ಬೇಕಲಕೋಟೆಯಲ್ಲಿಲ್ಲ ಶೌಚಾಲಯ:ವಿದ್ಯಾರ್ಥಿನಿ ಮನವಿಗೆ ಪ್ರಧಾನಿ ಸ್ಪಂದನೆ!

Team Udayavani, May 31, 2017, 1:45 PM IST

6988.jpg

ಮುಳ್ಳೇರಿಯ : ಕೇರಳದ ಪ್ರಸಿದ್ಧ ಪ್ರವಾಸಿ ಕೇಂದ್ರವಾದ, ಐತಿಹಾಸಿಕ ಸ್ಮಾರಕ ಬೇಕಲಕೋಟೆಯಲ್ಲಿ ಶೌಚಾಲಯವಿಲ್ಲದೇ ಸಂಕಷ್ಟಗೀಡಾದ ವಿದ್ಯಾರ್ಥಿನಿ ಪತ್ರಮುಖೇನ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಿದ್ದು ಪರಿಣಾಮವಾಗಿ ಪುರಾತತ್ವ ಇಲಾಖೆಯು 1ತಿಂಗಳೊಳಗೆ ಶೌಚಾಲಯ ನಿರ್ಮಿಸುವಂತೆ ಪ್ರಧಾನಿಯವರು ಅದೇಶವನ್ನಿತ್ತಿದ್ದಾರೆ. 

ಬೋವಿಕ್ಕಾನ ಬಿ.ಎ.ಆರ್‌.ಎಚ್‌.ಎಸ್‌.ಎಸ್‌ ಪ್ಲಸ್‌ ಟು ವಿದ್ಯಾರ್ಥಿನಿ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಸಮೀಪ ನಿವಾಸಿ ಕಾವ್ಯ ಉಣ್ಣಿ ಎಂ ದೂರು ನೀಡಿದ ಪುಟಾಣಿ. 

ಎಪ್ರೀಲ್‌ 30ನೇ ತಾರೀಕಿಗೆ ಬೇಕಲಕೋಟೆಗೆ ಕುಟುಂಬಿಕರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಬೇಕಲಕೋಟೆಯಲ್ಲಿ ಶೌಚಾಲಯವಿಲ್ಲದೇ ಸಂಕಷ್ಟಗೀಡಗಿದ್ದಳು. ಜತೆಗಿದ್ದ ಹೆತ್ತವರು ಅಲ್ಲಿದ್ದ ಸಿಬಂದ್ದಿಯವರಲ್ಲಿ ವಿಚಾರಿಸಿದಾಗ ಶೌಚಾಲಯದ ವ್ಯವಸ್ಥೆಯಿಲ್ಲ ಎಂಬ ಉತ್ತರ ಬಂದಿತ್ತು. ತೊಂದರೆಗೀಡಾಗ ಬಾಲಕಿಯು ಮನೆಗೆ ತಲುಪಿ ಕೂಡಲೇ ಪ್ರಧಾನಿಯವರಿಗೆ ಪತ್ರಮುಖೇನ ಕಾವ್ಯಉಣ್ಣಿ ಈ ಬಗ್ಗೆ ತುರ್ತು ಪರಿಹಾರಕ್ಕಾಗಿ ಪ್ರಧಾನಿಯವರಿಗೆ ಮನವಿ ಸಲ್ಲಿಸಿದ್ದಳು. ಸುಮಾರು 6 ಎಕ್ರೆಯಷ್ಟು ವ್ಯಾಪ್ತಿಯಲ್ಲಿಯಲ್ಲಿರುವ ಬೇಕಲಕೋಟೆಯ ವೀಕ್ಷಣೆಗೆ 15ರೂಪಾಯಿ ಪ್ರವೇಶಶುಲ್ಕವನ್ನು ವಸೂಲಿಮಾಡಲಾಗುತ್ತಿದೆ. ಆದರೂ ಮೂಲಭೂತ ಸೌಕರ್ಯಗಳಿಲ್ಲದೇ ಪ್ರವಾಸಿಗರು ಪ್ರತಿದಿನ ಪರದಾಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರಮೋದಿಯವರಿಗೆ ಪತ್ರಮುಖೇನ ಗಮನಕ್ಕೆ ತಂದಿದ್ದಾಳೆ. ಈ ಬಗ್ಗೆ ತನಿಖೆ ನಡೆಸಿದ ಪ್ರಧಾನಿ ಕಛೇರಿ 1ತಿಂಗಳೊಳಗೆ ಶೌಚಾಲಯ ನಿರ್ಮಿಸುವಂತೆ ಪುರಾತತ್ವ ಇಲಾಖೆಯ ಅಧೀಕ್ಷಕರಿಗೆ ಸುತ್ತೋಲೆ ಕಳುಹಿಸಿದ್ದು, ಮುಂದಿನ ಕ್ರಮ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಹಾಗೂ ಪರಿಹಾರ ಕ್ರಮದ ಪ್ರತಿಯೊಂದನ್ನು ದೂರುದಾತೆಗೂ ಕಳುಹಿಸುವಂತೆ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ತ್ರಿಶೂರು ಪುರಾತತ್ವ ಇಲಾಖೆಯ ಪ್ರಭಾರ ಅಧೀಕ್ಷಕರ  ಕಚೇರಿಯಿಂದ ಕ್ರಮಕೈಗೊಳ್ಳುವ ಬಗ್ಗೆ ದೂರುದಾತೆ ಕಾವ್ಯಉಣ್ಣಿಗೆ ಮಂಗಳವಾರದಂದು ಪತ್ರವು ಲಭಿಸಿದೆ. 

ಓದಿನಲ್ಲೂ ಮುಂದಿರುವ ಈಕೆ ಕಳೆದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್‌ ಗಳಿಸಿರುವ ಈಕೆ ಇದೀಗ ಪ್ರಕಟವಾದ ಪ್ಲಸ್‌ ಟು ಫಲಿತಾಂಶದಲ್ಲೂ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್‌ ಪಡೆದಿದ್ದಾಳೆ. ಮುಳಿಯಾರು ಉಣ್ಣಿಕೃಷ್ಣ ಮತ್ತು ಜಯಶ್ರೀ ದಂಪತಿಗಳ ಪುತ್ರಿ. ಸಹೋದರ ರಾಹುಲ್‌ಉಣ್ಣಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ

ಅವ್ಯವಸ್ಥೆಯ ಬಗ್ಗೆ ಮನವಿ, ದೂರು ನೀಡಿದ್ದರೂ ಈ ತನಕ ಯಾವುದೇ ಸರಕಾರಗಳಾದರೂ ಮೌನ ವಹಿಸಿದ್ದೇ ಹೆಚ್ಚು. ಆದರೆ ವಿದ್ಯಾರ್ಥಿನಿಯೋರ್ವಳ ಪತ್ರಮುಖೇನ ಮನವಿಗೆ ಕೂಡಲೇ ಸ್ಪಂದಿಸಿದ ಮೊದಲ ಪ್ರಧಾನಿ. ನಿಜಕ್ಕೂ ಪ್ರಧಾನ ಸೇವಕರು. ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. 
ಕಾವ್ಯಶ್ರೀ ಉಣ್ಣಿ ಎಂ

ಐತಿಹಾಸಿಕ ಸ್ಮಾರಕ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುವುದು  ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಸಾಂಸ್ಕೃತಿಕ ಕೇರಳಕ್ಕೆ ಕಪ್ಪುಚುಕ್ಕೆಯಾಗಿದ್ದನ್ನು ಮರೆಸಲು ಯತ್ನಿಸಿದ ವಿದ್ಯಾರ್ಥಿನಿಯ ಶ್ರಮ ಶ್ಲಾಘನೀಯ. 

ವಾಮನ ಆಚಾರ್ಯ
ಕಾರ್ಯಾಧ್ಯಕ್ಷರು, ಹಿಂದೂ ಐಕ್ಯವೇದಿ ಕಾಸರಗೋಡು

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.