ಕರಾವಳಿ ಬೈಪಾಸ್‌- ಮಲ್ಪೆ ರಾ.ಹೆ.: ಅಲ್ಲಲ್ಲಿ ರಸ್ತೆ ಗುಂಡಿ

ವಾಹನ ಸಂಚಾರ ದುಸ್ತರ; ಮಳೆಗೆ ಮುನ್ನ ದುರಸ್ತಿಗೆ ಸಾರ್ವಜನಿಕರ ಆಗ್ರಹ

Team Udayavani, Jun 15, 2022, 3:29 PM IST

13

ಮಲ್ಪೆ: ಕರಾವಳಿ ಬೈಪಾಸ್‌ ನಿಂದ ಮಲ್ಪೆವರೆಗೆ ರಸ್ತೆಯಲ್ಲಿ ಮಧ್ಯೆ ಅಲ್ಲಲ್ಲಿ ಗುಂಡಿಗಳಾಗಿ ನಿತ್ಯ ಈ ರಸ್ತೆಯ ಮೂಲಕ ಓಡಾಡುವ ಜನರು, ವಾಹನ ಸವಾರರು ರೋಸಿ ಹೋಗಿದ್ದಾರೆ.

ಕರಾವಳಿ ಬೈಪಾಸ್‌ನಿಂದ ಆದಿವುಡುಪಿ, ಪಂದುಬೆಟ್ಟು ಕಲ್ಮಾಡಿ, ಮಲ್ಪೆವರೆಗಿನ ರಸ್ತೆ ಕಳೆದ ಕೆಲವು ಸಮಯಗಳಿಂದ ಸಮರ್ಪಕವಾಗಿ ಡಾಮರು ಕಂಡಿಲ್ಲ. ಕೆಲವೊಮ್ಮೆ ಅಲ್ಲಲ್ಲಿ ತೇಪೆ ಕಾಮಗಾರಿ ಮಾಡಿದ್ದರೂ ತಿಂಗಳಿಗಿಂತ ಹೆಚ್ಚು ಬಾಳಿಕೆ ಬಂದಿಲ್ಲ. ಜನರು ಅನಿವಾರ್ಯ ವಾಗಿ ಈ ರಸ್ತೆಯ ಅವಲಂಬನೆಯ ಪರಿಸ್ಥಿತಿಗೆ ಸಿಲುಕಿ ನಿತ್ಯ ಯಮಯಾತನೆ ಅನುಭವಿಸುವಂತಾಗಿದೆ.

ನಿತ್ಯ ಸಾವಿರಾರು ವಾಹನಗಳು: ಈ ರಸ್ತೆಯಲ್ಲಿ ಬಸ್‌, ಲಘು ವಾಹನಗಳು, ಬೈಕ್‌ಗಳು ನಿರಂತರ ಓಡಾಡುತ್ತವೆ. ಮೀನುಗಾರಿಕೆ ಬಂದರು, ಪ್ರವಾಸೋದ್ಯಮ ಕೇಂದ್ರ ಬೀಚ್‌, ಸೈಂಟ್‌ ಮೇರೀಸ್‌ ಐಲ್ಯಾಂಡ್‌ ಗೆ ಪ್ರವಾಸಿಗರು, ಸಾರ್ವಜನಿಕರು ಇದೇ ಮಾರ್ಗದಲ್ಲಿ ಓಡಾಡಬೇಕು. ಮಳೆಗಾಲ ಪ್ರಾರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಚ್ಚೆತ್ತು ದುರಸ್ತಿ ನಡೆಸಿದರೆ ರಸ್ತೆಗೆ ಈ ದುಃ ಸ್ಥಿತಿ ಬರುತ್ತಿರಲಿಲ್ಲ. ಸುಮಾರು 3 ಕಿ.ಮೀ. ರಸ್ತೆ ಕ್ರಮಿಸುವುದೆಂದರೆ ಸಾಹಸ ಪಡಬೇಕು. ಹಲವು ಬಾರಿ ಬೈಕ್‌ ಸವಾರರು ಹೊಂಡ ತಪ್ಪಿಸುವ ಧಾವಂತದಲ್ಲಿ ಪರಸ್ಪರ ವಿರುದ್ಧ ದಿಕ್ಕಿಗೆ ಚಾಲನೆ ಮಾಡಿ ಅವಘಡಗಳಿಗೆ ಕಾರಣವಾಗಿದೆ. ಇಲ್ಲಿನ ರಸ್ತೆಗೆ ಕೆಲವೆಡೆ ಕಾಂಕ್ರೀಟ್‌ ಕಾಮಗಾರಿಯಾಗಿದ್ದು ಕಾಂಕ್ರೀಟ್‌ ರಸ್ತೆಯ ಇಕ್ಕೆಲಗಳಲ್ಲಿ ಹಾಕಿದ ಡಾಮರುಗಳು ಕಿತ್ತು ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರಾದ ಆಶೋಕ್‌ ಆದಿವುಡುಪಿ.

ಪ್ರಮುಖ ರಸ್ತೆಗಳೇ ನಿರ್ಲಕ್ಷ್ಯ: ಸರಕಾರ ಗಲ್ಲಿ, ಗಲ್ಲಿಗಳಲ್ಲಿ, ಓಣಿಗಳಲ್ಲಿ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಿದೆ. ಆದರೆ ಪ್ರಮುಖ ರಸ್ತೆಗಳನ್ನು ನಿರ್ಲಕ್ಷಿಸಿರುವದರಿಂದ ರಸ್ತೆ ಮೂಲ ಸ್ವರೂಪ ಕಳೆದುಕೊಂಡಿದೆ.

ವಾಟರ್‌ ಫಿಲ್ಲಿಂಗ್‌

ಇಲ್ಲಿನ ರಸ್ತೆ ವಿಸ್ತರಿಸುವ ಯೋಜನೆ ಇರುವುದರಿಂದ ಹೆಚ್ಚೇನು ಮಾಡಲು ಸಾಧ್ಯವಾಗುವುದಿಲ್ಲ. ವಿಸ್ತರಣೆ ಯೋಜನೆ ಬೇರೆ ಬೇರೆ ಕಾರಣದಿಂದ ಸ್ವಲ್ಪ ವಿಳಂಬವಾಯಿತು. ಅತೀ ಬೇಗದಲ್ಲಿ ಹೊಸ ಟೆಂಡರ್‌ ಕರೆಯಲಾಗುವುದು. ಸದ್ಯ ಮಳೆಗಾಲ ಆರಂಭವಾಗಿದ್ದರಿಂದ ಈ ರಸ್ತೆಗೆ ವಾಟರ್‌ ಫಿಲ್‌ ಮಾಡಿ ತಾತ್ಕಾಲಿಕ ಪರಿಹಾರವನ್ನು ಕಲ್ಪಿಸಲಾಗುವುದು ಎಂದು ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗೆ ಇನ್ನೂ ಸಮಸ್ಯೆ ಜಾಸ್ತಿ

ಒಂದು ಕಡೆ ರಸ್ತೆ ವಿಸ್ತರಣೆಯಾಗುತ್ತದೆ ಎಂದರೆ, ಇನ್ನೊಂದಡೆ ವಿಸ್ತರಣೆಯ ಟೆಂಡರ್‌ ವಿಳಂಬವಾಗಿದೆ ಎಂಬ ಮಾತು ಕೇಳಿ ಬರುತ್ತದೆ.ಇನ್ನೇನು ಇಂದೋ ನಾಳೆಯೋ ಆರಂಭವಾಗಲಿದ್ದು, ಅದಕ್ಕೆ ಮೊದಲು ಕಾಮಗಾರಿ ಪೂರ್ಣಗೊಳ್ಳದಿದ್ದರೆ ಮಳೆಯ ಅಬ್ಬರಕ್ಕೆ ರಸ್ತೆ ಗತಿ ಅಧೋಗತಿ. ಒಟ್ಟಾರೆ ಈ ಮಾರ್ಗ ನಗರಸಭೆಯ ವ್ಯಾಪ್ತಿಗೆ ಒಳಪಟ್ಟಿದದರೂ, ರಾ. ಹೆದ್ದಾರಿಯಾದ್ದರಿಂದ ನಗರಸಭೆ ಈ ರಸ್ತೆ ಅಭಿವೃದ್ಧಿಯಲ್ಲಿ ತಲೆ ಹಾಕುತ್ತಿಲ್ಲ.

ರಸ್ತೆ ಸಂಚಾರವೇ ಹಿಂಸೆ: ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಪ್ರಯಾಣಿಸುವುದೇ ಹಿಂಸೆಯೆನಿಸುತ್ತದೆ. ಮಳೆ ಬರುವ ಮೊದಲು ಇರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕು. ಸಾರ್ವಜನಿಕರು ಸಂಯಮ ಕಳೆದುಕೊಂಡು ಪ್ರತಿಭಟನೆಯ ಹಾದಿ ಹಿಡಿಯುವ ಮುನ್ನ ಸಂಬಂಧಪಟ್ಟ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. -ಭುವನೇಂದ್ರ ಮೈಂದನ್‌, ಬಂಕೇರಕಟ್ಟ -ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.