ಕುಂದಾಪುರದ ಯುವತಿಯಿಂದ ಕಾಶ್ಮೀರಕ್ಕೆ ಏಕಾಂಗಿಯಾಗಿ ಬೈಕ್ ಯಾತ್ರೆ!

ದಿನಕ್ಕೆ ಗರಿಷ್ಠ 700ಕಿ.ಮೀ ರೈಡ್‌ ..!!, ಮಹಿಳಾ ಸಶಕ್ತಿಕರಣದ ಜಾಗೃತಿಯ ಸಂದೇಶ

Team Udayavani, Jun 3, 2022, 9:53 PM IST

1-fdsfsdf

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕುಂಭಾಶಿಯಿಂದ ಕಾಶ್ಮೀರದ ತನಕ ಸುಮಾರು 7ಸಾವಿರ ಕಿ.ಲೋ ಮೀಟರ್‌ ಪ್ರಯಾಣ, 15 ದಿನಗಳ ಗುರಿ, ಮಹಿಳಾ ಸಶಕ್ತಿಕರಣದ ಜಾಗೃತಿಯ ಸಂದೇಶದೊಂದಿಗೆ ಕುಂಭಾಶಿಯ ಸಾಕ್ಷಿ ಹೆಗಡೆ ಅಂತಹದ್ದೊಂದು ಸಾಹಸಕ್ಕೆ ಮುಂದಾದ ಯುವತಿ.

ಏಕಾಂಗಿಯಾಗಿ ಬೈಕ್ ಯಾತ್ರೆ ಹೊರಟು ಕಾಶ್ಮೀರ ತಲುಪಿ, ಮತ್ತೆ ಅಲ್ಲಿಂದ ಉಜ್ಜಯಿನಿ ತನಕ ಹಿಂದಿರುಗಿದ್ದು , ಜೂ.6 ರಂದು ಕುಂಭಾಶಿಯ ತನ್ನ ನಿವಾಸಕ್ಕೆ ಬಂದು ತಲುಪಲಿದ್ದಾರೆ.

ಮೂಲತಃ ಇಡುಗುಂಜಿಯವರಾದ, ಪ್ರಸ್ತುತ ಕುಂಭಾಶಿಯಲ್ಲಿ ನೆಲೆಸಿರುವ ಶಿವರಾಮ ಹೆಗಡೆ ಹಾಗೂ ಪುಷ್ಪಾ ದಂಪತಿಗಳ ತೃತೀಯ ಪುತ್ರಿಯಾದ ಸಾಕ್ಷಿ, ಕುಂದಾಪುರ ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾಳೆ. ಬೈಕ್ ಬಗ್ಗೆ ಅತೀವ ಕ್ರೇಜ್‌ ಹೊಂದಿದ್ದ ಈಕೆ ಸ್ನೇಹಿತರ ಸಹಾಯದಿಂದ ಬೈಕ್ ಚಲಾಯಿಸೋದನ್ನೂ ಕಲಿತುಕೊಂಡಿದ್ದಳು.ಕಳೆದ ಒಂದೂವರೆ ತಿಂಗಳ ಹಿಂದೆ ಪಲ್ಸರ್‌ ಎನ್‌.ಎಸ್‌ 125ಸಿಸಿ ಬೆ„ಕ್‌ ಖರೀದಿಸಿ, ರಸ್ತೆ ಸುರಕ್ಷತೆ ಬಗ್ಗೆ ಸೋಲೋ ಬೈಕ್ ರೈಡ್‌ ಪ್ರಭಾವಿತಳಾದ ಇವಳು ಕಾಶ್ಮೀರ ಟ್ರಿಪ್‌ ಪ್ಲ್ಯಾನ್‌ ಮಾಡಿದ್ದಳು. ಅದಕ್ಕೆ ಮನೆಯವರ ಬೆಂಬಲ, ಸ್ನೇಹಿತರು ಹಾಗೂ ಕುಂದಾಪುರ ಹಿಂದೂ ಜಾಗರಣ ವೇದಿಕೆಯವರು ಸಂಪೂರ್ಣ ನೆರವು ನೀಡಿ ಪ್ರೋತ್ಸಾಹಿಸಿದರು.

ಮೇ.25 ರಂದು ಬೆಳಿಗ್ಗೆ 7.30ಕ್ಕೆ ಕುಂಭಾಶಿಯಿಂದ ಹೊರಟ ಸಾಕ್ಷಿ, ಸಂಜೆ 5 ಗಂಟೆಯ ವೇಳೆಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸುಮಾರು 520 ಕಿ.ಮೀ ದೂರ ರೈಡ್‌ ಮಾಡಿದ್ದಾಳೆ. 2ನೇ ದಿನದಲ್ಲಿ 380 ಕಿ.ಮೀ ಸಂಚಾರಿಸಿ ಪನ್ವೇಲ್‌ ತಲುಪಿದ್ದಾಳೆ. ಈ ಮಧ್ಯೆ ಗರಿಷ್ಠ 700ಕಿ.ಮೀ ರೈಡ್‌ ಮಾಡಿದ್ದೂ ಇದೆ. 6ನೇ ದಿನ ಕಾಶ್ಮೀರ ತಲುಪಿದ್ದಳು. ಅಲ್ಲಿಂದ ಚಂಡಿಘಡ್, ಹರಿಯಾಣ ರಾಜ್ಯಗಳನ್ನು ದಾಟಿ ಜೂನ್‌ 3ರಂದು ಮಧ್ಯಪ್ರದೇಶದ ಉಜ್ಜಯಿನಿಗೆ ಹಿಂದಿರುಗಿದ್ದಾಳೆ.

ಪ್ರತಿದಿನ ಬೆಳಗ್ಗೆ 4 ಗಂಟೆಗೆ ಹೊರಟರೆ ಸಂಜೆ 7 ಗಂಟೆಯ ಒಳಗೆ ಯಾವುದಾದರೂ ನಗರದಲ್ಲಿ ರೂಮ್‌ನಲ್ಲಿ ಉಳಿದುಕೊಳ್ಳೋದು. ಮತ್ತೆ ರೈಡ್‌, ದಾರಿ ಮಧ್ಯೆ ಸಿಗುವ ಮಹಿಳೆಯೊಂದಿಗೆ ಒಂದಿಷ್ಟು ಮಾತುಕತೆ, ಪ್ರೇರಣೆ ತುಂಬುವ ಕೆಲಸ. ಉತ್ತರ ಭಾರತದ ಊಟ ತಿಂಡಿ, ಮಾರ್ಗ ಮಧ್ಯದಲ್ಲಿ ಹತ್ತಿರ ಸಿಗುವ ಪ್ರವಾಸಿ ತಾಣಗಳಿಗೂ ಭೇಟಿ. ಇದು ಸಾಕ್ಷಿಯ ಸದ್ಯದ ದಿನಚರಿ.

ಕುಂಭಾಶಿಯಿಂದ ಕಾಶ್ಮೀರ ತಲುಪುವ ಹಂಬಲ ವ್ಯಕ್ತಪಡಿಸಿದಾಗ ಮನೆಯವರ ಒಪ್ಪಿಗೆ ನೀಡಿದರು. ಬಳಿಕ ಸ್ನೇಹಿತರು ಹಾಗೂ ಕುಂದಾಪುರ ಹಿಂದೂ ಜಾಗರಣ ವೇದಿಕೆಯವರು ಬೈಕ್‌ ರೈಡಿಗೆ ಬೇಕಾಗುವ ಅಗತ್ಯ ವಸ್ತುಗಳು, ಪೆಟ್ರೋಲ್‌, ಊಟ, ವಸತಿಯ ವೆಚ್ಚವನ್ನು ನೀಡಿ ಸಹಕರಿಸಿದ್ದಾರೆ. ಮಹಿಳಾ ಸಶಕ್ತಿಕರಣದ ಜಾಗೃತಿಯ ಮೂಡಿಸುವ ಜತೆಗೆ ಸಾಮಾಜಿಕ ಕಾರ್ಯದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಬಯಕೆಗೆ ವೇದಿಕೆ ದೊರಕಿದ್ದು ನಿಜಕ್ಕೂ ಸಂತಸ ತಂದಿದೆ.
– ಸಾಕ್ಷಿ ಹೆಗಡೆ ಕುಂಭಾಶಿ

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ (ವರದಿ)

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.