Bantwal ಬಿ.ಸಿ. ರೋಡಿನ ಗೂಡಿನಬಳಿ: ಗುಡ್ಡಕ್ಕೆ ಬೆಂಕಿ
Team Udayavani, Mar 9, 2024, 12:27 AM IST
ಬಂಟ್ವಾಳ: ಬಿ.ಸಿ. ರೋಡಿನ ಗೂಡಿನಬಳಿಯ ಚಿಕ್ಕಯಮಠ ಭಾಗದಲ್ಲಿ ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದು ಸಣ್ಣ ಪುಟ್ಟ ಗಿಡ ಮರಗಳ ಜತೆಗೆ ಹುಲ್ಲು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ನಡೆದಿದೆ.
ಬೆಂಕಿ ಬಿದ್ದಿರುವ ಕುರಿತು ಬಂಟ್ವಾಳ ಕಂದಾಯ ಇಲಾಖೆಗೆ ಕರೆ ಬಂದಿದ್ದು, ಅವರು ನೀಡಿದ ಮಾಹಿತಿಯಂತೆ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.
ಅಗ್ನಿ ಶಾಮಕ ದಳ ಬಂಟ್ವಾಳದ ಸಹಾಯಕ ಠಾಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಸಿಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಂದಾಯ ಇಲಾಖೆಯ ಕರಿಬಸಪ್ಪ ನಾಯಕ್, ಸಿಬಂದಿ ಸದಾಶಿವ ಕೈಕಂಬ ಸಹಕರಿಸಿದರು. ಸ್ಥಳೀಯವಾಗಿ ಅನೇಕ ಮನೆಗಳಿದ್ದರೂ ಯಾವುದೇ ಹಾನಿ ಉಂಟಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ