ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಅತ್ಯಂತ ಆದರತೆಯಿಂದ ಉಪಚರಿಸಬೇಕು : ಸುನೀಲ್ ಕುಮಾರ್
Team Udayavani, May 8, 2021, 12:09 PM IST
ಕಾರ್ಕಳ : ವೈದ್ಯಕೀಯ ಚಿಕಿತ್ಸೆ ಬಯಸಿ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಅತ್ಯಂತ ಆದರತೆಯಿಂದ ಉಪಚರಿಸಬೇಕು. ಆಸ್ಪತ್ರೆ ಹೊರಗೆ , ವಾಹನಗಳಲ್ಲಿ ಕಾಯುವುದನ್ನು ತಪ್ಪಿಸಲು ಕಾರ್ಕಳ ಸರಕಾರಿ ಆಸ್ಪತ್ರೆ ಮುಂದೆ ಹಾಸಿಗೆಯುಳ್ಳ ಉಪಚರಿಸುವ ನಾಲ್ಕು ಬೆಡ್ ಗಳ ಆರೈಕೆ ಕೇಂದ್ರ ತೆರೆಯಲಾಗುವುದು ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ಶನಿವಾರ ತಾಲೂಕು ಆಸ್ಪತ್ರೆಗೆ ತೆರಳಿ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಜತೆ ಮಾತುಕತೆ ನಡೆಸಿ ಆಸ್ಪತ್ರೆಯ ಕೋವಿಡ್ ನಿರ್ವಹಣೆ ಕುರಿತು ಪರಿಶೀಲಿಸಿ ಮಾತನಾಡಿದರು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೆ ಸಮಸ್ಯೆಯಾಗಬಾರದು. ಈ ಕಾರಣಕ್ಕೆ ಬಹುಶ; ರಾಜ್ಯದಲ್ಲೆ ಇಂತಹದ್ದೊಂದು ವ್ಯವಸ್ಥೆ ಅಪರೂಪ. ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ತೆರೆಯಲಾಗುತ್ತಿದೆ ಎಂದರು. ಅನಂತರ ಅವರು ಆಸ್ಪತ್ರೆಯಲ್ಲಿ ತೆರೆಯಲಾಗುವ ಆಕ್ಸಿಜನ್ ಸೆಂಟರ್ ಜಾಗ ಪರಿಶೀಲಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ.ಆಡಳಿತಾಧಿಕಾರಿ ಡಾ.ಕೆ.ಎಸ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಡುಪಿ : ಮನೆಗೆ ನುಗ್ಗಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಕಾಪು ಬಿಲ್ಲವರ ಸಹಾಯಕ ಸಂಘದ ನೂತನ ಶ್ರೀ ನಾರಾಯಣ ಗುರುಜ್ಞಾನ ಮಂದಿರಕ್ಕೆ ಶಿಲಾನ್ಯಾಸ
ಗ್ರಾಮ ಪಂಚಾಯತ್ ನೌಕರರಿಗಿಲ್ಲ ಪಿಎಫ್, ಇಎಸ್ಐ ಸೌಲಭ್ಯ
ಕಾಪು: ಕೈಪುಂಜಾಲ್ ನಲ್ಲಿ ಮೀನುಗಾರಿಕಾ ದೋಣಿ ಅವಶೇಷ ಪತ್ತೆ; 15 ಲಕ್ಷ ರೂಪಾಯಿ ನಷ್ಟ
ಪಡುಬಿದ್ರಿ: ಹೆಜಮಾಡಿ ರಾ.ಹೆ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಬಸ್