ಕೆಲಸದ ವೇಳೆ ಕರೆಂಟ್ ಶಾಕ್: ಕೇರಳದಲ್ಲಿ ಬಂಟ್ವಾಳ ಮೂಲದ ವ್ಯಕ್ತಿ ಸಾವು
Team Udayavani, Sep 7, 2022, 7:07 PM IST
ಬಂಟ್ವಾಳ: ಕೆಲಸ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಬಂಟ್ವಾಳದ ವ್ಯಕ್ತಿಯೋರ್ವರು ಕೇರಳದ ಕಂಪೆನಿಯೊದರಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಜೀಪಮುನ್ನೂರು ಗ್ರಾಮದ ಮರ್ತಾಜೆ ನಿವಾಸಿ ವಿದ್ಯಾದರ ಕುಲಾಲ್(35) ಮೃತಪಟ್ಟ ವ್ಯಕ್ತಿ. ಅವರು ಕೇರಳದ ಖಾಸಗಿ ಎಲೆಕ್ಟ್ರಾನಿಕ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೆ.5ರಂದು ಸೋಮವಾರ ಕರ್ತವ್ಯದಲ್ಲಿರುವಾಗ ವಿದ್ಯುತ್ ಹರಿದು ಅವರು ಮೃತಪಟ್ಟ ಘಟನೆ ನಡೆದಿದೆ.
ಇದನ್ನೂ ಓದಿ: ಕಡಬ: ಮರದ ಕೊಂಬೆ ಕಡಿಯುತ್ತಿದ್ದ ವ್ಯಕ್ತಿ ವಿದ್ಯುತ್ ತಂತಿ ತಗುಲಿ ಸಾವು
ಮೂಲತ: ಬೆಳ್ಳಾರೆ ನಿವಾಸಿ ಯಾಗಿದ್ದ ಇವರು ಇತ್ತೀಚೆಗೆ ಸಜೀಪಮುನ್ನೂರು ಗ್ರಾಮದ ಮರ್ತಾಜೆ ಎಂಬಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟಿದ್ದರು.
ಕಳೆದ ಒಂದು ವರ್ಷದ ಹಿಂದೆ ಇವರಿಗೆ ವಿವಾಹವಾಗಿದ್ದು, ಪತ್ನಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಉದ್ಯೋಗದಲ್ಲಿದ್ದರು. ಪತ್ನಿ ತುಂಬು ಗರ್ಭಿಣಿಯಾಗಿದ್ದು, ಬರುವ ತಿಂಗಳು ಸೀಮಂತಕ್ಕೆ ದಿನಾಂಕ ನಿಗದಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ