2 ವರ್ಷಗಳಲ್ಲಿ 22 ಸಾವಿರ ನೋಂದಣಿ

ಉಭಯ ತಾಲೂಕಿಗೆ ಅತ್ಯಧಿಕ ವಾಹನಗಳ ಲಗ್ಗೆ

Team Udayavani, Jul 27, 2019, 5:00 AM IST

v-25

ಸುಳ್ಯ: ಉಭಯ ತಾಲೂಕಿಗೆ ವರ್ಷದಿಂದ ವರ್ಷಕ್ಕೆ ವಾಹನಗಳು ಹೈಸ್ಪೀಡ್‌ನ‌ಲ್ಲಿ ನುಗ್ಗುತ್ತಿವೆ.
ಸಾರಿಗೆ ಇಲಾಖೆಯಲ್ಲಿ ಎರಡು ವರ್ಷಗಳಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ಒಳಪಟ್ಟು 22 ಸಾವಿರಕ್ಕೂ ಹೆಚ್ಚು ವಾಹನ ನೋಂದಣಿ ಆಗಿದೆ. ಅಂದರೆ ತಿಂಗಳೊಂದಕ್ಕೆ ಸರಾಸರಿ 900ಕ್ಕೂ ಅಧಿಕ ವಾಹನಗಳು ಸೇರ್ಪಡೆಗೊಂಡಿವೆ.

ನೋಂದಣಿ ಏರಿಕೆ
2017ರಿಂದ 2019ರ ತನಕ ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿ ದ್ವಿಚಕ್ರ ಮತ್ತು ಎಲ್‌ಎಂವಿ ವಾಹನ ಸೇರಿ 1,25,712 ವಾಹನಗಳು ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ನೋಂದಣಿಗೊಂಡಿವೆ. ಎರಡು ವರ್ಷಗಳಲ್ಲಿ ಎರಡು ತಾಲೂಕುಗಳಲ್ಲಿ 18,628 ದ್ವಿಚಕ್ರ ವಾಹನ, 4,123 ಎಲ್‌ಎಂವಿ ಕಾರು ವಾಹನಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಅಂದರೆ ಎರಡು ವಿಭಾಗದಲ್ಲಿ ಒಟ್ಟು 22,751 ಹೊಸ ವಾಹನಗಳು ನೋಂದಣಿಯಾಗಿವೆ.

2017ರಲ್ಲಿ ಪುತ್ತೂರಿನಲ್ಲಿ 44,884 ದ್ವಿಚಕ್ರ ವಾಹನಗಳಿದ್ದರೆ, 2018ಕ್ಕೆ 50,268ಕ್ಕೆ ಏರಿಕೆ ಕಂಡಿತ್ತು. 2019ರ ಜುಲೈ ತನಕ 56,076 ತನಕ ನೋಂದಣಿ ಆಗಿದೆ. ಎಲ್‌ಎಂವಿ ಮೋಟಾರು ವಾಹನದ ಅಂಕಿ ಅಂಶ ಗಮನಿಸಿದರೆ, 2017ರಲ್ಲಿ 11,344, 2018ರಲ್ಲಿ 12,500, 2019ರಲ್ಲಿ 13,840ಕ್ಕೆ ಏರಿಕೆ ಕಂಡಿದೆ. ಸುಳ್ಯದಲ್ಲಿ 2017ರಲ್ಲಿ 37,534 ಇದ್ದ ದ್ವಿಚಕ್ರ ವಾಹನ 2018ರಲ್ಲಿ 42,072, 2019ರಲ್ಲಿ 44,970 ರಷ್ಟಕ್ಕೆ ತಲುಪಿದೆ. ಎಲ್‌ಎಂವಿ ವಾಹನ 2017ರಲ್ಲಿ 9,199, 2018ರಲ್ಲಿ 10,136, 2019ರಲ್ಲಿ 10,826 ರಷ್ಟು ಏರಿಕೆ ಕಂಡಿದೆ.

ನಗರಕ್ಕೆ ಸವಾಲು!
ಕಳೆದ ಹತ್ತು ವರ್ಷಗಳ‌ಲ್ಲಿ ವಾಹನ ಖರೀದಿಸುವವರ ಪ್ರಮಾಣ ಶೇ. 85ರಷ್ಟು ಅಧಿಕವಾಗಿದೆ ಎನ್ನುತ್ತಿದೆ ಸಮೀಕ್ಷೆ. 2009-10ಕ್ಕೆ ಹೋಲಿಸಿದರೆ ವಾಹನ ಬಳಕೆ ಮಾಡುವವರ ಸಂಖ್ಯೆ ಮಧ್ಯ ಪ್ರಮಾಣದಲ್ಲಿತ್ತು.

ಆದರೆ 2018-19ರಲ್ಲಿ ಶೇ. 87ಕ್ಕೂ ಅಧಿಕ ಮನೆಗಳಲ್ಲಿ ಕನಿಷ್ಠ ಒಂದು ವಾಹನ ವಾದರೂ ಇದೆ. ಮಂಗಳೂರು, ಬೆಂಗಳೂರು ಮಹಾನಗರದ ವಾಹನ ದಟ್ಟಣೆ ಗ್ರಾಮಾಂತರ ತಾಲೂಕಿಗೂ ವಿಸ್ತರಿತ ವಾಗಿದೆ ಅನ್ನುವುದನ್ನು ಈ ಅಂಶ ದೃಢೀಕರಿ ಸುತ್ತಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಮಹಾನಗರಗಳ ಜನರು ಎದುರಿಸುತ್ತಿರುವ ಶುದ್ಧ ಗಾಳಿ ಕೊರತೆ, ಟ್ರಾಫಿಕ್‌ ಸಮಸ್ಯೆ ತಾ| ಕೇಂದ್ರವನ್ನು ಕಾಡುವ ಆತಂಕವು ಜತೆಗಿದೆ.

ಯುವ ಸಮುದಾಯ ಅಧಿಕ!
ವಾಹನ ಖರೀದಿಸುತ್ತಿರುವವರಲ್ಲಿ 18 ರಿಂದ 35ರ ವಯೋಮಾನದವರೆ ಹೆಚ್ಚು. ದ್ವಿಚಕ್ರ, ಕಾರು ಖರೀದಿ ಅಧಿಕ. ಇದನ್ನು ನೋಂದಣಿ ಅಂಕಿ-ಅಂಶ ಸ್ಪಷ್ಟಪಡಿಸುತ್ತದೆ. ವಾಹನ ಅಪಘಾತ ಪ್ರಕರಣದಲ್ಲಿ ಅತೀ ಹೆಚ್ಚು ಅವಘಡಗಳಿಗೆ ಪ್ರಾಣ ಹಾನಿ ಉಂಟಾದ ವರಲ್ಲಿ ಯುವ ಸಮುದಾ ಯದವರೇ ಜಾಸ್ತಿ. ಹೆಲ್ಮೆಟ್‌ ರಹಿತ, ಅತಿ ವೇಗ ಚಾಲನೆ ಕೂಡ ಇದಕ್ಕೆ ಕಾರಣ ಅನ್ನುತ್ತಿದೆ ಪೊಲೀಸ್‌ ಇಲಾಖೆ ವರದಿ.

 ಪರಿಸರ ಮಾಲಿನ್ಯ ತಡೆಗೆ ಕ್ರಮ
ಮೋಟಾರು ವಾಹನಗಳ ಬಳಕೆಯಿಂದಾಗುವ ವಾಯು ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಬಿಎಸ್‌4ನಿಂದ ಮೇಲ್ಪಟ್ಟ ವಾಹನಗಳನ್ನು ಮಾತ್ರ ನೋಂದಣಿ ಮಾಡಬೇಕು ಎನ್ನುವ ನ್ಯಾಯಾಲಯದ ಆದೇಶ ಜಾರಿಯಲ್ಲಿದೆ. ಇದು ವಾಯುಮಾಲಿನ್ಯ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಮುಂದೆ ಇನ್ನಷ್ಟು ಕಡಿಮೆ ಪ್ರಮಾಣದಲ್ಲಿ ಇಂಗಾಲಾಮ್ಲ ಹೊರ ಸೂಸಬಲ್ಲ ಬಿಎಸ್‌5 ವಾಹನ ಬಂದ ಬಳಿಕ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಲಿದೆ.
ಆನಂದ ಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.