ಡೆಂಗ್ಯೂ: ಐವರು ಆಸ್ಪತ್ರೆಗೆ
Team Udayavani, Jun 20, 2020, 9:43 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಡೆಂಗ್ಯೂದಿಂದ ಬಳಲುತ್ತಿರುವ ಐದು ಮಂದಿ ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಳಂಗರೆ, ಅಮೈ, ವಿದ್ಯಾನಗರದ ತಲಾ ಒಬ್ಬರು ಹಾಗೂ ಅಣಂಗೂರಿನ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ವರದಿಂದ ಮಹಿಳೆ ಸಾವು
ಪುತ್ತೂರು: ಜ್ವರದಿಂದ ಬಳಲುತ್ತಿದ್ದ ಅರಿಯಡ್ಕ ವಿವಾಹಿತ ಮಹಿಳೆ ಗುರುವಾರ ತಡರಾತ್ರಿ ಮೃತಪಟ್ಟ ಘಟನೆ ಮಂಗಳೂರಿನ ಆಸ್ಪತ್ರೆಯಲ್ಲಿ ಸಂಭವಿಸಿದೆ. ಈ ಹಿಂದೆ ಅವರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಆರೋಗ್ಯ ಇಲಾಖೆ ಇದನ್ನು ನಿರಾಕರಿಸಿದೆ.
ಅರಿಯಡ್ಕ ನಿವಾಸಿ ನಜೀರ್ ಅವರ ಪತ್ನಿ ನಸೀಮಾ (32) ಮೃತಪಟ್ಟ ಮಹಿಳೆ. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು ಪುತ್ತೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಪತಿ, ಮೂವರು ಪುತ್ರರನ್ನು ಅಗಲಿದ್ದಾರೆ.
ಮಹಿಳೆ ಡೆಂಗ್ಯೂ ಜ್ವರದಿಂದ ಮೃತಪಟ್ಟಿಲ್ಲ. ಈ ಬಗ್ಗೆ ಅವರ ಚಿಕಿತ್ಸೆ ಪಡೆದ ಆಸ್ಪತ್ರೆ ವರದಿ ತಿಳಿಸಿದೆ. ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಾಲೂಕು ಆರೋಗ್ಯಧಿಕಾರಿ ಡಾ| ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.