ಬೆಳ್ತಂಗಡಿ: ಮಳೆಗಾಲ ಪೂರ್ವಸಿದ್ಧತೆ ಸಭೆ  

ಪ್ರಾಕೃತಿಕ ವಿಕೋಪ ತಡೆಗಟ್ಟಲು ಆಡಳಿತ ಸನ್ನದ್ಧ

Team Udayavani, May 29, 2020, 5:22 AM IST

ಬೆಳ್ತಂಗಡಿ: ಮಳೆಗಾಲ ಪೂರ್ವಸಿದ್ಧತೆ ಸಭೆ  

ಸಾಂದರ್ಭಿಕ ಚಿತ್ರ.

ಬೆಳ್ತಂಗಡಿ: ಪ್ರಾಕೃತಿಕ ವಿಕೋಪ, ನೆರೆಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ನೆರವಿನ ತಂಡ ರಚಿಸುವ ಸಲುವಾಗಿ ಮಂಗಳವಾರ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು.

ಪ್ರಮುಖ ನದಿ, ತೋಡು, ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟುಗಳ ಅವಶೇಷ ಶೇಖರಣೆ ಯಾಗಿದೆ. ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆಯಾಗುವ ದೃಷ್ಟಿಯಿಂದ ಅಗತ್ಯ ತೆರವಿಗೆ ಕ್ರಮ ವಹಿಸುವಂತೆ ವಲಯ ಅರಣ್ಯಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಹಶೀಲ್ದಾರ್‌ ಹೇಳಿದರು.

ಮಳೆಗಾಲದಲ್ಲಿ 24×7 ಕಂಟ್ರೋಲ್‌ ರೂಮ್‌ ನಿರ್ವಹಣೆ ಮಾಡಲಾಗುವುದು. ನೆರೆ ಸಂಭವಿತ ಪ್ರದೇಶಗಳು ಹಾಗೂ ಮುಳುಗಡೆ ಪ್ರದೇಶಗಳನ್ನು ಕೂಡಲೆ ಗುರುತಿಸಿ ಪಟ್ಟಿ ನೀಡುವಂತೆ ಕಂದಾಯ ನಿರೀಕ್ಷಕರಿಗೆ, ಗ್ರಾ.ಪಂ. ಪಿ.ಡಿಒಗಳಿಗೆ ತಹಶೀಲ್ದಾರ್‌ ಸೂಚಿಸಿದರು.

ಪರಿಹಾರ ಕೇಂದ್ರಗುರುತಿಸುವಿಕೆ
ನೆರೆ ಪ್ರದೇಶಗಳಿಂದ ಸಂತ್ರಸ್ತರಾದವರಿಗೆ ಪರಿಹಾರ ಕೇಂದ್ರಗಳನ್ನು ನಿರ್ಮಿಸಿ ಅವುಗಳಿಗೆ ಸಿಆರ್‌ಪಿಗಳನ್ನು ನೋಡಲ್‌ ಅಧಿಕಾರಿಗಳಾಗಿ ನೇಮಿಸಲಾಗುವುದು. ಜತೆಗೆ ಮುಳುಗಡೆ ಆಗುವ ಪ್ರದೇಶಗಳನ್ನು ಗುರುತಿಸಿ ತಂಡ ರಚಿಸಲಾಗಿದೆ. ಒಟ್ಟು ಐದು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಮೂಡುಕೋಡಿ, ನಾರವಿ ಕೆಳಗಿನ ಪೇಟೆ, ಕಲ್ಲಾಜೆ ವ್ಯಾಪ್ತಿಗೆ ಒಳಪಟ್ಟಂತೆ ವಿದ್ಯೋದಯ ಖಾಸಗಿ ಹಿ.ಪ್ರಾ.ಶಾಲೆಯನ್ನು ಗಂಜಿಕೇಂದ್ರವಾಗಿ ಗುರುತಿಸಲಾಗಿದೆ. ಇಲ್ಲಿಗೆ ಆರ್‌.ಎಫ್‌.ಒ ಪ್ರಶಾಂತ್‌ ಕುಮಾರ್‌ ಪೈ ಉಸ್ತುವರಿಯಾಗಿ ನೇಮಿಸಲಾಯಿತು.

ದಿಡುಪೆ, ನಿಡಿಗಲ್‌ ವ್ಯಾಪ್ತಿಗೊಳಪಟ್ಟಂತೆ ಮಿತ್ತಬಾಗಿಲು ದ.ಕ.ಜಿ.ಪಂ. ಕೇಂದ್ರದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ ಅವರನ್ನು ನಿಯೋಜಿಸಲಾಯಿತು.

ಇಳಂತಿಲ, ಮೊಗ್ರು, ಬಂದಾರು, ತೆಕ್ಕಾರು, ಹತ್ಯಡ್ಕ ವ್ಯಾಪ್ತಿಗೆ ಬನ್ನೆಂಗಳ, ಮೊಗ್ರು ದ.ಕ.ಜಿ.ಪಂ.ಹಿ. ಪ್ರಾ. ಶಾಲೆಯಲ್ಲಿ ಪರಿಹಾರ ಕೇಂದ್ರಮತ್ತು ವಸತಿ ಕಲ್ಪಿಸಲಿದೆ. ಇಲ್ಲಿಗೆ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಚೆನ್ನಪ್ಪ ಮೊಯ್ಲಿ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಯಿತು. ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿ ಸರಕಾರಿ ಹಿ.ಪ್ರಾ. ಶಾಲೆಯನ್ನು ಗುರುತಿಸಲಾಗಿದ್ದು, ಇಲ್ಲಿಗೆ ಪಿಡಬ್ಲ್ಯೂಡಿ ಎಇಇ ಶಿವಪ್ರಸಾದ್‌ ಅಜಿಲ ಅವರನ್ನು ನೇಮಿಸಲಾಯಿತು.

ಪ್ರತಿ ವರ್ಷದಂತೆ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನುರಿತ ಈಜುಗಾರರನ್ನು ಗುರುತಿಸಿ ಅವರ ಸಂಪೂರ್ಣ ವಿವಿರ ಪಡೆಯಬೇಕು. ಎಲ್ಲ ಜೆಸಿಬಿ, ಹಿಟಾಚಿ, ಕ್ರೇನ್‌ಗಳ ಮಾಹಿತಿ ಪಡೆದು ತಾಲೂಕು ಆಡಳಿತಕ್ಕೆ ನೀಡುವಂತೆ ಪಿಡಿಒ, ಕಂದಾ ಯ ಅಧಿಕಾರಿಗಳು, ಪಿಡಬ್ಲ್ಯೂಡಿ ಅಧಿಕಾ ರಿಗಳಿಗೆ ತಹಶೀಲ್ದಾರ್‌ ಸೂಚಿಸಿದರು.

ಇಲಾಖೆಯ ಎಲ್ಲಾ ವಾಹನಗಳನ್ನು ಸುಸ್ಥಿಯಲ್ಲಿಡಬೇಕು. ಸಂಬಂಧಪಟ್ಟ ಇಲಾಖೆಗಳು ಹಗ್ಗ, ಅಗತ್ಯ ಪರಿಕರ ಸಿದ್ಧಗೊಳಿಸಬೇಕು. ಪ.ಪಂ. ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗೆದು ಸ್ವತ್ಛತೆಗೆ ಆದ್ಯತೆ ನೀಡುವಂತೆ ಪ.ಪಂ. ಅಧಿಕಾರಿಗಳಿಗೆ ಸೂಚಿಸಿದರು.

ಚಾರ್ಮಾಡಿ ಪ್ರದೇಶಕ್ಕೆ ಶಾಖಾ ಅಧಿಕಾರಿ ನೇಮಕ
ರಾ.ಹೆ. ಮಂಗಳೂರು- ಚಿಕ್ಕಮಗಳೂರು ರಸ್ತೆಯ ಚಾರ್ಮಾಡಿ ಘಾಟ್‌ ಪ್ರದೇಶ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಕೋಪ ಎದುರಾದಲ್ಲಿ ತುರ್ತು ಸ್ಪಂದನೆಗೆ ರಾ.ಹೆ. ಶಾಖಾ ಅಧಿಕಾರಿಯೊಬ್ಬರನ್ನು ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿ ನಿಯೋಜಿಸುವಂತೆ ರಾ.ಹೆ. ಮಂಗಳೂರು ವಿಭಾಗಕ್ಕೆ ಸೂಚಿಸಲಾಗುವುದು ಎಂದು ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಹೇಳಿದರು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

1-asdsads

T20 World Cup; ಸೂಪರ್‌-8 ಕನಸಿನಲ್ಲಿರುವ ಅಮೆರಿಕಕ್ಕೆ ಐರ್ಲೆಂಡ್‌ ಸವಾಲು

27

Renukaswamy Case Follwup: ರೇಣುಕಾಸ್ವಾಮಿ ಮರ್ಮಾಂಗಕ್ಕೆ ತೀವ್ರ ಹಲ್ಲೆ?

1-wqewewq

Kerala ಕಾಲೇಜಿನಲ್ಲಿ ನಟಿ ಸನ್ನಿ ಲಿಯೋನ್‌ ನೃತ್ಯ ಪ್ರದರ್ಶನ ರದ್ದು: ಕಾರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady: “ಮೀಶೋ’ ಹಸರಲ್ಲಿ ವಂಚನಾ ಜಾಲ: ಎಚ್ಚರಿಕೆ

Uppinangady: “ಮೀಶೋ’ ಹಸರಲ್ಲಿ ವಂಚನಾ ಜಾಲ: ಎಚ್ಚರಿಕೆ

Sullia: ಮಹಿಳೆ ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ

Sullia: ಮಹಿಳೆ ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ

39

Sullia: ಹಾವು ಕಡಿದು ಮಹಿಳೆ ಸಾವು

6

Bantwal: ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

4

ಬಂಟ್ವಾಳ ಸರಕಾರಿ ಆಸ್ಪತ್ರೆ ಬಳಿಯಿಂದ ಬೈಕ್‌ ಕಳವು

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ

Uppinangady: “ಮೀಶೋ’ ಹಸರಲ್ಲಿ ವಂಚನಾ ಜಾಲ: ಎಚ್ಚರಿಕೆ

Uppinangady: “ಮೀಶೋ’ ಹಸರಲ್ಲಿ ವಂಚನಾ ಜಾಲ: ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.