ಬೆಳ್ತಂಗಡಿ: ನದಿ ನೀರಿನ ಸ್ವಚ್ಛತೆಗೆ ಬೇಕಿದೆ ಸ್ಥಳೀಯಾಡಳಿತದ ನಿಗಾ

Team Udayavani, Apr 2, 2024, 3:26 PM IST

ಬೆಳ್ತಂಗಡಿ: ನದಿ ನೀರಿನ ಸ್ವಚ್ಛತೆಗೆ ಬೇಕಿದೆ ಸ್ಥಳೀಯಾಡಳಿತದ ನಿಗಾ

ಬೆಳ್ತಂಗಡಿ: ವಿಪರೀತ ತಾಪಮಾನ ಏರಿಕೆಯಿಂದ ಜಲಕ್ಷಾಮ ಉಂಟಾಗುವ ಅಪಾಯ ಎದುರಾಗಿದೆ. ನದಿ ನೀರಿನ ಮಟ್ಟ ಇಳಿಕೆಯಾಗಿದ್ದರೂ ಅಲ್ಲಲ್ಲಿ ಚೆಕ್‌ಡ್ಯಾಮ್‌ಗಳು ಇರುವ ಪರಿಣಾಮ ನೀರಡಿಕೆ ತಣಿಸುವಂತೆ ಮಾಡಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಶಿಶಿಲ,ಸಂಗಮ ಕ್ಷೇತ್ರ ಪಜಿರಡ್ಕ, ಕೇಲ್ಕರ ಸೇರಿದಂತೆ ನದಿ ಅಂಚಿನ ತಿರ್ಥ ಕ್ಷೇತ್ರಗಳಿವೆ. ಇಲ್ಲಿನ ಅನೇಕ ಕಡೆಗಳಲ್ಲಿ ಮತ್ಸ್ಯತೀರ್ಥವಾಗಿ ಪ್ರವಾಸಿ ಗರನ್ನು ಆಕರ್ಷಿಸುತ್ತದೆ. ಅದರಲ್ಲೂ ಪ್ರಖ್ಯಾತ ಶಿಶಿಲ ದೇವಾಲಯಕ್ಕೆ ದಿನ ನಿತ್ಯ ಭಕ್ತರು ಆಗಮಿಸುತ್ತಾರೆ. ಶಿಶಿಲ ದೇವಾಲಯದಲ್ಲಿ ಸ್ವಾಮಿಯ ದರ್ಶನ ದಂತೆ ಮೀನುಗಳಿಗೂ ಹರಕೆ ಇಲ್ಲಿ ವಿಶೇಷ. ಆದರೆ ಇಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ನಿತ್ಯ ಹರಿವು ನಿಂತಿದೆ. ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ.

ರಾಸಾಯನಿಕಯುಕ್ತ ಅರಳು
ಇತ್ತೀಚಿನ ದಿನಗಳಲ್ಲಿ ಎಲ್ಲ ಆಹಾರಗಳು ರಾಸಾಯನಿಕಯುಕ್ತವಾಗಿವೆ. ಅದರಲ್ಲೂ ಮತ್ಸ್ಯಗಳಿಗೆ ನೀಡುವ ಅರಳುಗಳಲ್ಲೂ
ರಾಸಾಯನಿಕ ಸೇರಿಕೊಂಡಿದೆ ಎಂಬ ಅನುಮಾನ ಮೂಡತೊಡಗಿದೆ. ಇದರ ಪರಿಣಾಮ ಶಿಶಿಲದಲ್ಲಿ ಮೀನುಗಳ
ಆಹಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲ ಮತ್ತು ನೀರೂ ಕಲುಷಿತ ಮಾಡಬಲ್ಲ ಅರಳನ್ನು ನಿಷೇಧ ಮಾಡಲಾಗಿದೆ. ಈ ಕುರಿತು ಭಕ್ತರು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳು ಮತ್ತು ಮತ್ಸ್ಯ ಹಿತರಕ್ಷಣ
ವೇದಿಕೆ ವಿನಂತಿ ಮಾಡಿದೆ. ಹೀಗಾಗಿ ನದಿ ನೀರು ಕಲುಶಿತ ವಾಗದಂತೆ ತಾಲೂಕು ಆಡಳಿತ ಪ್ರತಿ ಗ್ರಾ.ಪಂ.ಗಳಿಗೆ ಅಗತ್ಯ ಕ್ರಮಕ್ಕೆ ಆಧ್ಯತೆ ನೀಡುವ ಅನಿವಾರ್ಯತೆಯಿದೆ.

ಪ್ರವಾಸಿಗರ ಸಂಖ್ಯೆ ಕುಸಿತ

ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಸೋಧ್ಯಮಕ್ಕೆ ಇನ್ನಿಲ್ಲದ ಬೇಡಿಕೆಯಿದೆ. ಆದರೆ ಬಿರು ಬಿಸಿಲಿನ ತಾಪಮಾನಕ್ಕೆ ಪ್ರವಾಸಿಗರು ಇ ಸುಳಿಯುತ್ತಿಲ್ಲ. ಪ್ರಮುಖ ಆಕರ್ಷಣೆಯಾಗಿರುವ ದಿಡುಪೆ, ಎರ್ಮಾಯಿ, ಬಂಡಾಜೆ ಜಲಪಾತಗಳು ಬಹುತೇಕ ಬತ್ತಿಹೋಗುವ ಅಂಚಿನಲ್ಲಿದೆ. ಹೀಗಾಗಿ ದಿನವೊಂದಕ್ಕೆ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದ್ದ ಬೆಳ್ತಂಗಡಿ ತಾಲೂಕಿನ ಜಲಪಾತಗಳು ತೀವ್ರ ಬತ್ತಿರುವುದರಿಂದ ದಿನಕ್ಕೆ  ಹೆಚ್ಚೆಂದರೆ 50 ಮಂದಿ ಸೇರುವುದು ಕಡಿಮೆ ಎಂಬಂತಾಗಿದೆ. ಈ ಮಧ್ಯೆ ನೇತ್ರಾವತಿ, ಮೃತ್ಯುಂಜಯ, ನಗರಕ್ಕೆ ಮುಖ್ಯ ನೀರಿನ ಆಶ್ರಯವಾಗಿರುವ ಸೋಮಾವತಿ ನದಿಗಳು ಬತ್ತುವ
ಅಂಚಿನಲ್ಲಿದೆ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ.

ತಾಲೂಕಿನಲ್ಲಿ ನದಿ ನೀರಿನಮಟ್ಟ ಕ್ಷೀಣಿಸಿರುವುದು ಕಂಡುಬಂದಿದೆ. ಗ್ರಾ.ಪಂ. ಸಹಿತ ಪಟ್ಟಣ ವ್ಯಾಪ್ತಿಯಲ್ಲಿ ನೀರಿನ ಅಭಾಯ ಕಂಡುಬಂದಲ್ಲಿ ಸ್ಥಳೀಯ ನಿಧಿ ಬಳಕೆ ಮಾಡಿ ನೀರಿನ ವ್ಯವಸ್ಥೆಗೆ ಸೂಚಿಸಲಾಗಿದೆ. ನದಿ ನೀರು ಕಲುಷಿತಗೊಳಿ ಸುವವರ ಮೇಲೆ ಕ್ರಮಕ್ಕೆ ಸೂಚಿಸಲಾಗುವುದು.
-ಪೃಥ್ವಿ ಸಾನಿಕಮ್‌, ತಹಶೀಲ್ದಾರ್‌

ನದಿಯ ಮೀನುಗಳಿಗೆ ಅತಿಯಾದ ಆಹಾರ ನೀಡುವುದರಿಂದ ನೀರು ಕಲುಷಿತವಾಗಿ ದೇವರ ಮೀನುಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಅರಿತ ದೇವಾಲಯದ ಆಡಳಿತ, ಮೀನುಗಳಿಗೆ ಭಕ್ತರು ಅರಳು ಹಾಕುವುದನ್ನು ನಿಷೇಧ ಮಾಡಿದೆ. *

ಜಯರಾಮ ನೆಲ್ಲಿತ್ತಾಯ,

ಮತ್ಸ್ಯ ಹಿತರಕ್ಷಣಾ ವೇದಿಕೆ
ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Road Mishap ಶಂಭೂರು: ಕಾರು-ಬೈಕ್‌ ಢಿಕ್ಕಿ; ಸವಾರ ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

Bantwal ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ರಿಕ್ಷಾ ಢಿಕ್ಕಿ; ಗಾಯ

udAgricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Agricultural ಪಂಪ್‌ಸೆಟ್‌ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Bantwal ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Sullia: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ 2ವರ್ಷ: ಈವರೆಗೂ 7ಮಂದಿಯ ಪತ್ತೆಯೇ ಆಗಿಲ್ಲ!

Sullia: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ 2ವರ್ಷ: ಈವರೆಗೂ 7ಮಂದಿಯ ಪತ್ತೆಯೇ ಆಗಿಲ್ಲ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.