Lok Sabha Election 2024: ಭಾರತ ಅತೀ ದೊಡ್ಡ 3ನೇ ಆರ್ಥಿಕ ಶಕ್ತಿ: ಸಚಿವೆ ಸ್ಮೃತಿ ಇರಾನಿ

ಅಮೃತ ಸ್ಟೇಶನ್‌ ಯೋಜನೆಯಲ್ಲಿ ಕಾಸರಗೋಡು ರೈಲು ನಿಲ್ದಾಣ ಅಭಿವೃದ್ಧಿ ಸಾಧ್ಯವಾಯಿತು

Team Udayavani, Apr 5, 2024, 11:16 AM IST

Lok Sabha Election 2024: ಭಾರತ ಅತೀ ದೊಡ್ಡ 3ನೇ ಆರ್ಥಿಕ ಶಕ್ತಿ: ಸಚಿವೆ ಸ್ಮೃತಿ ಇರಾನಿ

ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ವಿಶ್ವದ ಅತೀ ದೊಡ್ಡ ಮೂರನೇ ಆರ್ಥಿಕ ಶಕ್ತಿಯಾಗಲಿದೆ ಎಂದು ಕೇಂದ್ರ ಮಹಿಳಾ ಶಿಶು ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಅವರು ಕಾಂಞಂಗಾಡ್‌ನ‌ಲ್ಲಿ ಎನ್‌ಡಿಎ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮೋದಿಗೆ ಸವಾಲೊಡ್ಡುವ ಜನರಿಗೆ ಅವರ ನೇತಾರ ಯಾರು, ಅವರ ಕ್ರಿಯಾ ಯೋಜನೆ ಯಾವುದು ಎಂದು ಪ್ರಶ್ನಿಸಿದರೆ ಉತ್ತರವಿಲ್ಲ. ಕೇಂದ್ರದಲ್ಲಿ
ನರೇಂದ್ರ ಮೋದಿ ಸಹಕಾರಿ ಇಲಾಖೆ ಸಚಿವಾಲಯ ರಚಿಸಿದಾಗ ಕೇರಳದಲ್ಲಿ ಸಹಕಾರಿ ಬ್ಯಾಂಕ್‌ ಗಳನ್ನು ಕೊಳ್ಳೆ ಹೊಡೆಯಲಾಯಿತು.

ಕರುವನ್ನೂರಿನಲ್ಲಿ ಸಿಪಿಎಂ, ಕಂಡ್ಲದಲ್ಲಿ ಸಿಪಿಐ, ಮಲಪ್ಪುರಂನಲ್ಲಿ ಲೀಗ್‌, ವಯನಾಡಿನಲ್ಲಿ ಕಾಂಗ್ರೆಸ್‌ ಕೊಳ್ಳೆ ಹೊಡೆಯಿತು. ಸಹಕಾರಿ ಬ್ಯಾಂಕ್‌ ಕೊಳ್ಳೆಯಿಂದ ಹಿಡಿದು ಚಿನ್ನ ಕಳ್ಳ ಸಾಗಾಟದ ವರೆಗಿನ ಎಲ್ಲ ಹಗರಣಗಳ ಒಕ್ಕೂಟವೇ ಐಎನ್‌ಡಿಐಎ ಮೈತ್ರಿಕೂಟ ಎಂದು ಆರೋಪಿಸಿದರು.

ಮತ್ಸ್ಯ ಸಂಪದ ಯೋಜನೆ ಪ್ರಕಾರ 400 ಕೋಟಿ ರೂ. ಮಂಜೂರು ಮಾಡಿದ್ದರೂ ಕೇರಳ ಕೇವಲ 72 ಕೋಟಿ ರೂ. ವೆಚ್ಚ ಮಾಡಿತು. 50 ವರ್ಷ ಪ್ರತಿನಿಧಿಸಿದ ಕಾಂಗ್ರೆಸ್‌ ಅಮೇಠಿಯಲ್ಲಿ ಯಾವುದೇ ಅಭಿವೃದ್ಧಿ ಸಾಧಿಸಿಲ್ಲ. ನಾನು ಸಂಸದೆಯಾದ ಬಳಿಕ ಕಳೆದ ಐದು ವರ್ಷದಲ್ಲಿ 4 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಯಿತು. ರೈಲು ನಿಲ್ದಾಣ ಅಭಿ ವೃದ್ಧಿಪಡಿಸಲಾಯಿತು . ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಅಮೃತ ಸ್ಟೇಶನ್‌ ಯೋಜನೆಯಲ್ಲಿ ಕಾಸರಗೋಡು ರೈಲು ನಿಲ್ದಾಣ ಅಭಿವೃದ್ಧಿ ಸಾಧ್ಯವಾಯಿತು ಎಂದರು.

ಎನ್‌ಡಿಎ ಚುನಾವಣ ಸಮಿತಿ ಚೇರ್‌ಮನ್‌ ಎಂ. ನಾರಾಯಣ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್‌, ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್‌. ಅಶ್ವಿ‌ನಿ ಮಾತನಾಡಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್‌, ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Mamatha

West Bengal: ಬಾಂಗ್ಲಾ ಜೊತೆ ನೀರು ಹಂಚಿಕೆ ಮಾತುಕತೆಗೆ ಸಿಎಂ ಮಮತಾ ಆಕ್ಷೇಪ

Rabkavi-Banhatti; ಉದ್ಘಾಟನೆಗೆ ಕಾಯುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

Rabkavi-Banhatti; ಉದ್ಘಾಟನೆಗೆ ಕಾಯುತ್ತಿರುವ ಬಸ್ ನಿಲ್ದಾಣ: ಪ್ರಯಾಣಿಕರ ಪರದಾಟ

1-dd

Tulu Nadu ದೈವ ದೇವರ ಹೆಸರಿನಲ್ಲಿ ಬ್ರಿಜೇಶ್ ಚೌಟ ಪ್ರಮಾಣ ವಚನ ಸ್ವೀಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tankar

ಆನಂದಪುರ – ಶಿಕಾರಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಮೃತ್ಯು

writer Kakkappadi Shankaranarayan Bhat passes away

Kasaragod; ಹಾಸ್ಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್‌ ನಿಧನ

8

Madikeri: ಕಾಫಿ ತೋಟದ ಕೆರೆಗೆ ಬಿದ್ದು ಕಾಡಾನೆ ಸಾವು

Kasaragod ಪತ್ನಿಯ ಕೊಂದಾತನಿಗೆ ಜೀವಾವಧಿ ಸಜೆ

Kasaragod ಪತ್ನಿಯ ಕೊಂದಾತನಿಗೆ ಜೀವಾವಧಿ ಸಜೆ

Karadka Society Fraud Case: ಆರೋಪಿ ಮನೆಯಿಂದ ಡೈರಿ ಪತ್ತೆ

Karadka Society Fraud Case: ಆರೋಪಿ ಮನೆಯಿಂದ ಡೈರಿ ಪತ್ತೆ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

Kunigal ಹಾಸ್ಟೆಲ್‌ಗಳಿಗೆ ದಿಢೀರ್​ ಭೇಟಿ ಕೊಟ್ಟ ತಹಶೀಲ್ದಾರ್

1–ncxcx.

Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು

1-BP

BJP vs BJP; ವಿಜಯೇಂದ್ರ ವಿರುದ್ಧ ಕಿಡಿ ಕಾರಿದ ಹರಿಹರ ಶಾಸಕ ಬಿ.ಪಿ.ಹರೀಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.