ಕಟಪಾಡಿಯಲ್ಲಿ ಸದಾ ಟ್ರಾಫಿಕ್‌ ಜಾಮ್‌ ಕಿರಿಕಿರಿ


Team Udayavani, Apr 19, 2022, 1:25 PM IST

katapady

ಕಟಪಾಡಿ: ಅಕ್ಕಪಕ್ಕದ ಪ್ರಮುಖ ನಾಲ್ಕೂರುಗಳಿಗೆ ಸಂಪರ್ಕ ವನ್ನು ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಬಹುತೇಕ ಸಂದರ್ಭದಲ್ಲಿ ಹೆಚ್ಚಿದ ವಾಹನಗಳ ದಟ್ಟನೆಯಿಂದ ವಾಹನ ಸವಾರರಿಗೆ ಟ್ರಾಫಿಕ್‌ ಜಾಮ್‌ ಕಿರಿಕಿರಿ ಆಗುತ್ತಿದೆ.

ರಾ. ಹೆದ್ದಾರಿ 66ರ ಉಡುಪಿ- ಮಂಗಳೂರು (ಪೂರ್ವ ಪಾರ್ಶ್ವ), ಮಂಗಳೂರು-ಉಡುಪಿ ಪಶ್ಚಿಮ ಪಾರ್ಶ್ವ, ಇಕ್ಕೆಲಗಳಲ್ಲಿನ ಸರ್ವೀಸ್‌ ರಸ್ತೆಗಳು, ಶಿರ್ವ-ಕಟಪಾಡಿ, ಮಣಿಪುರ- ಕಟಪಾಡಿ, ಕೋಟೆ ಮಟ್ಟು-ಕಟಪಾಡಿ ಪ್ರದೇಶಗಳಿಂದ ಆಗಮಿಸುವ ವಾಹನ ಗಳು, ಜನಸಂಚಾರದಿಂದ ಕಟಪಾಡಿ ಜಂಕ್ಷನ್‌ ಟೆನ್ಷನ್‌ಮಯವಾಗಿದೆ.

ಕಟಪಾಡಿ ಜಂಕ್ಷನ್‌ಗೆ ಎಲ್ಲೆಡೆ ಯಿಂದಲೂ ವಾಹನಗಳು ಆಗಮಿಸುತ್ತವೆ. ಪರಿಸರದಲ್ಲಿ ಇರುವ ಸಭಾಭವನಗಳು, ಪ್ರಮುಖ ದೇವಾಲಯಗಳು, ಶಾಲಾ ಕಾಲೇಜುಗಳು, ಮಾರುಕಟ್ಟೆ, ವ್ಯಾಪಾರಿ ಗಳು, ಪ್ರಾರ್ಥನಾ ಮಂದಿರಗಳು ಜತೆಗೆ ಉದ್ಯೋಗ-ವ್ಯಾಪಾರಕ್ಕೆ ತೆರಳುವ ಸಾರ್ವಜನಿಕರು, ಪಾರ್ಕಿಂಗ್‌ ಅವ್ಯವಸ್ಥೆ ಗಳು ಎದ್ದು ಕಾಣುತ್ತಿವೆ.

ಬೆಳಗ್ಗಿನ ಸಮಯ, ಸಂಜೆಯ ವೇಳೆ, ಶುಭ ಸಮಾರಂಭಗಳ ಸಂದರ್ಭ ಕಟಪಾಡಿ ಜಂಕ್ಷನ್‌ ವಾಹನ ಸವಾರರಿಗೆ, ಪ್ರಯಾಣಿಕರಿಗೆ ಹೆಚ್ಚಿನ ಟೆನÒನ್‌ ಕೊಡುತ್ತದೆ. ಈ ವೇಳೆಯಲ್ಲಿ ಕಾನೂನು ಸುರಕ್ಷತೆ ಪಾಲನೆಯ ಪೊಲೀಸರೇ ವಾಹನಗಳ ಸುಗಮ ಸಂಚಾರ ಮತ್ತು ಜನರನ್ನು ಹೆದ್ದಾರಿ ದಾಟಿಸುವ ಕರ್ತವ್ಯವನ್ನು ರಾಷ್ಟ್ರೀಯ ಒ ವಿಜಯ ಆಚಾರ್ಯ ಕಟಪಾಡಿ ವಿಶೇಷ ದಿನಗಳಲ್ಲಿ ಹೆಚ್ಚುವ ವಾಹನಗಳ ದಟ್ಟನೆಯಿಂದ ಉಡುಪಿ, ಮಂಗಳೂರು ಮತ್ತು ಶಿರ್ವ ಭಾಗದ ವಾಹನಗಳು ಸುಮಾರು 3 ಕಿ.ಮೀ.ನಷ್ಟು ಉದ್ದಕ್ಕೂ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಳ್ಳುವುದಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳು ಟ್ರಾಫಿಕ್‌ ನಿಯಂತ್ರಣಕ್ಕಾಗಿ ಶಿರ್ವ ಭಾಗದಿಂದ ಹಾಗೂ ಕಟಪಾಡಿ ಪೇಟೆಯಿಂದ ಬರುವ ವಾಹನಗಳು ನೇರವಾಗಿ ಹೆದ್ದಾರಿಗೆ ಪ್ರವೇಶಿಸದಂತೆ ನಿರ್ಬಂಧಿಸುತ್ತಾರೆ. ಬಳಿಕ ವಾಹನಗಳು ಸರ್ವೀಸ್‌ ರಸ್ತೆಯನ್ನು ಬಳಸಿ ಪಾಂಗಾಳ-ಉದ್ಯಾವರದತ್ತ ಸಂಚರಿಸುವಂತೆ ಮಾಡುವ ಮೂಲಕ ವಾಹನ ದಟ್ಟನೆಯನ್ನು ತಹಬಂದಿಗೆ ತರಲಾಗುತ್ತದೆ. ಉಡುಪಿ ಕಡೆಯಿಂದ ಕಟಪಾಡಿ ಪೇಟೆಗೆ ತೆರಳುವವರೂ ಕೂಡ ದೂರದ ಪಾಂಗಾಳಕ್ಕೆ ಸುತ್ತು ಬಂದು ಕಟಪಾಡಿ ಪ್ರವೇಶಿಸಬೇಕಾದ ಅನಿವಾರ್ಯತೆ ಇಲ್ಲಿದೆ. ವಿಶೇಷ ದಿನಗಳಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್‌ ಜಾಮ್‌ ಹೆದ್ದಾರಿ ನಿರ್ಮಿಸುವ ಕಾಲದಿಂದಲೂ ನಿಭಾಯಿಸುತ್ತಾ ಬಂದಿದ್ದಾರೆ. ಕೆಲವೊಮ್ಮೆ 8-10ಕ್ಕೂ ಅಧಿಕ ಪೊಲೀಸರು ಟ್ರಾಫಿಕ್‌ ಕಂಟ್ರೋಲಿಂಗ್‌ ನಿಭಾಯಿಸುತ್ತಿದ್ದು, ಸಾರ್ವ ಜನಿಕರೂ ಕೈ ಜೋಡಿಸುವುದೂ ಇದೆ.

ವ್ಯಾಪಾರ, ವಹಿವಾಟು, ಸದಾ ಜನದಟ್ಟಣೆ, ವಾಹನ ದಟ್ಟನೆಯಿಂದ ಕೂಡಿದ ಕಟಪಾಡಿ ಹೆದ್ದಾರಿಯಲ್ಲಿ ‘ಯು’ ಟರ್ನ್ ಇಲ್ಲ. ಒಂದೋ ಉದ್ಯಾವರಕ್ಕೆ ತೆರಳಿ ‘ಯು’-ಟರ್ನ್ ಹೊಡೆದು ಬರಬೇಕು. ಮತ್ತೂಂದೆಡೆ ಪಾಂಗಾಳಕ್ಕೆ ತೆರಳಿ ಯು-ಟರ್ನ್ ಹೊಡೆದು ಬರಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಕಟಪಾಡಿ ಪೇಟೆ ಯಲ್ಲಿನ ಜಂಕ್ಷನನ್ನೇ ವಾಹನಗಳು, ಜನರು ಬಳಸಬೇಕಾದ ಅನಿವಾರ್ಯತೆ ಇದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಮುತುವರ್ಜಿಯಿಂದ ಗಮನ ಹರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಗಳ ಸುಗಮ ಸಂಚಾರಕ್ಕೆ ಸೂಕ್ತ ಅವಕಾಶವನ್ನು ಕಲ್ಪಿಸಬೇಕಿದೆ ಎಂದು ವಾಹನ ಸವಾರರು, ಸ್ಥಳೀಯರು, ಟೂರಿಸ್ಟ್‌ ವಾಹನದವರು, ಪಾದ ಚಾರಿಗಳು, ವ್ಯಾಪಾರಿಗಳು, ಸಾರ್ವ ಜನಿಕರು ಆಗ್ರಹಿಸಿದ್ದಾರೆ.

ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ

ಸ್ಥಳೀಯಾಡಳಿತದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಸಾಧ್ಯ. ಈ ಮೊದಲೇ ಸಮಸ್ಯೆ ನಿವಾರಣೆಗಾಗಿ ಹೆದ್ದಾರಿ ಇಲಾಖೆಯ ಗಮನಕ್ಕೆ ತರಲಾಗಿದೆ. ವಯೋವೃದ್ಧರು, ಶಾಲಾ ಮಕ್ಕಳು ಸರ್ವೀಸ್‌ ರಸ್ತೆ – ಪೂರ್ವ ಮತ್ತು ಪಶ್ಚಿಮ ಪಾರ್ಶ್ವಗಳ ರಾ.ಹೆದ್ದಾರಿಯನ್ನು ಬಳಸಿಕೊಂಡು ರಸ್ತೆಯನ್ನು ದಾಟ ಬೇಕಾದಂತಹ ಸಂಕಷ್ಟದ ಅನಿವಾರ್ಯ ಪರಿಸ್ಥಿತಿಯೂ ಇದೆ -ಇಂದಿರಾ ಎಸ್‌. ಆಚಾರ್ಯ, ಅಧ್ಯಕ್ಷರು, ಕಟಪಾಡಿ ಗ್ರಾ.ಪಂ.

ಪಾದಚಾರಿಗಳ ಸಹಿತ ವಾಹನಗಳಿಗೂ ಸಮಸ್ಯೆ

ಅಂಡರ್‌ಪಾಸ್‌-ಮೇಲ್ಸೇತುವೆ ನಿರ್ಮಾಣವೇ ಪರಿಣಾಮಕಾರಿ ಬಹುತೇಕ ಸಂದರ್ಭದಲ್ಲಿ ಪಾದಚಾರಿಗಳ ಸಹಿತ ವಾಹನಗಳೂ ಸಮಸ್ಯೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್‌ಗಳು ಸಮಸ್ಯೆ ಪರಿಹರಿಸಲು ಸೂಕ್ತ ಯೋಜನೆ ರೂಪಿಸಬೇಕಾಗಿದೆ. ಮಮತಾ ವೈ. ಶೆಟ್ಟಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಟಪಾಡಿ ಗ್ರಾ.ಪಂ. ಕಟಪಾಡಿ

ಜಂಕ್ಷನ್‌ನಲ್ಲಿ ಸಮಸ್ಯೆ ನಿವಾರಣೆಗಾಗಿ ಅಂಡರ್‌ ಪಾಸ್‌ (ಕಿನ್ನಿಮೂಲ್ಕಿ ಮಾದರಿ) ಅಥವಾ ಮೇಲ್ಸೇತುವೆ (ಕಾಪು ಮಾದರಿ) ನಿರ್ಮಾಣವೇ ಪರಿಣಾಮಕಾರಿ. -ದಯಾನಂದ, ಎ.ಎಸ್.ಐ. , ಕಾಪು ಪೊಲೀಸ್‌ ಠಾಣೆ.

ವಿಜಯ ಆಚಾರ್ಯ ಕಟಪಾಡಿ

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.