ಸಾತೇರಿ ಕಾಲುಸಂಕದಲ್ಲಿ ನಿತ್ಯವೂ ಸರ್ಕಸ್‌! ಇಲ್ಲೂಇದೆ ಪ್ರಾಣ ಅಂಗೈಯಲ್ಲಿರಿಸಿ ದಾಟುವ ಸ್ಥಿತಿ


Team Udayavani, Aug 10, 2022, 7:10 AM IST

ಸಾತೇರಿ ಕಾಲುಸಂಕದಲ್ಲಿ ನಿತ್ಯವೂ ಸರ್ಕಸ್‌! ಇಲ್ಲೂಇದೆ ಪ್ರಾಣ ಅಂಗೈಯಲ್ಲಿರಿಸಿ ದಾಟುವ ಸ್ಥಿತಿ

ಬೈಂದೂರು: ಕಾಲ್ತೋಡು ಸಮೀಪದ ಬಿಜಮಕ್ಕಿಯ ಅಪಾಯಕಾರಿ ಕಾಲುಸಂಕದಿಂದ ಏಳು ವರ್ಷದ ಬಾಲೆಯೊಬ್ಬಳು ಕಾಲುಜಾರಿ ನೀರುಪಾಲಾಗಿದ್ದಾಳೆ. ಇಲ್ಲೇ ಅನತಿ ದೂರದ ಎಳಜಿತ್‌ ಗ್ರಾಮದ ಸಾತೇರಿ ಹೊಳೆಯ ಕಾಲುಸಂಕವೂ ಅಪಾಯದ ಮುನ್ಸೂಚನೆ ನೀಡುತ್ತಿದೆ. ಅವಘಡ ಸಂಭವಿಸುವುದಕ್ಕೆ ಮುನ್ನವೇ ಜನಪ್ರತಿನಿಧಿಗಳು, ಆಡಳಿತ ಎಚ್ಚರ ವಹಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಮಳೆಗಾಲದಲ್ಲಿ ಪ್ರತೀ ದಿನ ಈ ಕಾಲುಸಂಕ ದಾಟಿ ಹತ್ತಾರು ವಿದ್ಯಾರ್ಥಿಗಳು ತುಂಬಿ ಹರಿಯುವ ಹೊಳೆ ದಾಟುತ್ತಾರೆ. ಕಾಲ್ತೋಡು ಘಟನೆಯ ಬಳಿಕ ಇಲ್ಲಿನ ಜನರ ಆತಂಕ ಇನ್ನಷ್ಟು ಹೆಚ್ಚಿದೆ.

ಹಲವು ಬಾರಿ ಮನವಿ
ಇಲ್ಲಿನ ಸಮಸ್ಯೆ ಕುರಿತು ಉದಯವಾಣಿ ಎರಡೆರಡು ಬಾರಿ ವರದಿ ಪ್ರಕಟಿಸಿತ್ತು. ಗೋಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಎಳಜಿತ್‌, ಸಾತೇರಿ, ಬಾಳೆಗದ್ದೆ ನಡುವಣ ಈ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ.

ಊರವರೇ ನಿರ್ಮಿಸಿರುವ ತಾತ್ಕಾಲಿಕ ಮರದ ದಿಮ್ಮಿಯ ಕಾಲುಸಂಕ ಒಂದೆರಡು ಬಾರಿ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಸಂಪರ್ಕ ಅನಿವಾರ್ಯ; ಹೀಗಾಗಿ ಮತ್ತೆ ನಿರ್ಮಿಸಿಕೊಂಡಿದ್ದಾರೆ. ಪುಟಾಣಿ ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೆ ಎಲ್ಲರೂ ಈ ಸಂಕ ದಾಟಲು ಜೀವ ಕೈಯಲ್ಲಿ ಹಿಡಿದು ಸರ್ಕಸ್‌ ಮಾಡಬೇಕಿದೆ. ಶಾಶ್ವತ ಸೇತುವೆಗಾಗಿ ಹಲವು ಬಾರಿ ಮನವಿ ನೀಡಿದರೂ ಸ್ಪಂದನ ದೊರೆತಿಲ್ಲ.

ಅಪಾಯ ಕಟ್ಟಿಟ್ಟ ಬುತ್ತಿ
ಕಳೆದ ವರ್ಷ ಈ ಸಂಕದಿಂದ ಒಂದಿಬ್ಬರು ಮಕ್ಕಳು ನೀರಿಗೆ ಬಿದ್ದಿದ್ದು ಸ್ಥಳೀಯರು ರಕ್ಷಿಸಿದ್ದರು. ಈ ಸೇತುವೆಯ ಮೂಲಕ ಸಾಗದಿದ್ದರೆ 10 ಕಿ.ಮೀ. ಸುತ್ತು ಬಳಸಿ ಸಾಗಬೇಕು. ಅಪಾಯವೆಂಬುದು ಗೊತ್ತಿದ್ದರೂ ಕಾಲುಸಂಕದ ಬಳಕೆ ಅನಿವಾರ್ಯವಾಗಿದೆ. ಬೈಂದೂರು ಭಾಗದಲ್ಲಿ ಇಂತಹ ಅನೇಕ ಕಾಲು ಸಂಕಗಳಿವೆ. ಸಾಂತೇರಿ ಕಾಲುಸಂಕ ಅತ್ಯಂತ ಅಪಾಯಕಾರಿಯಾಗಿದೆ.

ಜಿಲ್ಲಾಡಳಿತಕ್ಕೆ ಮನವಿ
ಸಾತೇರಿ ಕಾಲುಸಂಕ ಇರುವಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಪ್ರಕೃತಿ ವಿಕೋಪ ನಿಧಿಯಲ್ಲಿ ಅನುದಾನ ನೀಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ಗೋಳಿಹೊಳೆ ಗ್ರಾ.ಪಂ. ಪಿಡಿಒ ಮಾಧವ ತಿಳಿಸಿದ್ದಾರೆ.

ಬಹುತೇಕ ಕಡೆ ಇದೇ ಸ್ಥಿತಿ
ಕಾಲ್ತೋಡು, ಸಾಂತೇರಿ ಮಾತ್ರ ಅಲ್ಲ; ಕರಾವಳಿ ಮತ್ತು ಮಲೆನಾಡಿನ ಅನೇಕ ಕಡೆ ಹಳ್ಳ, ಹೊಳೆಗಳನ್ನು ದಾಟಲು ಇಂತಹ ಕಾಲುಸಂಕಗಳೇ ಗತಿ. ನಿತ್ಯವೂ ಇಂತಹ ಸಂಕ ದಾಟಬೇಕಾದ ಸ್ಥಿತಿ ದಕ್ಷಿಣ ಕನ್ನಡದ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ, ಉಡುಪಿ ಜಿಲ್ಲೆಯ ಹೆಬ್ರಿ, ಬೈಂದೂರು, ಕುಂದಾಪುರ ಮತ್ತಿತರ ತಾಲೂಕುಗಳಲ್ಲಿ ಇದೆ. ಬೇಸಗೆಯಲ್ಲಿ ಬಿದ್ದರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಬಹುದು. ಮಳೆಗಾಲದಲ್ಲಿ ಅಗಲ ಕಿರಿದಾದ ಈ ಹಳ್ಳ-ಹೊಳೆಗಳು ತುಂಬಿ ಹರಿಯುತ್ತವೆ. ಬಿದ್ದರೆ ಪುಟ್ಟ ಮಕ್ಕಳಷ್ಟೇ ಅಲ್ಲ; ದೊಡ್ಡವರು ಕೂಡ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಬಹುದು. ಇಂಥ ಎಲ್ಲ ಕಡೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು, ಆಡಳಿತ ಮುತುವರ್ಜಿ ವಹಿಸಬೇಕಿದೆ.

ಗುಡ್ಡಗಾಡು ಪ್ರದೇಶವಾದ ಕಾರಣ ಹಲವೆಡೆ ಕಾಲುಸಂಕದ ಸಮಸ್ಯೆಗಳಿವೆ. ಕಾಲ್ತೋಡಿನ 17 ಕಡೆ ಕಾಲುಸಂಕಗಳಿದ್ದು ಅವುಗಳಲ್ಲಿ ಐದು ಕಡೆ ಶಾಶ್ವತ ಸೇತುವೆ ಆಗಿದೆ. ಸಾತೇರಿ ಕೂಡ ಗಮನಕ್ಕೆ ಬಂದಿದ್ದು ಶೀಘ್ರ ಸೂಕ್ತ ಕ್ರಮಕ್ಕೆ ಕೈಗೊಳ್ಳಲು ಜಿಲ್ಲಾಡಳಿತದಲ್ಲಿ ಇರುವ ಅವಕಾಶದಲ್ಲಿ ಸ್ಪಂದಿಸುವೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಮಂಜೂ ರಾತಿ ದೊರೆತಿಲ್ಲ. ಸರಕಾರ ಅನುದಾನ ಮೀಸಲಿಟ್ಟಿಲ್ಲ. ಕಾಲ್ತೋಡು ಘಟನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ, ಈ ಸಂಕದ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಅವಘಡ ಸಂಭವಿಸುವ ಮೊದಲೇ ಸರಕಾರ, ಇಲಾಖೆ ಗಮನ ಹರಿಸಬೇಕಾಗಿದೆ.
– ಆನಂದ ಪೂಜಾರಿ, ಶೆಟ್ಟಿ, ಸ್ಥಳೀಯರು

ಟಾಪ್ ನ್ಯೂಸ್

1-SDDADSD

1984 ಆಧುನಿಕ ಭಾರತದ ಇತಿಹಾಸದಲ್ಲಿ ಕರಾಳ ವರ್ಷ: ಯುಎಸ್ ಸೆನೆಟರ್

“ಕಾಂತಾರ”- 2 ಬರುತ್ತಾ? ದೈವದ ಪಾತ್ರ ಮಾಡುವ ಮುನ್ನ ರಿಷಭ್‌ ಪೂರ್ವ ತಯಾರಿ ಹೇಗಿತ್ತು?

“ಕಾಂತಾರ- 2” ಬರುತ್ತಾ? ದೈವದ ಪಾತ್ರ ಮಾಡುವ ಮುನ್ನ ರಿಷಬ್ ಪೂರ್ವ ತಯಾರಿ ಹೇಗಿತ್ತು?

2

ಆಯುಷ್ಮಾನ್‌ ಕಾರ್ಡ್‌; ದೇಶಾದ್ಯಂತ ಬಳಸಬಹುದಾದ ಹೊಸ ಡಿಜಿಟಲ್‌

ಬಾಪು ಅನ್ಯಾಯದ ವಿರುದ್ಧ ದೇಶವನ್ನು ಒಗ್ಗೂಡಿಸಿದಂತೆ ನಾವು ಭಾರತವನ್ನು ಒಗ್ಗೂಡಿಸುತ್ತೇವೆ

ಬಾಪು ಅನ್ಯಾಯದ ವಿರುದ್ಧ ದೇಶವನ್ನು ಒಗ್ಗೂಡಿಸಿದಂತೆ ನಾವು ಭಾರತವನ್ನು ಒಗ್ಗೂಡಿಸುತ್ತೇವೆ

1-dwqwqq

ಭಾರತ ಮತ್ತು ತೈವಾನ್‌ಗಳು ಸರ್ವಾಧಿಕಾರದ ಬೆದರಿಕೆಗೆ ಒಳಗಾಗಿವೆ: ತೈಪೆಯ ರಾಯಭಾರಿ

ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದು: ಡಿಕೆಶಿ ಕಣ್ಣೀರಿಗೆ ಸಿಟಿ ರವಿ ವ್ಯಂಗ್ಯ

ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದು: ಡಿಕೆಶಿ ಕಣ್ಣೀರಿಗೆ ಸಿಟಿ ರವಿ ವ್ಯಂಗ್ಯ

ಕಣ್ತುಂಬ ಕನಸು, ಕೈತುಂಬಾ ಅವಕಾಶ: ಬಿಝಿಯಾದರು ನಿಶ್ವಿಕಾ ನಾಯ್ಡು

ಕಣ್ತುಂಬ ಕನಸು, ಕೈತುಂಬಾ ಅವಕಾಶ: ಬಿಝಿಯಾದರು ನಿಶ್ವಿಕಾ ನಾಯ್ಡುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡಿಯಾಳಿಯಲ್ಲಿ “ಉಡುಪಿ ದಾಂಡಿಯಾ-2022′ ಸಂಪನ್ನ

ಕಡಿಯಾಳಿಯಲ್ಲಿ “ಉಡುಪಿ ದಾಂಡಿಯಾ-2022′ ಸಂಪನ್ನ

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ವರದಕ್ಷಿಣೆ ಕಿರುಕುಳ: ಹಲ್ಲೆ: ದೂರು ದಾಖಲು

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

ಮೂಳೂರು ಕಡಲ ಕಿನಾರೆಯಲ್ಲಿ ತೊರಕೆ ಮೀನಿನ ಸುಗ್ಗಿ… ಮೀನುಗಾರರು ಫುಲ್ ಖುಷ್

ಉಡುಪಿ: ಗಾಂಜಾ ಪ್ರಕರಣ; ಆರೋಪಿಗೆ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಉಡುಪಿ: ಗಾಂಜಾ ಪ್ರಕರಣ; ಆರೋಪಿಗೆ 3 ವರ್ಷ ಕಠಿನ ಕಾರಾಗೃಹ ಶಿಕ್ಷೆ

tdy-17

ಕಾರ್ಕಳ: ಕೃಷಿ ಹೊಂಡಕ್ಕೆ ಬಿದ್ದು ಕಾರ್ಮಿಕ ಮಹಿಳೆ ಸಾವು

MUST WATCH

udayavani youtube

ದಿನ7 | ಕಾಳರಾತ್ರಿ ದೇವಿ

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

udayavani youtube

ಭಾಷಣ ಮಾಡದೆ… ಜನರ ಬಳಿ ಕ್ಷಮೆ ಕೇಳಿದ ಪ್ರಧಾನಿ ಮೋದಿ… ಕಾರಣ ಇಲ್ಲಿದೆ…

udayavani youtube

ದಿನ6| ಕಾತ್ಯಾಯಿನಿ ದೇವಿ|ಕಾತ್ಯಾಯಿನಿ ದೇವಿ ಪೂಜೆಯ ಪ್ರಯೋಜನವೇನು ಗೊತ್ತೇ. | Udayavani

ಹೊಸ ಸೇರ್ಪಡೆ

1-SDDADSD

1984 ಆಧುನಿಕ ಭಾರತದ ಇತಿಹಾಸದಲ್ಲಿ ಕರಾಳ ವರ್ಷ: ಯುಎಸ್ ಸೆನೆಟರ್

ಕೈಗಾರಿಕೆ ಸ್ಥಾಪನೆ ಕೈಬಿಡುವ ಪ್ರಶ್ನೆ ಸರ್ಕಾರಕ್ಕೆ ಬಿಟ್ಟಿದ್ದು: ಶಾಸಕ

ಕೈಗಾರಿಕೆ ಸ್ಥಾಪನೆ ಕೈಬಿಡುವ ಪ್ರಶ್ನೆ ಸರ್ಕಾರಕ್ಕೆ ಬಿಟ್ಟಿದ್ದು: ಶಾಸಕ

ಹಿರಿಯರನ್ನು ಮಕ್ಕಳಂತೆ ಆರೈಕೆ ಮಾಡಿ

ಹಿರಿಯರನ್ನು ಮಕ್ಕಳಂತೆ ಆರೈಕೆ ಮಾಡಿ

totapuri

ತೋತಾಪುರಿ ನಗೆಹಬ್ಬ; ಜಗ್ಗೇಶ್‌ ಕಾಮಿಡಿ ಕಮಾಲ್‌

rape

17 ವರ್ಷದ ಹುಡುಗಿಯ ಮೇಲೆ 8 ಮಂದಿಯಿಂದ ಸಾಮೂಹಿಕ ಅತ್ಯಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.