Udayavni Special

ಕಾರ್ಕಳ ವಿಧಾನ ಸಭಾ ಕ್ಷೇತ್ರ: 1,86,571 ಮತದಾರರು


Team Udayavani, Mar 17, 2019, 3:38 AM IST

karkala.png

ಕಾರ್ಕಳ: ವಿಧಾನ ಸಭಾ ಕ್ಷೇತ್ರ ಕಾರ್ಕಳ-122ರಲ್ಲಿ  96,694 ಮಹಿಳಾ, 87,106 ಪುರುಷ ಮತ್ತು 2,771 ಯುವ ಮತದಾರರು ಸೇರಿದಂತೆ ಒಟ್ಟು 1,86,571 ಮಂದಿ ಮತದಾರರಿದ್ದಾರೆ. 187 ಗ್ರಾಮಾಂತರ, 22 ನಗರದ ಒಟ್ಟು 209 ಮತಗಟ್ಟೆಗಳಲ್ಲಿ 140 ಸಾಮಾನ್ಯ ಮತಗಟ್ಟೆಗಳು, 21 ಸೂಕ್ಷ್ಮ ಮತಗಟ್ಟೆಗಳು, 27 ನಕ್ಸಲ್‌ ಬಾಧಿತ ಮತ್ತು 21 ಅತಿ ಸೂಕ್ಷ$ಮತಗಟ್ಟೆಗಳೆಂದು ಗುರುತಿಸ ಲಾಗಿದೆ ಎಂದು ಕಾರ್ಕಳ ತಾ| ಸಹಾಯಕ ಚುನಾವಣಾಧಿಕಾರಿ ಸಂತೋಷ್‌ ಕುಮಾರ್‌ ತಿಳಿಸಿದರು.  ಮಾ. 16ರಂದು ತಾಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. 

ಮತದಾರರ ಪಟ್ಟಿ ಪರಿಷ್ಕರಣೆ
ಸುಗಮ, ಸುಸೂತ್ರ ಮತ್ತು ವ್ಯವಸ್ಥಿತವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಮತದಾರರ ಪಟ್ಟಿ  ಪರಿಷ್ಕರಣೆ ಸೇರಿದಂತೆ ಗುರುತಿನ ಚೀಟಿ ಕಾರ್ಯ ಮಾಡಲಾಗುತ್ತಿದೆ. ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಒಟ್ಟು  209 ಮತಗಟ್ಟೆ ಅಧಿಕಾರಿಗಳು ಈಗಾಗಲೇ ಕಾರ್ಯ ಪ್ರವೃತ್ತರಾಗಿರುತ್ತಾರೆ ಎಂದರು. 
ವಿಕಲ ಚೇತನ ಮತದಾರರಿಗೆ ರ್‍ಯಾಂಪ್‌ ವ್ಯವಸ್ಥೆ, ನಿರಂತರವಾದ ವಿದ್ಯುತ್‌ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸುಮಾರು 18 ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ತಪಾಸಣೆ ತಂಡ
23 ಸೆಕ್ಟರ್ ಆಫೀಸರ್, 3 ಫ್ಲೈಯಿಂಗ್‌ ಸ್ಕ್ವಾಡ್‌, 3 ಅಂಕಿ ಅಂಶ ನಿಗಾ ತಂಡ, 3 ವೀಡಿಯೋ ನಿಗಾ ತಂಡ, 3 ವೀಡಿಯೋ ವಿಚಕ್ಷಣಾ ತಂಡ, 2 ಮಾಸ್ಟರ್‌ ಟ್ರೈನರ್‌, 1 ಸುವಿಧಾ ತಂಡ, 1ಸಿ-ವಿಜಿಲ್‌ ತಂಡ ಹಾಗೂ ಕಚೇರಿಯಲ್ಲಿ ಏಕ-ಗವಾಕ್ಷಿ ನಿಯಂತ್ರಣ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಚೆಕ್‌ ಪೋಸ್ಟ್‌
ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಸೋಮೇಶ್ವರ, ಸಾಣೂರು, ಮಾಳ, ಈದು-ಹೊಸ್ಮಾರು ಸೇರಿದಂತೆ 4 ಕಡೆ ವಾಹನ ತಪಾಸಣೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ತಪಾಸಣೆ ಕೇಂದ್ರಗಳಲ್ಲಿ 3 ಪಾಳಯದಲ್ಲಿ 9 ಫ್ಲೈಯಿಂಗ್‌ ಸ್ಕ್ವಾಡ್‌ ತಂಡಗಳು ನಿಗದಿಪಡಿಸಿದ ಸಮಯದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿವೆ.

ರಾಜಕೀಯ ಪಕ್ಷದವರು ನಡೆಸುವ ಪ್ರಚಾರ ಕಾರ್ಯಕ್ರಮ, ಶೋಭಾ ಯಾತ್ರೆ ಮುಂತಾದವುಗಳಿಗೆ ಸುವಿಧಾ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಅನುಮತಿ ಇಲ್ಲದೇ ನಡೆಸುವ ಯಾವುದೇ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ, ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಕಾರ್ಕಳ ತಹಶೀಲ್ದಾರ್‌ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ, ತಾ.ಪಂ. ಇ.ಒ. ಮೆ| ಹರ್ಷ ಉಪಸ್ಥಿತರಿದ್ದರು. 

ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ-ಆತಂಕವಿಲ್ಲ
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಧಾರ್ಮಿಕ ಕಾರ್ಯ ಕ್ರಮಗಳನ್ನು ನಡೆಸಲು ಯಾವುದೇ  ಅಡ್ಡಿ-ಆತಂಕ ಇರುವುದಿಲ್ಲ. ಧಾರ್ಮಿಕ ಕೇಂದ್ರಗಳ ವಠಾರದ ಒಳಗೆ ಬ್ಯಾನರ್‌, ಬಂಟಿಂಗ್ಸ್‌ ಕಟ್ಟಲು ಅವಕಾಶವಿದೆ. ಆದರೆ, ಯಾವುದೇ ರಾಜಕೀಯ ವ್ಯಕ್ತಿಗಳಿಗೆ ಶುಭ ಕೋರಿ ಬ್ಯಾನರ್‌ ಅಳವಡಿಸಲು ಅವಕಾಶವಿಲ್ಲ. ಸಾರ್ವಜನಿಕ ಸ್ಥಳ ಮತ್ತು ರಸ್ತೆ ಬದಿಗಳಲ್ಲಿ ಬ್ಯಾನರ್‌, ಬಂಟಿಂಗ್ಸ್‌ ಗಳನ್ನು ಕಟ್ಟುವಂತಿಲ್ಲ. ಸಾರ್ವಜನಿಕರು ನಡೆಸುವ ಧಾರ್ಮಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳ ಬಗ್ಗೆ ಸಹಾಯಕ ಚುನಾವಣ ಅಧಿಕಾರಿಯವರ ಕಚೇರಿಯಲ್ಲಿ ತೆರೆಯಲಾಗಿರುವ ಏಕ-ಗವಾಕ್ಷಿ ನಿಯಂತ್ರಣ ವ್ಯವಸ್ಥೆಯ ಮೂಲಕ ಪೂರ್ವಾನುಮತಿ ಪಡೆದುನಡೆಸಬಹುದಾಗಿದೆ ಎಂದರು.

ದೂರು ನೀಡಬಹುದು
ಚುನಾವಣೆಯ ನೀತಿ-ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು 24 ಗಂಟೆ ಕಾರ್ಯ ನಿರ್ವಹಣೆಗಾಗಿ 2 ತಂಡಗಳನ್ನು ರಚಿಸಲಾಗಿದ್ದು, ತಾ|ಕಚೇರಿಯ ಕಂಟ್ರೋಲ್‌ ರೂಂ ದೂರವಾಣಿ ಸಂ. 08258-230201ಗೆ  ಅಥವಾ ತಾಲೂಕು ಮಟ್ಟದ ನೀತಿ-ಸಂಹಿತೆ ಅಧಿಕಾರಿ ಮೆ. ಹರ್ಷ ಕೆ.ಬಿ., 9480878100ಗೆ ಸಂಪರ್ಕಿಸಿ ದೂರು ಸಲ್ಲಿಸಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ದೊಡ್ಡಬಳ್ಳಾಪುರ ಕೃಷಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ

ದೊಡ್ಡಬಳ್ಳಾಪುರ ಕೃಷಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

whatsapp-message

ನಿಮ್ಮ ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರದ ಹದ್ದಿನಕಣ್ಣು ? ಪಿಐಬಿ ಹೇಳಿದ್ದೇನು ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ 19 ನಿಯಂತ್ರಣ: ಜಿಲ್ಲಾಡಳಿತಕ್ಕೆ ಬೊಮ್ಮಾಯಿ ಶ್ಲಾಘನೆi

ಕೋವಿಡ್ 19 ನಿಯಂತ್ರಣ: ಜಿಲ್ಲಾಡಳಿತಕ್ಕೆ ಬೊಮ್ಮಾಯಿ ಶ್ಲಾಘನೆ

ಧಾರ್ಮಿಕ ಆಚರಣೆ ಮನೆಗೆ ಸೀಮಿತವಾಗಲಿ: ಡಿಸಿ, ಎಸ್ಪಿ

ಧಾರ್ಮಿಕ ಆಚರಣೆ ಮನೆಗೆ ಸೀಮಿತವಾಗಲಿ: ಡಿಸಿ, ಎಸ್ಪಿ

ಉಡುಪಿ ಜಿಲ್ಲೆ: 6 ಮಂದಿ ಐಸೊಲೇಶನ್‌ ವಾರ್ಡ್‌ಗೆ

ಉಡುಪಿ ಜಿಲ್ಲೆ: 6 ಮಂದಿ ಐಸೊಲೇಶನ್‌ ವಾರ್ಡ್‌ಗೆ

Rain

ಉಡುಪಿ ವಿವಿಧೆಡೆಗಳಲ್ಲಿ ಉತ್ತಮ ಮಳೆ

ಇಂದು, ನಾಳೆ ಸೂಪರ್‌ ಮೂನ್‌

ಇಂದು, ನಾಳೆ ಸೂಪರ್‌ ಮೂನ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಅಭಿಯಾನಕ್ಕೆ ಭಾರತದ ಎರಡು ಫುಟ್ ಬಾಲ್ ಕ್ಲಬ್‌

ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಅಭಿಯಾನಕ್ಕೆ ಭಾರತದ ಎರಡು ಫುಟ್ ಬಾಲ್ ಕ್ಲಬ್‌

bng-tdy-3

ಮಕ್ಕಳಿಗಾಗಿ ಕಾರ್ಯಕ್ರಮ ರೂಪಿಸಿ ಕಳುಹಿಸಿ

ದಿಲ್ಲಿ ಟ್ರಾಫಿಕ್ ಪೊಲೀಸ್ ಗೆ ಕೋವಿಡ್ 19 ಸೋಂಕು, ಚಿಕಿತ್ಸೆಗಾಗಿ ಏಮ್ಸ್ ಗೆ ದಾಖಲು

ದಿಲ್ಲಿ ಟ್ರಾಫಿಕ್ ಪೊಲೀಸ್ ಗೆ ಕೋವಿಡ್ 19 ಸೋಂಕು, ಚಿಕಿತ್ಸೆಗಾಗಿ ಏಮ್ಸ್ ಗೆ ದಾಖಲು

08-April-6

ದಿನಬಳಕೆ ವಸ್ತುಗಳ ದರ ಹೆಚ್ಚಳಕ್ಕೆ ಹೈರಾಣಾದ ಸಾರ್ವಜನಿಕರು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು