ಪುತ್ತೂರಿನಲ್ಲಿ 60ನೇ ಶೌರ್ಯ ತಂಡ ರಚನೆ

ಧರ್ಮಸ್ಥಳ ಕ್ಷೇತ್ರದ ಆಶ್ರಯದಲ್ಲಿ ಶೌರ್ಯ ತಂಡ

Team Udayavani, Oct 15, 2022, 11:43 AM IST

7

ಪುತ್ತೂರು: ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ನೆರವಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ರಚಿಸಲಾದ ಶೌರ್ಯ ಎಂಬ ಹೆಸರಿನ ವಿಪತ್ತು ನಿರ್ವಹಣ ಅಭಿಯಾನದಲ್ಲಿ ರಾಜ್ಯದಲ್ಲಿ ಒಟ್ಟು 60 ತಂಡ ರಚಿಸಲಾಗಿದೆ.

ಜನಜಾಗೃತಿ ವೇದಿಕೆ, ನವಜೀವನ ಸಮಿತಿ, ಪ್ರಗತಿಬಂಧು, ಸ್ವಸಹಾಯ ಸಂಘ, ಜ್ಞಾನವಿಕಾಸ ಕೇಂದ್ರ, ಜಂಟಿ ಬಾಧ್ಯತ ಗುಂಪುಗಳ ಸದಸ್ಯರು, ಸ್ವತ್ಛತ ಸೇನಾನಿಗಳು, ಒಕ್ಕೂಟ ಸದಸ್ಯರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಹೀಗೆ ವಿವಿಧ ವಲಯಗಳಿಂದ ಆಸಕ್ತ ಕಾರ್ಯಕರ್ತರನ್ನು ಒಳಗೊಂಡು ಶೌರ್ಯ ತಂಡ ರಚಿಸಲಾಗುತ್ತದೆ. ಪುತ್ತೂರಿನಲ್ಲಿ 60 ನೇ ತಂಡ ರಚನೆಯಾಗಿದ್ದು, 180 ಸ್ವಯಂ ಸೇವಕರ ಬಲಿಷ್ಠ ತಂಡ ರೂಪುಗೊಂಡಿದೆ. ಈ ತಂಡದಲ್ಲಿ 12 ಮಹಿಳೆಯರು ಕೂಡ ನೋಂದಣಿ ಮಾಡಿಕೊಂಡಿದ್ದಾರೆ.

ಆರಂಭ ಹೀಗೆ

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ ಎಫ್‌ ತಂಡಗಳು ವಹಿಸಿದ ಶ್ರಮವನ್ನು ಗಮನಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಯೋಚನೆಯ ಫಲವೇ ಶೌರ್ಯ ತಂಡ. 2019ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸಂಭವಿ ಸಿದ ಭೀಕರ ಪ್ರವಾಹ, ಉಂಟಾದ ಹಾನಿ ಕಂಡಾಗ ಡಾ| ಹೆಗ್ಗಡೆ ಅವರ ಆಸಕ್ತಿ ಮತ್ತಷ್ಟು ಹೆಚ್ಚಿಸಿತು. ಧರ್ಮಸ್ಥಳದ ಆಶ್ರಯದಲ್ಲಿ ತಂಡ ರಚನೆಯ ಬಗ್ಗೆ ಸಮಗ್ರ ಪ್ರಸ್ತಾವನೆ ತಯಾರಿಸಿ ಕೇಂದ್ರದ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಯಿತು. ಅಲ್ಲಿಂದ ಅನುಮತಿ ಸಿಕ್ಕಿದ ಬಳಿಕ 2020ರಲ್ಲಿ ಶೌರ್ಯ ತಂಡ ರಚಿಸಿ ಧರ್ಮಸ್ಥಳದಲ್ಲಿ ಚಾಲನೆ ನೀಡಲಾಯಿತು.

ರಾಜ್ಯಕ್ಕೆ ವಿಸ್ತರಣೆ

ರಾಜ್ಯದ ಇತರ ಕಡೆಗಳಲ್ಲೂ ಈ ತಂಡ ಇದ್ದರೆ ಉತ್ತಮ ಎಂಬ ಅಭಿಪ್ರಾಯ ಮೂಡಿದ ಬಳಿಕ ವಿಸ್ತರಿಸಲಾಯಿತು. ಈಗ 60ನೇ ತಂಡ ರಚನೆಯಾಗಿದೆ. ಒಟ್ಟು 8200 ಸ್ವಯಂ ಸೇವಕರು ರಾಜ್ಯದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ 2 ವರ್ಷ ದಲ್ಲಿ ಇದು 20 ಸಾವಿರಕ್ಕೆ ಏರುವ ಗುರಿ ಇದೆ ಎನ್ನುತ್ತಾರೆ ಬೆಳ್ತಂಗಡಿ ವಿಪತ್ತು ನಿರ್ವಹಣ ವಿಭಾಗದ ಯೋಜನಾಧಿಕಾರಿ ಜೈವಂತ ಪಟಗಾರ್‌.

2 ಲಕ್ಷ ರೂ. ಪರಿಕರ

ಶೌರ್ಯ ತಂಡದ ಸದಸ್ಯರಿಗೆ ಲೋಗೋ ಸಹಿತ ಸಮವಸ್ತ್ರವಿದೆ. ತುರ್ತು ಸಂದರ್ಭ ಬಳಕೆಯಾಗುವ ರೋಪ್‌, ಜಾಕೆಟ್‌, ಸ್ಟ್ರೆಚರ್‌ ಸೇರಿದಂತೆ ಪ್ರತೀ ತಂಡಕ್ಕೆ 2 ಲಕ್ಷ ರೂ.ಗಳ ಪರಿಕರ ಒದಗಿಸಲಾಗುತ್ತದೆ. ತಂಡದ ಸದಸ್ಯರು ವಿಪತ್ತು ಸಂದರ್ಭ ಮಾತ್ರ ಧಾವಿಸಬೇಕಾದ ಕಾರಣ ಇತರ ಸಂದರ್ಭದಲ್ಲಿ ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸೂಚಿಸಲಾಗಿದೆ. ಅದ ರಂತೆ ಸಭೆ, ಸಾಮಾಜಿಕ ಕೆಲಸಗಳನ್ನು ಮಾಡುತ್ತಾರೆ.

ಸೂಕ್ತ ತರಬೇತಿ

ಶೌರ್ಯ ತಂಡದ ಸದಸ್ಯರಿಗೆ ಎಸ್‌ಡಿಆರ್‌ಎಫ್‌, ಎನ್‌ ಡಿಆರ್‌ಫ್‌, ಅಗ್ನಿಶಾಮಕ ದಳಗಳಿಂದ ವೈಜ್ಞಾನಿಕ ತರಬೇತಿಯನ್ನು ಪ್ರತೀ 6 ತಿಂಗಳಿಗೊಮ್ಮೆ ನೀಡಲಾಗುತ್ತದೆ. ತರಬೇತಿ ಮತ್ತಿತರ ಕಾರ್ಯಕ್ರಮಗಳಿಗಾಗಿ ಈ ವರ್ಷ ಎಸ್‌ಕೆಡಿಆರ್‌ಡಿಪಿಯಿಂದ ರಾಜ್ಯಕ್ಕೆ 2 ಕೋ. ರೂ.ಮೀಸಲಿಡಲಾಗಿದೆ.

ವೈಜ್ಞಾನಿಕ ಪರಿಕಲ್ಪನೆ: ದುರಂತಗಳ ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಕಲ್ಪಿಸುವ ವೈಜ್ಞಾನಿಕ ಪರಿಕಲ್ಪನೆ ಇದು. ಪುತ್ತೂರಿನ ತಂಡಕ್ಕೆ ಈಗ ಅಗ್ನಿಶಾಮಕ ದಳದಿಂದ ತರಬೇತಿ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಎಸ್‌ಡಿಆರ್‌ಎಫ್‌ ನಿಂದ ತರಬೇತಿ ನೀಡಿ ಬಲಿಷ್ಠ ತಂಡ ರಚಿಸಲಾಗುವುದು. –ಗಿರೀಶ್‌ ನಂದನ್‌, ಸಹಾಯಕ ಆಯುಕ್ತರು, ಪುತ್ತೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.