ಇಲ್ಲಗಳ ಮಧ್ಯೆ ಬದುಕುತ್ತಿದ್ದಾರೆ ಹೆಂಡೇಲು ನಿವಾಸಿಗಳು

  ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯ ಮೂಲ ಸೌಲಭ್ಯ ವಂಚಿತ ಪ್ರದೇಶ

Team Udayavani, Jul 27, 2019, 5:00 AM IST

v-22

ವೇಣೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹೆಂಡೇಲುನಲ್ಲಿ ಎಲ್ಲವೂ ಇಲ್ಲಗಳೇ. ರಸ್ತೆನೂ ಇಲ್ಲ, ವಿದ್ಯುತ್ತೂ ಇಲ್ಲ. ಸೇತುವೆ-ಮೋರಿಗಳೂ ಇಲ್ಲ. ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಗೊತ್ತಿ ದ್ದರೂ ಪ್ರಯೋಜನ ಆಗಿಲ್ಲ. ಇಂತಹ ವಿಚಿತ್ರ ಪ್ರದೇಶ ಇರುವುದು ಬೆಳ್ತಂಗಡಿ ತಾ|ನ ಶಿರ್ಲಾಲು ಗ್ರಾಮ ದಲ್ಲಿ. ಆದಿವಾಸಿ ಮಲೆಕುಡಿಯ ಸಮುದಾಯ ವಾಸಿಸುವ ಈ ಪ್ರದೇಶ ಮೂಲ ಸೌಲಭ್ಯಗಳಿಂದ ವಂಚಿತ ವಾಗಿದೆ. ಶತಮಾನಗಳಿಂದ ಇವರು ಇಲ್ಲಿ ವಾಸಿಸುತ್ತಿರುವ ಬಗ್ಗೆ ಇವರ ಜಮೀನಿನ ದಾಖಲೆಗಳು ಸಾಕ್ಷಿ ನುಡಿಯುತ್ತಿವೆ. ಮತದಾರರ ಚೀಟಿ, ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಇದ್ದರೂ ರಸ್ತೆ, ವಿದ್ಯುತ್‌ ಮಾತ್ರ ಇಲ್ಲ.

ಇಲ್ಲಿರುವುದು 9 ಮಲೆಕುಡಿಯ ಕುಟುಂಬಗಳು. ಸುತ್ತಲೂ ಅರಣ್ಯ ವಾದರೂ ಕಂಗು-ತೆಂಗಿನ ತೋಟ, ಗದ್ದೆಗಳೂ ಇವೆ. ರಸ್ತೆ, ವಿದ್ಯುತ್‌ ಇದ್ದರೆ ಇವರದು ಸಂತೃಪ್ತ ಜೀವನ. ಶಿರ್ಲಾಲು
ಗ್ರಾ.ಪಂ.ನಿಂದ ಕೇವಲ ಆರೇಳು ಕಿ.ಮೀ. ದೂರದಲ್ಲಿದೆ ಈ ಊರು.

ಸೋಲಾರ್‌ ಲೈಟು ಉರಿಯುತ್ತಿಲ್ಲ
ಇಲ್ಲಿಯ ಮನೆಗಳೆಲ್ಲವೂ ರಾತ್ರಿ ಯಾಗುತ್ತಲೇ ಚಿಮಿಣಿ ದೀಪಗಳಿಂದ ಪ್ರಕಾಶಮಾನವಾಗಿ ಕಾಣುತ್ತವೆ. ಹತ್ತು ವರ್ಷಗಳ ಹಿಂದೆ ಯಾವುದೋ ಸಂಸ್ಥೆ ಯೊಂದು ಸೋಲಾರ್‌ ಲೈಟ್ಸ್‌ ನೀಡಿದ್ದರೂ ತಿಂಗಳೊಳಗೆ ಕೆಟ್ಟು ಗುಜುರಿ ಅಂಗಡಿ ಸೇರಿವೆ ಎನ್ನುತ್ತಾರೆ ಗ್ರಾಮಸ್ಥರು.

ಇತ್ತೀಚೆಗೆ ಇಲ್ಲಿಗೆ ಸೌಭಾಗ್ಯ ಯೋಜನೆ ಯಡಿಯಲ್ಲಿ ಸೋಲಾರ್‌ ಸಂಪರ್ಕ ನೀಡಿದರೂ ಕೆಲವು ಮನೆಗಳ ಬಲ್ಬುಗಳು ಉರಿಯುವುದೇ ಇಲ್ಲ. ಇಲ್ಲಿನ ಮಕ್ಕಳು ಶಾಲಾ – ಕಾಲೇಜುಗಳಿಗೆ ಏಳೆಂಟು ಕಿ.ಮೀ. ದೂರ ಕಾಲ್ನಡಿಗೆ ಯಲ್ಲಿ ಪ್ರಯಾಣಿಸಬೇಕಿದೆ.

ಉಪಯೋಗಕ್ಕೆ ಬಾರದ ಅರಣ್ಯ ಹಕ್ಕು ಕಾಯ್ದೆ
ಅರಣ್ಯ ಹಕ್ಕು ಕಾಯ್ದೆ ಇಲ್ಲಿನ ನಿವಾಸಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ. 2006ರಲ್ಲಿ ಕಾಯ್ದೆ ಜಾರಿಯಾದಾಗ ತುಂಬಾ ಖುಷಿ ಪಟ್ಟಿದ್ದೇವೆ. ಆದರೆ ನಮ್ಮ ಪಾಲಿಗೆ ಪ್ರಯೋಜನವಾಗಲಿಲ್ಲ. ಇಲ್ಲಿನ 100 ಮೀ.ಗಳಷ್ಟು ಮಾತ್ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವುದಾದರೂ ಅಭಿವೃದ್ಧಿಗೆ ಅರಣ್ಯ ಎಂಬ ಪದ ಅಡ್ಡಿಯಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ನಿವಾಸಿಗಳು. ಸಮರ್ಪಕ ರಸ್ತೆ, ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಟ್ಟರೆ ಎಲ್ಲರಂತೆ ನಮ್ಮ ಬದುಕು ಬೆಳಕಾಗುತ್ತದೆ ಎಂಬುದು ಇಲ್ಲಿನ ಜನರ ಆಶಾದಾಯಕ ಮಾತು.

ಅಧಿಕಾರಿಗಳ ನಿರ್ಲಕ್ಷ್ಯ
ಅರಣ್ಯ ಹಕ್ಕು ಕಾಯ್ದೆ ನಿರ್ಲಕ್ಷಿಸಿದ ಅಧಿಕಾರಿಗಳ ಬೇಜವಾಬ್ದಾರಿ ಈ ಪ್ರದೇಶ ಅಭಿವೃದ್ಧಿಯಲ್ಲಿ ಹಿನ್ನಡೆಗೆ ಕಾರಣ. ಅರಣ್ಯ ಹಕ್ಕು ಕಾಯ್ದೆ ಜಾರಿಗಾಗಿ ತೀವ್ರ ಹೋರಾಟಕ್ಕೆ ಮುನ್ನುಗ್ಗಬೇಕಾದ ಅಗತ್ಯವಿದೆ.
-ಜಯಾನಂದ ಪಿಲಿಕಲ
ಪ್ರ. ಕಾರ್ಯದರ್ಶಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಬೆಳ್ತಂಗಡಿ ತಾ|

 ಸಮಸ್ಯೆ ಪರಿಹರಿಸಿ
ಚಿಮಿಣಿ ದೀಪಗಳಿಂದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಕಷ್ಟವಾಗಿದೆ. ರೋಗಿಗಳನ್ನು ಹೊತ್ತೂಯ್ಯಬೇಕಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ನಮ್ಮ ಸಮಸ್ಯೆಯನ್ನು ಅರ್ಥೈಸಿಕೊಳ್ಳಬೇಕಿದೆ.
-ಮಮತಾ ಎಚ್‌., ಹೆಂಡೇಲು

 ಇಚ್ಛಾಶಕ್ತಿ ಇರಲಿ
ಇಲಾಖೆ- ಜನಪ್ರತಿನಿಧಿಗಳ ಬಾಗಿಲು ಬಡಿದರೂ ನಮಗೆ ಭಾಗ್ಯದ ಬಾಗಿಲು ತೆರೆಯಲಿಲ್ಲ. ರಾಜಕೀಯ ಇಚ್ಛಾಶಕ್ತಿ ಯಿಂದ ಅರಣ್ಯ ಹಕ್ಕು ಕಾಯ್ದೆಯಡಿ ನಮ್ಮ ಊರನ್ನು ಅಭಿವೃದ್ಧಿಪಡಿಸಲಿ.
-ಮೋನಪ್ಪ ಮಲೆಕುಡಿಯ ಹೆಂಡೇಲು, ಶಿರ್ಲಾಲು

 ವನ್ಯಜೀವಿ ವಿಭಾಗ ಪ್ರದೇಶ
ಹೆಂಡೇಲು ವನ್ಯಜೀವಿ ವಿಭಾಗ ಪ್ರದೇಶದ ಒಳಗಿರುವ ಕಾರಣ ಅಭಿವೃದ್ಧಿಗೆ ಅನುದಾನ ಒದಗಿಸಲು ಸಾಧ್ಯವಾಗುತ್ತಿಲ್ಲ. ಪ್ರತೀ ಮನೆಗೆ ಸೋಲಾರ್‌ ಅಳವಡಿಸಲಾಗಿದೆ. ಅದಕ್ಕೆ 5 ವರ್ಷ ಗ್ಯಾರಂಟಿ ಇದ್ದು, ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತಂದರೆ ಕಂಪೆನಿಯವರನ್ನು ಕರೆಸಿ ದುರಸ್ತಿ ಮಾಡಿಸುತ್ತೇವೆ. ಪ. ಜಾತಿ, ಪ. ಪಂಗಡದ ಅನುದಾನ ಪಂ.ನಲ್ಲಿ ಸಾಕಷ್ಟು ಇದೆ. ಆದರೆ ಇಲ್ಲಿ ಉಪಯೋಗಿಸಲು ಅಸಾಧ್ಯವಾಗಿದೆ. ಇಲ್ಲಿನ ಕೆಲವು ಸಂಪರ್ಕ ರಸ್ತೆಗೆ ಕಾಂಕ್ರಿಟ್‌ ಮಾಡಲಾಗಿದೆ. ಮುಂದಿನ ಅಭಿವೃದ್ಧಿ ಕಾರ್ಯಕ್ಕೆ ಅರಣ್ಯ ಇಲಾಖೆಯ ಅಧಿ ಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇವೆ.
 - ರಾಜು, ಪಿಡಿಒ, ಶಿರ್ಲಾಲು ಗ್ರಾ.ಪಂ.

ಪದ್ಮನಾಭ ವೇಣೂರು

ಟಾಪ್ ನ್ಯೂಸ್

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.