Bantwal ಗ್ಯಾರೇಜ್ನಿಂದ ಸ್ಕೂಟರ್ ಕಳವು: ಪ್ರಕರಣ ದಾಖಲು
Team Udayavani, Mar 18, 2024, 12:55 AM IST
ಬಂಟ್ವಾಳ: ಅಮ್ಟಾಡಿಯ ಗ್ಯಾರೇಜ್ ಒಂದರಲ್ಲಿ ನಿಲ್ಲಿಸಿದ್ದ ಅಮ್ಟಾಡಿ ನಿವಾಸಿ ಸುರೇಶ್ ಅವರ ಸ್ಕೂಟರನ್ನು ಯಾರೋ ಕಳವು ಮಾಡಿರುವುದು ಮಾ. 13ರಂದು ಬೆಳಕಿಗೆ ಬಂದಿದೆ.
ಸುರೇಶ್ ಮಾ. 12ರ ಸಂಜೆ ಗ್ಯಾರೇಜ್ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮಾ. 13ರಂದು ಬೆಳಗ್ಗೆ ಬಂದು ನೋಡಿದಾಗ ಕಳವಾಗಿತ್ತು. ಸ್ಕೂಟರಿನ ಮೌಲ್ಯ 45 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.