ಮಂಗಳೂರು ವಿಮಾನನಿಲ್ದಾಣ: 35.52 ಲಕ್ಷ ರೂ. ಮೌಲ್ಯದ ಚಿನ್ನ ವಶ
Team Udayavani, Apr 24, 2019, 6:00 AM IST
ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಇಬ್ಬರು ಪ್ರಯಾಣಿಕರಿಂದ ಸುಮಾರು 35.52 ಲಕ್ಷ ರೂ. ಮೌಲ್ಯದ 1.10 ಕೆ.ಜಿ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ರವಿವಾರ ವಶ ಪಡಿಸಿಕೊಂಡಿದ್ದಾರೆ.
ಏರ್ಇಂಡಿಯಾ ಏಕ್ಸ್ಪ್ರೆಸ್ ನಲ್ಲಿ ದೋಹಾದಿಂದ ಆಗಮಿಸಿದ್ದ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಓರ್ವನ ಬಳಿ ಸುಮಾರು 14.81ಲಕ್ಷ ರೂ. ಮೌಲ್ಯದ 462.97 ಗ್ರಾಂ ಅಕ್ರಮ ಚಿನ್ನ ಪತ್ತೆಯಾಯಿತು. ಇನ್ನೋರ್ವ ಪ್ರಯಾಣಿಕನ ಬಳಿ 20.51 ಲಕ್ಷ ರೂ. ಮೌಲ್ಯದ 641 ಗ್ರಾಂ ಅಕ್ರಮ ಚಿನ್ನ ಪತ್ತೆಯಾಯಿತು. ಆರೋಪಿಗಳು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದನಾಳದಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.