ಸೋಂಕು ತಡೆಗೆ “ಕಾಂಟ್ಯಾಕ್ಟ್ಲೆಸ್‌ ವ್ಯವಸ್ಥೆ’

Team Udayavani, May 12, 2020, 9:17 AM IST

air 123

ಬೆಂಗಳೂರು: ಭವಿಷ್ಯದಲ್ಲಿಯೂ ಕೊರೊನಾ ಹಾವಳಿ ಮುಂದುವರಿಯುವ ಮುನ್ಸೂಚನೆ ಇದ್ದು, ಸೋಂಕಿನ ಕೇಂದ್ರಬಿಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ವನ್ನು ಮತ್ತಷ್ಟು ಹೈಟೆಕ್‌ ಮಾಡಲು  ಬಿಐಎಎಲ್‌ ನಿರ್ಧರಿಸಿದೆ. ಇದಕ್ಕಾಗಿ “ಕಾಂಟ್ಯಾಕ್ಟ್ಲೆಸ್‌ ವ್ಯವಸ್ಥೆ’ ಜಾರಿಗೆ ಉದ್ದೇಶಿಸಲಾಗಿದೆ.

ಲಾಕ್‌ಡೌನ್‌ ಪೂರ್ಣ ಗೊಂಡು ಜನಜೀವನ ಸಂಪೂರ್ಣವಾಗಿ ಸಹಜ ಸ್ಥಿತಿಗೆ ರಳಿದ ನಂತರ ಬಂದಿಳಿಯುವ ಪ್ರಯಾಣಿಕರು, ಮತ್ತು  ಅವರೊಂದಿಗೆ ಸಂಪರ್ಕಕ್ಕೆ ಬರುವ ನಿಲ್ದಾಣದ ಸಿಬ್ಬಂದಿ ಹಿತದೃಷ್ಟಿಯಿಂದ ಸಾಧ್ಯವಾದಷ್ಟು “ಟಚ್‌ ಪಾಯಿಂಟ್‌’ಗಳನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಮೊದಲ ಬಾರಿಗೆ ಸೆನ್ಸಾರ್‌ ಆಧಾರಿತ  ಟ್ಯಾಕ್ಟ್ಲೆಸ್‌ ವ್ಯವಸ್ಥೆ ಪರಿಚಯಿಸಲು ಸಿದಟಛಿತೆ ನಡೆದಿದೆ.

ಶೀಘ್ರದಲ್ಲೇ ಈ ಸೇವೆ ಆರಂಭವಾಗಲಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬಂದಿಳಿಯುವ ಅಥವಾಪ್ರವೇಶಿಸುವ ಏರ್‌ಬ್ರಿಡ್ಜ್ ಪ್ರವೇಶ, ಟ್ರಾಲಿ ಬ್ಯಾಗ್‌, ಸೆಕ್ಯುರಿಟಿ ಕೌಂಟರ್‌, ಟಿಕೆಟ್‌ ಕೌಂಟರ್‌, ಇಮಿಗ್ರೇಷನ್‌ ಕೌಂಟರ್‌, ವಾಷ್‌ ರೂಂ ಸೇರಿ ಹತ್ತಾರು ಕಡೆ ಟಚ್‌ ಪಾಯಿಂಟ್‌ಗಳು ನಿಲ್ದಾಣಗಳಲ್ಲಿ ಬರುತ್ತವೆ. ಜತೆಗೆ ಸಂವಹನ ಪ್ರಕ್ರಿಯೆಯೂ ಅಲ್ಲೆಲ್ಲಾ ನಡೆಯುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಕೊರೊನಾವೈರಸ್‌  ಸೋಂಕಿಗೆ ಇದು ಕಾರಣವಾಗಬಹುದು.

ಹೀಗಾಗಿ ಅಲ್ಲೆಲ್ಲಾ ಸಾಧ್ಯವಾದಷ್ಟು ಪ್ರಯಾಣಿಕರೊಂದಿಗಿನ ಸಂವಹನ ಕಡಿತ, ಟಚ್‌ ಪಾಯಿಂಟ್‌ ತಗ್ಗಿಸಲು ಕಾಂಟ್ಯಾಕ್ಟ್ ಲೆಸ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಅತ್ಯಂತ ಅನಿವಾರ್ಯ ಇದ್ದಲ್ಲಿ ಮಾತ್ರ ಭದ್ರತೆ ದೃಷ್ಟಿಯಿಂದ ಪ್ರಯಾಣಿಕರೊಂದಿಗೆ ಸಂವಹನ ನಡೆಸಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಬಿಐಎಎಲ್‌ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಿದೇಶಿ ಪ್ರಯಾಣಿಕರೇ ಹೆಚ್ಚು: ಬಿಐಎಎಲ್‌  ನೀಡಿರುವ ಅಂಕಿ-ಅಂಶಗಳ ಪ್ರಕಾರ 2019ರ ಅಂತ್ಯಕ್ಕೆ 33.65 ದಶಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಹಿಂದಿನ ವರ್ಷಕ್ಕೆ ಅಂದರೆ 2018ಕ್ಕೆ ಹೋಲಿಸಿದರೆ ಶೇ.4.1 ಪ್ರಯಾಣಿಕರ ಸಂಖ್ಯೆಯಲ್ಲಿ ವೃದಿಟಛಿಯಾಗಿದೆ. ಅದರಲ್ಲೂ ವಿದೇಶಿ ಪ್ರಯಾಣಿಕರ ಸಂಖ್ಯೆ 4.27 ದಶಲಕ್ಷರಿಂದ 4.87 ದಶಲಕ್ಷ ತಲುಪಿದ್ದು, ಶೇ.14 ಏರಿಕೆ ಕಂಡುಬಂದಿದೆ.

ದೇಶೀಯ ವಿಮಾನಗಳ ಪ್ರಯಾಣಿಕರ ಸಂಖ್ಯೆ 28.05ರಿಂದ 28.78  ಏರಿಕೆಯಾಗಿದೆ. ಯೂರೋಪ್‌ ಸೇರಿ ವಿವಿಧೆಡೆ “ಕೋವಿಡ್‌-19′ ಹಾವಳಿ ಹೆಚ್ಚು ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಮುಂದಿನದಿನಗಳಲ್ಲಿ ವಿದೇಶಗಳಿಂದ ಬರುವವರ ಸಂಖ್ಯೆ ಸಹಜವಾಗಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಹೀಗಾಗಿ  ಹೆಚ್ಚು ಭದ್ರತೆ, ಹೈಟೆಕ್‌ ವ್ಯವಸ್ತೆ  ಅನುಕೂಲವಾಗಲಿದೆ.

ಸೆನ್ಸರ್‌ ಆಧಾರಿತ: ಸೆನ್ಸರ್‌ ಆಧಾರಿತ ವ್ಯವಸ್ಥೆಯಲ್ಲಿ ಪ್ರಯಾಣಿಕರು ಕೇವಲ ದ್ವಾರದಲ್ಲಿ ಹಾದುಹೋದರೆ ಅಥವಾ ಪ್ರಯಾಣ ಕುರಿತು ಪೂರಕ ದಾಖಲೆ ತೋರಿಸಿದರೆ ಅನುಮೋದನೆ ಆಗುವ ಹೈಟೆಕ್‌ ಸೌಲಭ್ಯ ಇದಾಗಿದೆ. ಇದರಿಂದ  ಒಂದು ವೇಳೆ ಸೋಂಕಿತ ವ್ಯಕ್ತಿ ಇದ್ದರೂ, ಹರಡುವ ಸಾಧ್ಯತೆ ಕಡಿಮೆ. ದೇಶದ ಮೊದಲ 5 ನಿಲ್ದಾಣಗಳಲ್ಲಿ ಕೆಐಎಎಲ್‌ ಕೂಡಒಂದು. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ವ್ಯವಸ್ಥೆ ಅಗತ್ಯವಿದೆ ಎಂದೂ ಕಾರ್ಯಾಚರಣೆ ವಿಭಾಗದ ಅಧಿಕಾರಿ ತಿಳಿಸಿದರು.

ಟಾಪ್ ನ್ಯೂಸ್

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.