World Cup ಅರ್ಹತಾ ಸೂಪರ್‌-6: ಡಚ್ಚರ ಹೊಡೆತದಿಂದ ಪಾರಾದ ಶ್ರೀಲಂಕಾ

Team Udayavani, Jul 1, 2023, 5:57 AM IST

SHREE LANKA

ಬುಲವಾಯೊ: ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಪಂದ್ಯಾವಳಿಯ ಶುಕ್ರವಾರದ ಮುಖಾಮುಖೀಯಲ್ಲಿ ಶ್ರೀಲಂಕಾ ತಂಡ ನೆದರ್ಲೆಂಡ್ಸ್‌ ಹೊಡೆ ತದಿಂದ ಬಚಾವ್‌ ಆಗಿದೆ. 21 ರನ್‌ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ಒಂದು ಹಂತದಲ್ಲಿ 96 ರನ್ನಿಗೆ 6 ವಿಕೆಟ್‌ ಉರುಳಿಸಿಕೊಂಡು ಚಡಪಡಿಸುತ್ತಿತ್ತು. ಆದರೆ ಧನಂಜಯ ಡಿ ಸಿಲ್ವ ಅವರ ಸಾಹಸದಿಂದ 47.4 ಓವರ್‌ಗಳಲ್ಲಿ 213ರ ತನಕ ಸಾಗುವಲ್ಲಿ ಯಶಸ್ವಿಯಾಯಿತು. ಜವಾಬಿತ್ತ ನೆದರ್ಲೆಂಡ್ಸ್‌ 40 ಓವರ್‌ಗಳಲ್ಲಿ 192ಕ್ಕೆ ಆಲೌಟ್‌ ಆಯಿತು.

ಈ ಜಯದೊಂದಿಗೆ ಶ್ರೀಲಂಕಾ ಮತ್ತು ಜಿಂಬಾಬ್ವೆ ತಲಾ 8 ಅಂಕಗ ಳೊಂದಿಗೆ ವಿಶ್ವಕಪ್‌ ಪ್ರಧಾನ ಸುತ್ತಿಗೇ ರುವುದು ಬಹುತೇಕ ಖಚಿತ ಗೊಂಡಿದೆ. ಹಾಗೆಯೇ 2 ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ನಿರ್ಗಮನವೂ ಬಹುತೇಕ ಖಾತ್ರಿಯಾ ಗಿದೆ. ಒಂದೂ ಅಂಕವನ್ನು ಹೊಂದಿಲ್ಲದ ಕೆರಿಬಿಯನ್‌ ಪಡೆ ಶನಿವಾರ ಸ್ಕಾಟ್ಲೆಂಡ್‌ ವಿರುದ್ಧ ತನ್ನ ಮೊದಲ ಸೂಪರ್‌ ಸಿಕ್ಸ್‌ ಪಂದ್ಯವನ್ನು ಆಡಲಿದೆ.

96ಕ್ಕೆ ಬಿತ್ತು 6 ವಿಕೆಟ್‌
ಲೋಗನ್‌ ವಾನ್‌ ಬೀಕ್‌ ಮತ್ತು ಬಾಸ್‌ ಡೆ ಲೀಡ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಶ್ರೀಲಂಕಾ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. ಇಬ್ಬರೂ 3 ವಿಕೆಟ್‌ ಉಡಾಯಿಸಿದರು. ಪಥುಮ್‌ ನಿಸ್ಸಂಕ ಪಂದ್ಯದ ಮೊದಲ ಎಸೆದಲ್ಲೇ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ಸಮ ರವೀರ (1) ಮತ್ತು ಅಸಲಂಕ (2) ಕೂಡ ಬೇಗನೇ ಪಎವಿಲಿಯನ್‌ ಸೇರಿ ಕೊಂಡರು. ದಿಮುತ್‌ ಕರುಣಾರತ್ನೆ 33, ಕುಸಲ್‌ ಮೆಂಡಿಸ್‌ 10 ರನ್ನಿಗೆ ಆಟ ಮುಗಿಸಿದರು. 96 ರನ್ನಿಗೆ 6 ವಿಕೆಟ್‌ ಉರುಳಿತು.

ಈ ಹಂತದಲ್ಲಿ ಧನಂಜಯ ಡಿ ಸಿಲ್ವ ಹೋರಾಟವೊಂದನ್ನು ಸಂಘಟಿಸಿ ತಂಡದ ನೆರವಿಗೆ ನಿಂತರು. ನೆದರ್ಲೆಂಡ್ಸ್‌ ಬೌಲಿಂಗ್‌ ದಾಳಿಗೆ ತಡೆಯೊಡ್ಡಿ ನಿಂತ ಅವರು ಬಹುಮೂಲ್ಯ 93 ರನ್‌ ಹೊಡೆದರು. 111 ಎಸೆತಗಳ ಈ ಆಟದ ವೇಳೆ 8 ಬೌಂಡರಿ, 2 ಸಿಕ್ಸರ್‌ ಸಿಡಿಯಲ್ಪಟ್ಟಿತು. ಅವರಿಗೆ ವನಿಂದು ಹಸರಂಗ (20), ಮಹೀಶ್‌ ತೀಕ್ಷಣ (28) ಉತ್ತಮ ಬೆಂಬಲ ನೀಡಿದರು.

ನಾಯಕನ ವ್ಯರ್ಥ ಹೋರಾಟ
ನೆದರ್ಲೆಂಡ್ಸ್‌ನ ಆರಂಭಿಕರಿಬ್ಬರನ್ನೂ ಶೂನ್ಯಕ್ಕೆ ಕಳುಹಿಸಿದ ಶ್ರೀಲಂಕಾ ಭರ್ಜ ರಿಯಾಗಿಯೇ ತಿರುಗೇಟು ನೀಡಿತು. ಆದರೆ ನಾಯಕ ಸ್ಕಾಟ್‌ ಎಡ್ವರ್ಡ್ಸ್‌, ಮಧ್ಯಮ ಕ್ರಮಾಂಕದ ಆಟಗಾರರಾದ ಬಾಸ್‌ ಡಿ ಲೀಡ್‌ ಮತ್ತು ವೆಸ್ಲಿ ಬರೇಸಿ ಲಂಕಾ ಬೌಲರ್‌ಗಳ ಮೇಲೆ ಮುಗಿಬಿದ್ದರು. ನೆದರ್ಲೆಂಡ್ಸ್‌ ಗೆಲುವಿ ನತ್ತ ಮುನ್ನುಗ್ಗಿ ಬಂತು. ಆದರೆ ಕೊನೆಯಲ್ಲಿ ನಾಯಕನ ಬೆಂಬಲಕ್ಕೆ ಯಾರೂ ಲಭಿಸಲಿಲ್ಲ.

ಸ್ಕಾಟ್‌ ಎಡ್ವರ್ಡ್ಸ್‌ 67 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಬರೇಸಿ 52 ಮತ್ತು ಡಿ ಲೀಡ್‌ 41 ರನ್‌ ಮಾಡಿದರು.

ಲಂಕಾ ಪರ ಮಹೀಶ್‌ ತೀಕ್ಷಣ 3, ವನಿಂದು ಹಸರಂಗ 2 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-47.4 ಓವರ್‌ಗಳಲ್ಲಿ 213 (ಧನಂಜಯ 93, ಕರುಣಾರತ್ನೆ 33, ತೀಕ್ಷಣ 28, ಹಸರಂಗ 20, ವಾನ್‌ ಬೀಕ್‌ 26ಕ್ಕೆ 3, ಡಿ ಲೀಡ್‌ 42ಕ್ಕೆ 3, ಶಕಿಬ್‌ ಜುಲ್ಫಿಕರ್‌ 48ಕ್ಕೆ 2). ನೆದರ್ಲೆಂಡ್ಸ್‌-40 ಓವರ್‌ಗಳಲ್ಲಿ 192 (ಎಡ್ವರ್ಡ್ಸ್‌ 67, ಬರೇಸಿ 52, ಡಿ ಲೀಡ್‌ 41, ತೀಕ್ಷಣ 31ಕ್ಕೆ 3, ಹಸರಂಗ 53ಕ್ಕೆ 2).
ಪಂದ್ಯಶ್ರೇಷ್ಠ: ಧನಂಜಯ ಡಿ ಸಿಲ್ವ.

ಟಾಪ್ ನ್ಯೂಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

28

T20: ಬಾಂಗ್ಲಾ ವಿರುದ್ಧ 7 ವಿಕೆಟ್‌ ಜಯ: ಭಾರತದ ವನಿತೆಯರ ಸರಣಿ ವಿಕ್ರಮ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.