ಮಲ್ಲಿಕಟ್ಟೆ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ಸ್ಥಗಿತ

Team Udayavani, Oct 11, 2022, 4:42 PM IST

20

ಮಹಾನಗರ: ಹಲವು ತಿಂಗಳುಗಳಿಂದ ಪಾಳು ಬಿದ್ದಿದ್ದ ಮಲ್ಲಿಕಟ್ಟೆ ಪಾರ್ಕ್‌ನ ಅಭಿವೃದ್ಧಿ ಕಾಮಗಾರಿ ಸದ್ಯ ಅರ್ಧಕ್ಕೆ ನಿಂತಿದ್ದು, ಪರಿಣಾಮ ಪಾರ್ಕ್‌ ಇದೀಗ ನಿರಾಶ್ರಿತರ ತಾಣವಾಗಿ ಮಾರ್ಪಾಡಾಗಿದೆ.

ಕೆಲವು ತಿಂಗಳ ಹಿಂದೆ ಪಾರ್ಕ್‌ನ ಮೊದಲನೇ ಹಂತದ ಕಾಮಗಾರಿ ಆರಂಭಗೊಂಡಿತ್ತು. ಸದ್ಯ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಪಾರ್ಕ್‌ನ ಸುತ್ತಲೂ ಆವರಣ ಗೋಡೆ ನಿರ್ಮಾಣ ವಾಗಿದ್ದರೂ ನಾಲ್ಕೂ ಕಡೆಯಿಂದ ಪಾರ್ಕ್‌ ಪ್ರವೇಶಿಸಬಹುದು. ಇದೇ ಕಾರಣಕ್ಕೆ ಈ ಪಾರ್ಕ್‌ ಕುಡುಕರ ತಾಣವಾಗುತ್ತಿದೆ. ಪಾರ್ಕ್‌ನ ಒಳಗಡೆ ನಿರ್ಲಕ್ಷ್ಯ ಕ್ಕೊಳಗಾಗಿದ್ದು, ಪ್ಲಾಸ್ಟಿಕ್‌, ಹಳಸಿದ ಆಹಾರಗಳು, ಎಲೆಗಳು ಎಲ್ಲೆಡೆ ಬಿದ್ದಿದೆ.

ಹಲವು ವರ್ಷಗಳಿಂದ ನಿರ್ಲಕ್ಷ್ಯ

ಈ ಪಾರ್ಕ್‌ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಪಾರ್ಕ್‌ ಒಳಗೆ ಗ್ರಂಥಾಲಯವಿದ್ದು, ಆಕರ್ಷಣೆ ಪಡೆದಿತ್ತು. ಆದರೆ ಇಲ್ಲಿನ ಪರಿಸ್ಥಿತಿಯಿಂದಾಗಿ ಸಾರ್ವ ಜನಿಕರು ಗ್ರಂಥಾಲಯ ಪ್ರವೇಶಕ್ಕೆ ತೊಂದರೆಯಾಗಿದೆ. ಸುತ್ತಮುತ್ತಲೂ ಗಿಡ-ಗಂಟಿ ಬೆಳೆದಿದ್ದು, ಕಲ್ಲು ಬೆಂಚುಗಳು ಮುರಿದಿದೆ. ಬೀದಿ ನಾಯಿಗಳಿಗೂ ಈ ಪಾರ್ಕ್‌ ಆವಾಸ ಸ್ಥಾನವಾಗಿದೆ. ಮಲ್ಲಿಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಪಾರ್ಕ್‌ ಇಲ್ಲದ ಕಾರಣ, ಮಲ್ಲಿಕಟ್ಟೆ ಪಾರ್ಕ್‌ ಅಭಿವೃದ್ಧಿಗೊಂಡರೆ ಸುತ್ತಲಿನ ಮಂದಿಯ ವಾಯುವಿಹಾರಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಈ ಪಾರ್ಕ್‌ನ ಮೊದಲನೇ ಹಂತದ ಪಾರ್ಕ್‌ ಕಾಮಗಾರಿ ಪಾಲಿಕೆಯ 14ನೇ ಹಣಕಾಸು ಯೋಜನೆಯಲ್ಲಿ ಈ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 14.30 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ಗೆ ಆವರಣ ಸಹಿತ ಪಾರ್ಕ್‌ ಒಳಾಂಗಣದ ಕೆಲವೊಂದು ಕಾಮಗಾರಿ ನಡೆದಿದೆ. ಈ ಹಿಂದಿನ ಯೋಜನೆಯ ಪ್ರಕಾರ ಎರಡನೇ ಹಂತದ ಕಾಮಗಾರಿಯಲ್ಲಿ ಪಾರ್ಕ್‌ನೊಳಗೆ ವಿಶೇಷವಾಗಿ ಆಕ್ಯುಪಂಕ್ಚರ್‌ ಟ್ರ್ಯಾಕ್‌ ನಿರ್ಮಾಣಗೊಳ್ಳಬೇಕಿದೆ. ಹುಲ್ಲುಹಾಸು, ಕುಳಿತುಕೊಳ್ಳಲು ಆಸನ, ಸಿಸಿ ಕೆಮರಾ ಸಹಿತ ಮೂಲ ಸೌಕರ್ಯಗಳ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ. ಈ ಪಾರ್ಕ್‌ನೊಳಗೆ ಗ್ರಂಥಾಲಯವಿದ್ದು, ಅದಕ್ಕೆ ಹೊಸ ಸ್ಪರ್ಶ ನೀಡಲು ಚಿಂತನೆ ನಡೆಯುತ್ತಿದೆ.

ಟಾಪ್ ನ್ಯೂಸ್

13

Accused Arrest: ಶಾಲಾ ಆವರಣದಲ್ಲಿ ಕೊಲೆ ಪ್ರಕರಣ; ಆರೋಪಿ ಬಂಧನ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವೇಶ ನಿಷೇಧ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

1,312 ಮಕ್ಕಳಿಗೆ 1 ಕೋ. ರೂ ಮೊತ್ತದ ಚೆಕ್‌ ವಿತರಣೆ

1,312 ಮಕ್ಕಳಿಗೆ 1 ಕೋ. ರೂ ಮೊತ್ತದ ಚೆಕ್‌ ವಿತರಣೆ

Kannada ಮಾತನಾಡಲು ಬಾರದ ಶಿಕ್ಷಣ ಸಚಿವರು : ಭೋಜೇಗೌಡ ಟೀಕೆ

Kannada ಮಾತನಾಡಲು ಬಾರದ ಶಿಕ್ಷಣ ಸಚಿವರು: ಭೋಜೇಗೌಡ ಟೀಕೆ

mಕರಾವಳಿಯಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ; ಮಸೀದಿಗಳಲ್ಲಿ ಪ್ರಾರ್ಥನೆ

ಕರಾವಳಿಯಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ

Rain ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Rain ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

13

Accused Arrest: ಶಾಲಾ ಆವರಣದಲ್ಲಿ ಕೊಲೆ ಪ್ರಕರಣ; ಆರೋಪಿ ಬಂಧನ

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

Udayavani Campaign: ಈ ಊರಿಗೆ ದಿನಕ್ಕೆ 7 ವಿಮಾನ ಬರ್ತದೆ, ಆದ್ರೆ ಬಸ್‌ ಎರಡೇ!

12

Online ಗೇಮ್‌ ಚಟಕ್ಕೆ ಬಿಎಸ್‌ಸಿ ಮೊದಲ ವರ್ಷದ ವಿದ್ಯಾರ್ಥಿನಿ ಬಲಿ

11-

Yadagiri: ಬಾಲ್ಯ ವಿವಾಹ ವಿರುದ್ಧ ಹೋರಾಡೋಣ: ಶಾಸಕ ಕಂದಕೂರು ಕರೆ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವೇಶ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.