Udayavni Special

ಅಂಕೆ ಮೀರಲಿದೆಯೇ ಕೋವಿಡ್‌ 19 ಸೋಂಕಿನ ಸಂಖ್ಯೆ?


Team Udayavani, Jul 11, 2020, 5:43 AM IST

anke-meera

ಬೆಂಗಳೂರು: ಬೆಂಗಳೂರು ಒಂದರಲ್ಲಿಯೇ ನಾಳೆಯಿಂದ ನಿತ್ಯ 24 ಸಾವಿರಕ್ಕೂ ಅಧಿಕ ಸೋಂಕು ಪರೀಕ್ಷೆ ನಡೆಸಲು ಸರ್ಕಾರ ಸಿದಟಛಿತೆ ಮಾಡಿಕೊಂಡಿದೆ. ಈ ಮೂಲಕ ರಾಜಧಾನಿಯ ಸೋಂಕು ಪ್ರಕರಣಗಳು ಸಂಖ್ಯೆ ಅಂಕೆ  ಮೀರಲಿದೆ. ಯಾಕೆಂದರೆ ಬಿಬಿಎಂಪಿ ಬುಲೆಟಿನ್‌ ಪ್ರಕಾರ ಕಳೆದ 15 ದಿನಗಳಲ್ಲಿ ನಿತ್ಯ ನಾಲ್ಕೂವರೆ ಸಾವಿರ ಸೋಂಕು ಪರೀಕ್ಷೆಗಳು ನಡೆಯುತ್ತಿದ್ದು, 1,000- 1,200 ಪ್ರಕರಣ ಗಳು ವರದಿಯಾಗುತ್ತಿವೆ.

ಅಂದರೆ, ನಾಲ್ಕು ಮಂದಿಯ ನ್ನು  ಸೋಂಕು ಪರೀಕ್ಷೆಗೆ ಒಳಪಡಿಸಿದರೆ ಕನಿಷ್ಠ ಒಬ್ಬರದ್ದು, ಪಾಸಿಟಿವ್‌ ವರದಿಯಾಗುತ್ತಿದೆ. ಇನ್ನು ನಾಳೆಯಿಂದ 24 ಸಾವಿರ ಪರೀಕ್ಷೆಗಳು ನಡೆದರೆ ಅದರಲ್ಲಿ ಲೆಕ್ಕಕ್ಕೆ ಸಿಗದಷ್ಟು ಮಂದಿಯಲ್ಲಿ ಸೋಂಕು ದೃಢಪಡುವ ಸಾಧ್ಯತೆಗಳಿವೆ. ಪ್ರಸ್ತುತ ರಾಜ್ಯದಲ್ಲಿ ನಿತ್ಯ 20 ಸಾವಿರ ಸೋಂಕು ಪರೀಕ್ಷೆಗಳು ನಡೆಯುತ್ತಿವೆ.

ಆದರೆ, ಬೆಂಗಳೂರಿನಲ್ಲಿ ಸೋಂಕಿನ ತೀವ್ರತೆ ಹೆಚ್ಚಿರುವ ಹಿನ್ನೆಲೆ ಸೋಂಕಿತರ ಶೀಘ್ರ ಪತ್ತೆಗೆಂದು ಸದ್ಯ ನಡೆಯುತ್ತಿರುವ ನಾಲ್ಕೂವರೆ ಸಾವಿರ ಆರ್‌ಟಿಪಿಸಿಆರ್‌  ಪರೀಕ್ಷೆ ಜತೆಗೆ ನಿತ್ಯ ರ್ಯಾಪಿಡ್‌ ಆ್ಯಂಟಿಜನ್‌ ಕಿಟ್‌ ಬಳಿಕ 20 ಸಾವಿರ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಒಟ್ಟಾರೆ ಸಂಖ್ಯೆ 24 ಸಾವಿರ ದಾಟಲಿದೆ. ಇನ್ನು ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆಯಲ್ಲಿ ಸೋಂಕು  “ಪಾಸಿಟಿವ್‌’ ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರ ಅಭಿಪ್ರಾಯಪಡುತ್ತಾರೆ.

ನಿಮಿಷಗಳಲ್ಲಿಯೇ ವರದಿ!: ರಕ್ತ ಮಾದರಿ ಸಂಗ್ರಹಿಸುವ ಮೂಲಕ ಆ್ಯಂಟಿಜೆನ್‌ ಪರೀಕ್ಷೆ ಮಾಡಲಾಗುತ್ತದೆ. ಮಾದರಿ ಪಡೆದ 10ರಿಂದ 15 ನಿಮಿಷದಲ್ಲಿ ವರದಿ ಲಭ್ಯವಾಗಲಿದೆ. ಖರ್ಚು ಕೂಡಾ 450 ರೂ.ಆಗಲಿದ್ದು, ಸರ್ಕಾರ ಉಚಿತವಾಗಿ  ಪರೀಕ್ಷೆ ಮಾಡಲಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವರದಿ ಪಾಸಿಟಿವ್‌ ಬಂದರೆ ಸೋಂಕಿತ ಎಂದು ಪರಿಗಣಿಸಬೇಕು. ಒಂದು ವೇಳೆ  ಸೋಂಕು ಲಕ್ಷಣಗಳಿದ್ದೂ, ನೆಗೆಟಿವ್‌ ಬಂದರೆ ಆರ್‌ ಟಿ-ಪಿಸಿಆರ್‌ ಪರೀಕ್ಷೆ ಸೂಚಿಸಲಾಗುತ್ತದೆ. ಇನ್ನು  ಸೋಂಕು ದೃಢಪಟ್ಟ ವ್ಯಕ್ತಿಯನ್ನು ಸಮೀಪದ ಕೋವಿಡ್‌ 19 ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿ ಸೋಂಕು ಲಕ್ಷಣ ಇದ್ದರೆ ಆಸ್ಪತ್ರೆಯಲ್ಲಿ ದಾಖಲಿಸಿ ಇಲ್ಲದಿದ್ದರೆ ಕೋವಿಡ್‌ 19 ಕೇರ್‌ ಸೆಂಟರ್‌ಗೆ ವರ್ಗಾಯಿಸಲಾಗುತ್ತದೆ.

ಹಾಸಿಗೆ ಕೊರತೆ ಸಾಧ್ಯತೆ!: ಸೋಂಕು ತೀವ್ರಗೊಂಡು ಸದ್ಯ ನಗರದಲ್ಲಿ ಬಹುತೇಕ ಸರ್ಕಾರಿ ಮತ್ತು ಖಾಸಗಿ ಕೋವಿಡ್‌ 19 ಚಿಕಿತ್ಸಾ ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿಯಾಗಿವೆ. ಅಂತೆಯೇ ಕೋವಿಡ್‌ 19 ಕೇರ್‌ ಸೆಂಟರ್‌ಗಳಲ್ಲಿಯೂ ಕೂಡಾ  ಸೀಮಿತ ಹಾಸಿಗೆ ಇವೆ. ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ಸದ್ಯ ನಗರದಲ್ಲಿ ಆಸ್ಪತ್ರೆ ಮತ್ತು ಕೋವಿಡ್‌ 19 ಕೇರ್‌ ಸೆಂಟರ್‌ ಸೇರಿ ಅಂದಾಜು 2,000 ಹಾಸಿಗೆ ಲಭ್ಯವಿರಬಹುದು. ಒಂದು ವೇಳೆ ಸೋಂಕು ಪರೀಕ್ಷೆ ಪ್ರಮಾಣ ನಾಲ್ಕುಪಟ್ಟು  ಹೆಚ್ಚಾದರೆ, ಅಂತೆಯೇ ಸೋಂಕಿತರ ಸಂಖ್ಯೆ ಕೂಡ ಸಾಕಷ್ಟು ಏರಿಕೆಯಾಗಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

ರ್ಯಾಪಿಡ್‌ ಟೆಸ್ಟ್‌ ಎಲ್ಲಿ?: ನಗರದ ಎಲ್ಲಾ ಜ್ವರ ತಪಾಸಣಾ ಕೇಂದ್ರಗಳಲ್ಲಿಯೂ ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಯಲಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ಮತ್ತು ಪಶ್ಚಿಮ ವಲಯಗಳಿಗೆ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ. ಜತೆಗೆ ಪ್ರಕರಣಗಳು ಏರಿಕೆಯಾಗುತ್ತಿರುವ ಕಂಟೈನ್ಮೆಂಟ್‌ ಝೋನ್‌ಗಳಲ್ಲಿಯೂ ಪರೀಕ್ಷೆ ನಡೆಯಲಿದೆ.

ಯಾರಿಗೆ ಆದ್ಯತೆ?: ಐಎಲ್‌ಐ, ಸಾರಿ, ಸೋಂಕಿತರ ಪ್ರಾಥಮಿಕ ಸಂಪರ್ಕಿತರು, ಅಂತಾರಾಷ್ಟ್ರೀಯ ಹಾಗೂ ಅಂತಾರಾಜ್ಯ ಪ್ರವಾಸ ಹಿನ್ನೆಲೆಯವರು, ವೈದ್ಯಕೀಯ ಸಿಬ್ಬಂದಿ, ಕೊರೋನಾ ವಾರಿಯ ರ್‌ಗಳು, ಹಿರಿಯ ನಾಗರೀಕರು, ಗರ್ಭಿಣಿ  ಯರು ಹಾಗೂ ಮಕ್ಕಳಿಗೆ ಮೊದಲ ಆದ್ಯತೆಯಾಗಿ ನೀಡಲಾಗುತ್ತದೆ. ಸದ್ಯ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕ ಹೊಂದಿದವರಿಗೆ ಹೋಂ ಕ್ವಾರಂಟೈನ್‌ ಮಾಡಲಾಗಿದ್ದು, ಅವರು ಸಮೀಪದ ಜ್ವರ ತಪಾಸಣಾ ಕೇಂದ್ರಕ್ಕೆ ಬಂದು  ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

* ಜಯಪ್ರಕಾಶ್‌ ಬಿರಾದಾರ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಅಧಿಕೃತ ಒಪ್ಪಿಗೆ ಪತ್ರ ನೀಡಿದ ಕೇಂದ್ರ ಸರ್ಕಾರ

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಅಧಿಕೃತ ಒಪ್ಪಿಗೆ ಪತ್ರ ನೀಡಿದ ಕೇಂದ್ರ ಸರ್ಕಾರ

“ಕೈ” ಜತೆ ವಿಲೀನ: ಸುಪ್ರೀಂಕೋರ್ಟ್ ನಲ್ಲಿ 6 ಬಿಎಸ್ಪಿ ಶಾಸಕರ ಅರ್ಜಿ ವಿಚಾರಣೆ

“ಕೈ” ಜತೆ ವಿಲೀನ: ಸುಪ್ರೀಂಕೋರ್ಟ್ ನಲ್ಲಿ 6 ಬಿಎಸ್ಪಿ ಶಾಸಕರ ಅರ್ಜಿ ವಿಚಾರಣೆ

ಟ್ರಂಪ್ ಪತ್ರಿಕಾಗೋಷ್ಠಿ ವೇಳೆ ಶ್ವೇತಭವನದ ಹೊರಗೆ ಶೂಟ್ ಔಟ್: ಓರ್ವನ ಬಂಧನ

ಟ್ರಂಪ್ ಪತ್ರಿಕಾಗೋಷ್ಠಿ ವೇಳೆ ಶ್ವೇತಭವನದ ಹೊರಗೆ ಶೂಟ್ ಔಟ್: ಓರ್ವನ ಬಂಧನ

ಎಸ್ಎಸ್ಎಲ್ ಸಿಯಲ್ಲಿ ಶೇ. 48.64 ಅಂಕ ಪಡೆದ ವಿದ್ಯಾರ್ಥಿಗೆ ಬಣ್ಣ ಎರಚಿ ಸನ್ಮಾನ!

ಎಸ್ಎಸ್ಎಲ್ ಸಿಯಲ್ಲಿ ಶೇ. 48.64 ಅಂಕ ಪಡೆದ ವಿದ್ಯಾರ್ಥಿಗೆ ಬಣ್ಣ ಎರಚಿ ಸನ್ಮಾನ!ವಿಡಿಯೋ ವೈರಲ್

ಹಿಮಾಲಯದ ನಭದಲ್ಲಿ ರಫೇಲ್‌ ರಾತ್ರಿ ತಾಲೀಮು

ಹಿಮಾಲಯದ ನಭದಲ್ಲಿ ರಫೇಲ್‌ ರಾತ್ರಿ ತಾಲೀಮು

ಕೋವಿಡ್ ನಿರ್ವಹಣೆ ತೃಪ್ತಿದಾಯಕ ; ಮೋದಿ ನಾಯಕತ್ವಕ್ಕೆ ಶೇ. 74 ಗ್ರಾಮೀಣ ಜನತೆ ಮೆಚ್ಚುಗೆ

ಕೋವಿಡ್ ನಿರ್ವಹಣೆ ತೃಪ್ತಿದಾಯಕ ; ಮೋದಿ ನಾಯಕತ್ವಕ್ಕೆ ಶೇ. 74 ಗ್ರಾಮೀಣ ಜನತೆ ಮೆಚ್ಚುಗೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರ್ವೆ ವ್ಯತ್ಯಾಸ: 500 ಕೋಟಿ ರೂ. ನಷ್ಟ

ಸರ್ವೆ ವ್ಯತ್ಯಾಸ: 500 ಕೋಟಿ ರೂ. ನಷ್ಟ

“ಇಮ್ಯುನಾಲಜಿ’: ಲಸಿಕಾ ಸಂಶೋಧನಾ ಕೇಂದ್ರ ಸ್ಥಾಪನೆ

“ಇಮ್ಯುನಾಲಜಿ’: ಲಸಿಕಾ ಸಂಶೋಧನಾ ಕೇಂದ್ರ ಸ್ಥಾಪನೆ

ರಾಜ್ಯದಲ್ಲಿ ಒಂದು ಲಕ್ಷದ ಗಡಿಯಲ್ಲಿ ಗುಣಮುಖರ ಸಂಖ್ಯೆ

ರಾಜ್ಯದಲ್ಲಿ ಒಂದು ಲಕ್ಷದ ಗಡಿಯಲ್ಲಿ ಗುಣಮುಖರ ಸಂಖ್ಯೆ

ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಕ್ರಮ :ಕಾರಜೋಳ

ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಕ್ರಮ :ಕಾರಜೋಳ

ಕಾರ್ಮಿಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ನಿಲ್ಲಲಿದೆ: ಡಿ.ಕೆ ಶಿವಕುಮಾರ್

ಕಾರ್ಮಿಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ನಿಲ್ಲಲಿದೆ: ಡಿ.ಕೆ ಶಿವಕುಮಾರ್

MUST WATCH

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATIONಹೊಸ ಸೇರ್ಪಡೆ

ವಿವಿಧ ಹಕ್ಕುಗಳಿಗೆ ಆಗ್ರಹಿಸಿ ರೈತರಿಂದ ಮನವಿ

ವಿವಿಧ ಹಕ್ಕುಗಳಿಗೆ ಆಗ್ರಹಿಸಿ ರೈತರಿಂದ ಮನವಿ

ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ -ಮನವಿ

ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ -ಮನವಿ

ಬೋಗೂರ ಬಾಲಕಿ ಕುಟುಂಬಕ್ಕೆ ನ್ಯಾಯ ಕೊಡಿ

ಬೋಗೂರ ಬಾಲಕಿ ಕುಟುಂಬಕ್ಕೆ ನ್ಯಾಯ ಕೊಡಿ

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ವಾಕಿಂಗ್ ವೇಳೆ ಗುಂಡಿನ ದಾಳಿ: ಉತ್ತರ ಪ್ರದೇಶದ ಬಿಜೆಪಿ ನಾಯಕನ ಹತ್ಯೆ

ಸೋಂಕಿತರ ಬೀದಿ ಸೀಲ್‌ಡೌನ್‌

ಸೋಂಕಿತರ ಬೀದಿ ಸೀಲ್‌ಡೌನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.