ನಾಡಿಯಾ ಪೊಡೊರೋಸ್ಕಾ ವಿರುದ್ಧ 6-3, 6-0 ಅಂತರದ ಸುಲಭ ಜಯ ಸಾಧಿಸಿದರು.

ಎರಡು ಬಾರಿಯ ಚಾಂಪಿಯನ್‌ ಪೆಟ್ರಾ ಕ್ವಿಟೋವಾ ಮೊದಲ ಸುತ್ತು ದಾಟಿದ್ದಾರೆ. ಅವರು ಇಟಲಿಯ ಜಾಸ್ಮಿನ್‌ ಪೌಲಿನಿ ವಿರುದ್ಧ 6-4, 6-7 (5), 6-1 ಅಂತರದಿಂದ ಗೆದ್ದು ಬಂದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.