ದಕ್ಷಿಣ ಕನ್ನಡ: 9 ಸಾವು, 308 ಪಾಸಿಟಿವ್
Team Udayavani, Sep 18, 2020, 1:38 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 308 ಮಂದಿಗೆ ಕೋವಿಡ್ ದೃಢಪಟ್ಟಿದೆ. 398 ಮಂದಿ ಗುಣಮುಖರಾಗಿ ದ್ದಾರೆ. 9 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 461ಕ್ಕೇರಿದೆ.
101 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, 176 ಮಂದಿ ಇನ್ಫ್ಲೂಯೆನಾl ಲೈಕ್ ಇಲ್ನೆಸ್, 9 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ತಗಲಿದೆ. 22 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಪೀಡಿತರಲ್ಲಿ 202 ಮಂದಿ ಮಂಗಳೂರು, 37ಮಂದಿ ಬಂಟ್ವಾಳ, 30 ಮಂದಿ ಪುತ್ತೂರು, 10 ಮಂದಿ ಸುಳ್ಯ, 24 ಮಂದಿ ಬೆಳ್ತಂಗಡಿ ಹಾಗೂ 5 ಮಂದಿ ಹೊರ ಜಿಲ್ಲೆಯವರು.
168 ಮಂದಿ ಪುರುಷರು, 55 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 43 ಮಂದಿ ಪುರುಷರು, 42 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಐವರು ಮಂಗಳೂರು, ಇಬ್ಬರು ಬಂಟ್ವಾಳ, ಓರ್ವ ಬೆಳ್ತಂಗಡಿ, ಓರ್ವ ಪುತ್ತೂರಿನವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ