ವಿದ್ಯುತ್‌ ಚಾಲಿತ ಬಸ್‌ಗಳಿಗಾಗಿ ಪ್ರತ್ಯೇಕ ಡಿಪೋ

ನಿಯಮದ ಪ್ರಕಾರ ಪ್ರತಿ ತಿಂಗಳು ಬಿಲ್‌ ನೀಡಬೇಕು.

Team Udayavani, Jun 16, 2022, 12:22 PM IST

ವಿದ್ಯುತ್‌ ಚಾಲಿತ ಬಸ್‌ಗಳಿಗಾಗಿ ಪ್ರತ್ಯೇಕ ಡಿಪೋ

ಬೆಂಗಳೂರು: ನಗರದ ರಸ್ತೆಗಳಲ್ಲಿ ವಿದ್ಯುತ್‌ ಚಾಲಿತ ಬಸ್‌ಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು, ಈ ಮಾದರಿಯ ಬಸ್‌ಗಳಿಗಾಗಿಯೇ ಪ್ರತ್ಯೇಕ ಡಿಪೋಗಳನ್ನು ನಿರ್ಮಿಸಲು ಮುಂದಾಗಿದೆ.

ಈಗಾಗಲೇ 80ಕ್ಕೂ ಅಧಿಕ ಇ-ಬಸ್‌ಗಳು ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ವರ್ಷಾಂತ್ಯದ ಒಳಗೆ ಕೇಂದ್ರ ಸರ್ಕಾರದ ಫೇಮ್‌-2 ಯೋಜನೆ ಅಡಿ ಇನ್ನೂ 300 ಬಸ್‌ಗಳು ಬಂದಿಳಿಯಲಿವೆ. ಜತೆಗೆ ರಾಜ್ಯ ಸರ್ಕಾರದ ನೆರವಿನೊಂದಿಗೆ ಕೂಡ ಸಂಸ್ಥೆ ಮತ್ತಷ್ಟು ಇ-ಬಸ್‌ ಗಳನ್ನು ರಸ್ತೆಗಿಳಿಸಲು ಉದ್ದೇಶಿಸಿದೆ. ಜತೆಗೆ ಮುಂಬರುವ ದಿನಗಳಲ್ಲಿ ಬರುವ ವಾಹನಗಳ ಗಾತ್ರ ದೊಡ್ಡದಾಗಿವೆ. ಈ ಎಲ್ಲ ದೃಷ್ಟಿಯಿಂದ ಪ್ರತ್ಯೇಕ ಡಿಪೋಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಪ್ರಸ್ತುತ ನಗರದ ಹೊರವಲಯದಲ್ಲಿ ಅಂದರೆ ಯಲಹಂಕ, ಬಿಡದಿ ಮತ್ತು ಅತ್ತಿಬೆಲೆಯಲ್ಲಿ 3 ಘಟಕ ಬರಲಿವೆ. ಅಲ್ಲಿ ಇ- ಬಸ್‌ಗಳ ನಿರ್ವಹಣೆ, ಚಾರ್ಜಿಂಗ್‌ ಸ್ಟೇಷನ್‌ಗಳ ವ್ಯವಸ್ಥೆ, ಅನುಸೂಚಿಗಳ ನಿರ್ಧಾರ, ಟ್ರಿಪ್‌ಗ್ಳ ನಿರ್ವಹಣೆ, ನಗದು ಸ್ವೀಕಾರ, ವಾಹನಗಳ ನಿಲುಗಡೆ, ಸಾರಿಗೆ ಸಿಬ್ಬಂದಿ ತಂಗುವುದು ಸೇರಿದಂತೆ ಹತ್ತು ಹಲವು ವ್ಯವಸ್ಥೆಗಳು ಬರಲಿವೆ. ಒಟ್ಟಾರೆ ಉಳಿದೆಲ್ಲ ಡಿಪೋಗಳಂತೆಯೇ ಇವು ಕೂಡ ಇರಲಿವೆ.

ಆದರೆ, ಡೀಸೆಲ್‌ ಬಂಕ್‌ಗಳು ಮಾತ್ರ ಇರುವುದಿಲ್ಲ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. “ಈಗಿರುವ ಡೀಸೆಲ್‌ ಆಧಾರಿತ ಬಸ್‌ಗಳ ಜತೆಗೆ ಇ-ಬಸ್‌ಗಳ ನಿಲುಗಡೆ ಆಗುವುದರಿಂದ ಎರಡೂ ಮಿಶ್ರಣ ಆಗುತ್ತವೆ. ಮುಖ್ಯವಾಗಿ ನಿಲುಗಡೆಗೆ ತೊಂದರೆ ಆಗುತ್ತದೆ. ಅಲ್ಲದೆ, ಆಗಾಗ್ಗೆ ಈ ವಾಹನಗಳು ಚಾರ್ಜಿಂಗ್‌ಗೆ ಬರುತ್ತಿರುತ್ತವೆ.

ಬಿಎಂಟಿಸಿ ಮೆಕಾನಿಕ್‌ ಗಳಿಗೆ ನಿರ್ವಹಣೆಗೆ ಕಿರಿಕಿರಿ ಆಗಬಾರದು ಎಂಬುದು ಮತ್ತೂಂದು ಕಾರಣ. ಈ ಮಧ್ಯೆ ಇ-ಬಸ್‌ಗಳ ನಿರ್ವಹಣೆ ಆಯಾ ಕಂಪನಿಗಳದ್ದಾಗಿದ್ದರೆ, ಚಾಲಕರು ಕೂಡ ಕಂಪನಿ ಕಡೆಯವರೇ ಆಗಿರುತ್ತಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಷ್ಟೇ ಅಲ್ಲ, ಮೈಸೂರು ರಸ್ತೆ ಕೆಂಗೇರಿಯ ಹಳೆಯ ಡಿಪೋ ಒಳಗೊಂಡಂತೆ ಇ-ಬಸ್‌ಗಳ ಕಾರ್ಯಾಚರಣೆ ಮಾಡುವ ಮಾರ್ಗಗಳಲ್ಲಿ (ಹೊರವಲಯದಲ್ಲಿ) ಆಯ್ದ ಭಾಗಗಳಲ್ಲಿ ಬಿಎಂಟಿಸಿ ಜಾಗಗಳಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಕೂಡ ನಿರ್ಮಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಸರಾಸರಿ 160 ಕಿ.ಮೀ. ಸಂಚಾರ: ಪ್ರಸ್ತುತ “ಮೆಟ್ರೋ ಸಂಪರ್ಕ ಸೇವೆ’ ರೂಪದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಇ-ಬಸ್‌ಗಳಿಗೆ 180 ಕಿ.ಮೀ. ಗುರಿ ನೀಡಿ, ಅದಕ್ಕೆ ಪೂರಕವಾಗಿ ಮಾರ್ಗಗಳನ್ನು ನಿಗದಿಪಡಿಸಲಾಗಿದೆ. ಆದಾಗ್ಯೂ ಸರಾಸರಿ 160 ಕಿ. ಮೀ. ಪೂರೈಸಲಷ್ಟೇ ಸಾಧ್ಯವಾಗುತ್ತಿದೆ. ಇದಕ್ಕೆ ಸಂಚಾರದಟ್ಟಣೆ, ರಸ್ತೆಗಳ ಗುಣಮಟ್ಟ ಸೇರಿದಂತೆ ಹಲವು ಕಾರಣಗಳಿವೆ ಎಂದು ಹೆಸರು ಹೇಳಲಿಚ್ಛಿಸದ ಚಾಲಕರೊಬ್ಬರು ಮಾಹಿತಿ ನೀಡಿದರು.

ಹೊರವಲಯದಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಸ್ಮಾರ್ಟ್‌ಸಿಟಿ ಯೋಜನೆ ಅಡಿ ರಸ್ತೆಗಿಳಿದ 9 ಮೀಟರ್‌ ಉದ್ದದ ಬಸ್‌ಗಳು ದಿನಕ್ಕೆ 180 ಕಿ.ಮೀ. ಕಾರ್ಯಾಚರಣೆ ಮಾಡುವ ಗುರಿ ಹೊಂದಿದ್ದರೆ, ಫೇಮ್‌-2 ಯೋಜನೆ ಅಡಿ ಬರುವ ಇ- ಬಸ್‌ಗಳಿಗೆ 225 ಕಿ.ಮೀ. ಕ್ರಮಿಸುವ ಗುರಿ ನಿಗದಿಪಡಿಸಲಾಗಿದೆ. ಜತೆಗೆ ಈ ಬಸ್‌ಗಳ ಉದ್ದ 12 ಮೀಟರ್‌ ಇದ್ದು, ನಗರದ ಕೇಂದ್ರ ಭಾಗಗಳಲ್ಲಿ ನಿಗದಿತ ಕಿ.ಮೀ. ಪೂರೈಸುವುದು ಇವುಗಳಿಗೆ ಕಷ್ಟಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಹೊರವಲಯದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ.

ಅದರಂತೆ ಮೊದಲ ಹಂತದಲ್ಲಿ ಯಲಹಂಕ ಸುತ್ತಲಿನ ಪ್ರದೇಶಗಳಲ್ಲಿ ಈ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ನಂತರದಲ್ಲಿ ಬಿಡದಿ ಮತ್ತು ಅತ್ತಿಬೆಲೆ ಸುತ್ತಮುತ್ತ ಸೇವೆ ಒದಗಿಸಲಿವೆ. ಇದರಿಂದ ಆದಾಯವೂ ಹೆಚ್ಚು ಬರಲಿದೆ ಎಂಬ ಲೆಕ್ಕಾಚಾರ ಬಿಎಂಟಿಸಿಯದ್ದಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಆಗಸ್ಟ್‌ ಮೊದಲ ವಾರದಲ್ಲಿ 100 ಬಸ್‌ಗಳು ರಸ್ತೆಗಿಳಿಯಲಿವೆ. ನವೆಂಬರ್‌ ವೇಳೆಗೆ ಎಲ್ಲ 300 ಬಸ್‌ಗಳು ಬಂದಿಳಿಯಲಿವೆ. ಎಲ್ಲವೂ
ಹವಾನಿಯಂತ್ರಿತರಹಿತವಾಗಿದ್ದು, ಅಶೋಕ್‌ ಲೈಲ್ಯಾಂಡ್‌ ಇವುಗಳನ್ನು ಪೂರೈಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

6 ತಿಂಗಳಾದರೂ ಬಿಲ್‌ ಸಲ್ಲಿಸಿಲ್ಲ!
ನಗರದಲ್ಲಿ ಇ-ಬಸ್‌ಗಳು ಕಾರ್ಯಾರಂಭ ಮಾಡಿ ಆರು ತಿಂಗಳಾಗುತ್ತಿದ್ದರೂ ಗುತ್ತಿಗೆ ಪಡೆದ ಕಂಪನಿ ಇನ್ನೂ ಇದುವರೆಗಿನ ಬಿಲ್‌ ಸಲ್ಲಿಸಿಲ್ಲ! 80ಕ್ಕೂ ಅಧಿಕ ಬಸ್‌ ಗಳು ನಿತ್ಯ ಸಂಚರಿಸುತ್ತಿವೆ. ಪ್ರತಿ ಕಿ.ಮೀ.ಗೆ 51.67 ರೂ.ಗಳಂತೆ ಪ್ರತಿ ಬಸ್‌ಗೆ 180 ಕಿ.ಮೀ. ನಿಗದಿಪಡಿಸಿ ಪಾವತಿಸಬೇಕಾಗುತ್ತದೆ. ಅದರಂತೆ ನಿಯಮಿತವಾಗಿ ಗುತ್ತಿಗೆ ಪಡೆದ ಕಂಪನಿ ಬಿಲ್‌ ಸಲ್ಲಿಸಬೇಕಾಗುತ್ತದೆ. ಆದರೆ, ಇದುವರೆಗೆ ಬಿಲ್‌ ನೀಡಿಲ್ಲ. ಹಾಗಾಗಿ, ಪಾವತಿ ಆಗಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಿಯಮದ ಪ್ರಕಾರ ಪ್ರತಿ ತಿಂಗಳು ಬಿಲ್‌ ನೀಡಬೇಕು. ಹೀಗೆ ತಡವಾಗಿ ಬಿಲ್‌ ಸಲ್ಲಿಸುವುದರಿಂದ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪ್ರತಿ ತಿಂಗಳು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.

ವ್ಹೀಲ್‌ಚೇರ್‌ ವ್ಯವಸ್ಥೆ
ಹೊಸದಾಗಿ ರಸ್ತೆಗಿಳಿಯಲಿರುವ 12 ಮೀ. ಉದ್ದದ ಇ-ಬಸ್‌ನಲ್ಲಿ ಮೊದಲ ಬಾರಿಗೆ ಅಂಗವಿಕಲರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ನಿಲ್ದಾಣಗಳಲ್ಲಿ ಬಸ್‌ ಏರುವ ಅಂಗವಿಕಲ ಪ್ರಯಾಣಿಕರ ವ್ಹೀಲ್‌ಚೇರ್‌ ಅನ್ನು ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಇದ್ದು, ಆ ಪ್ರಯಾಣಿಕರು ಇಳಿಯುವ ನಿಲ್ದಾಣ ಬರುತ್ತಿದ್ದಂತೆ ಅಟೋಮೆಟಿಕ್‌ ಆಗಿ ವ್ಹೀಲ್‌ಚೇರ್‌ ಹೊರಗೆ ಬರುತ್ತದೆ.

ಇ-ಬಸ್‌ಗಳಿಗಾಗಿಯೇ ಪ್ರತ್ಯೇಕ ಡಿಪೋ ನಿರ್ಮಿಸಲಾಗುತ್ತಿದೆ. ಅಂದರೆ ಈಗಾಗಲೇ ಇರುವ ಡಿಪೋಗಳನ್ನು ಇ-ಬಸ್‌ಗಳಿಗೆ ಮೀಸಲಿಡಲಾಗುವುದು. ಡೀಸೆಲ್‌ ಬಸ್‌ಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗು ವುದು. ಒಟ್ಟು ಮೂರು ಡಿಪೋಗಳು ಬರಲಿದ್ದು, ಆಗಸ್ಟ್‌ ವೇಳೆಗೆ ಯಲಹಂಕ ಘಟಕ ಕಾರ್ಯಾರಂಭ ಮಾಡಲಿದೆ.
●ಎ.ವಿ.ಸೂರ್ಯ ಸೇನ್‌, ನಿರ್ದೇಶಕರು
(ಮಾಹಿತಿ ತಂತ್ರಜ್ಞಾನ), ಬಿಎಂಟಿಸಿ

●ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.