ಬೆಲೆ ಇಲ್ಲದೆ ಕಹಿಯಾದ ಕಬ್ಬು: ರೈತರಿಗೆ ಸಂಕಷ್ಟ

ಲಾಕ್‌ಡೌನ್‌ನಿಂದ ಸರ್ಕಾರಿ ಸ್ವಾಮ್ಯದ ಭದ್ರಾವತಿ ಸಕ್ಕರೆ ಕಾರ್ಖಾನೆ ಬಂದ್‌

Team Udayavani, Apr 18, 2020, 6:35 PM IST

18-April-10

ಕಡೂರು: ಎಮ್ಮೆದೊಡ್ಡಿ ರೈತರು ಲಾಟ್‌ ಹಾಕಿರುವ ಕಬ್ಬಿನ ರಾಶಿ.

ಕಡೂರು: ತಾಲೂಕಿನ ಎಮ್ಮೆದೊಡ್ಡಿ ಭಾಗದ ಸಾವಿರಾರು ಎಕರೆಯಲ್ಲಿ ಬೆಳೆದಿರುವ ಕಬ್ಬಿಗೆ ಬೆಲೆ ಇಲ್ಲದೆ ರೈತರ ಬಾಳು ಕಹಿಯಾಗಿದೆ. ತಾಲೂಕಿನ ಎಮ್ಮೆದೊಡ್ಡಿಯ ಮುಸ್ಲಾಪುರ, ರಂಗೇನಹಳ್ಳಿ, ಸಿದ್ದರಹಳ್ಳಿ, ಶ್ರೀರಾಂಪುರ ಭಾಗದ ರೈತರು ಈ ಬಾರಿ ಮದಗದಕೆರೆಯ ನೀರಿನ ಆಶ್ರಯದಲ್ಲಿ ಕಬ್ಬು ಬೆಳೆದಿದ್ದು, ಸಮೃದ್ಧವಾಗಿ ಬಂದ ಕಬ್ಬನ್ನು ಭದ್ರಾವತಿ ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡುವುದು ಹಿಂದಿನಿಂದಲೂ ನಡೆಯುತ್ತ ಬಂದಿದೆ. ಆದರೆ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಕೊರೊನಾ ಲಾಕ್‌ಡೌನ್‌ನಿಂದ ಬಂದ್‌ ಆಗಿರುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.

ಭದ್ರಾವತಿಯ ಆಲೆಮನೆ (ಬೆಲ್ಲ ತಯಾರು ಮಾಡುವುದು)ಗೆ ನೀಡಲು ಹೋದರೆ ಒಂದು ಟನ್‌ ಕಬ್ಬಿಗೆ 1,500 ರೂ.ಗೆ ಕೇಳುತ್ತಿದ್ದು, ಕಬ್ಬಿನ ದರ ಇದೀಗ 5 ಸಾವಿರ ರೂ. ಇದೆ. ಒಂದು ಎಕರೆ ಕಬ್ಬು ಬೆಳೆಯಲು ರೈತರಿಗೆ ಕನಿಷ್ಟ 35 ಸಾವಿರ ರೂ. ವೆಚ್ಚವಾಗುತ್ತದೆ. ಉತ್ತಮ ಇಳುವರಿ ಬಂದರೆ ಎಕರೆಗೆ 30-35 ಟನ್‌ ಬರುತ್ತದೆ. ಆದರೆ, ಆಲೆಮನೆಯಲ್ಲಿ ಕಬ್ಬಿಗೆ ಬೆಲೆ ಇಲ್ಲವಾಗಿದೆ ಎಂಬುದು ರೈತರ ಅಳಲಾಗಿದೆ.

ಮಾರುಕಟ್ಟೆಯಲ್ಲಿ ಬೆಲ್ಲದ ದರ ಕೆ.ಜಿ.ಗೆ 45 ರೂ. ಇದೆ. ಬೆಲ್ಲದ ದರದಿಂದಲೇ ಕಬ್ಬಿನ ದರ ನಿಗದಿಯಾಗುವುದು ಎಂಬುದು ಆಲೆಮನೆಯವರಿಗೆ ಗೊತ್ತಿದ್ದರೂ ಸಂಕಷ್ಟದಲ್ಲಿರುವ ರೈತರಿಗೆ ಬರೆ ಹಾಕುವ ಕೆಲಸ ಆಲೆಮನೆಯ ಮಾಲೀಕರು ಮಾಡುತ್ತಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಆರಂಭಿಸಲಿ ಎಂಬ ಒತ್ತಾಯವನ್ನು ರೈತರು ಮಾಡುತ್ತಿದ್ದಾರೆ.

ಕೊರೊನಾ ಸಮಸ್ಯೆ ಬಾರದೆ ಇದ್ದಿದ್ದರೆ ರೈತ ಸಂಘಟನೆಗಳು ನಮ್ಮ ಪರವಾಗಿ ಹೋರಾಟ ಮಾಡಿ ನ್ಯಾಯ ಕೊಡಿಸುತ್ತಿದ್ದವು. ಆದರೆ ಅಧಿಕಾರಿಗಳು ಮುಂದಾಗಿ ಕಬ್ಬಿಗೆ ಉತ್ತಮ ಬೆಲೆ ಕೊಡಿಸಬೇಕೆಂದು ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ. ರೈತ ಮುಖಂಡರಾದ ಲೋಕೇಶ್‌, ಕುಮಾರ ನಾಯ್ಕ,ಮಂಜುನಾಥ್‌, ಗಣೇಶ್‌,ಪ್ರದೀಪ್‌, ಸಂಜೀವ ನಾಯ್ಕ ಮತ್ತಿತರರು ಇದ್ದರು.

ಸಾವಿರಾರು ಎಕರೆಯಲ್ಲಿ ಬೆಳೆದ ಕಬ್ಬಿಗೆ ಉತ್ತಮ ದರ ಸಿಗುತ್ತಿತ್ತು. ಆದರೆ ಈ ಬಾರಿ ಮದಗದಕೆರೆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟಿದ್ದರಿಂದ ಉತ್ತಮ ಇಳುವರಿ ಬಂದಿತ್ತು. ಭದ್ರಾವತಿಗೆ ಮಾರಾಟ ಮಾಡಲು ಹೋದರೆ ಕನಿಷ್ಟ ಬೆಲೆಗೆ ಆಲೆಮನೆಯ ಮಾಲೀಕರು ಕೇಳುತ್ತಿದ್ದಾರೆ. ಶಿವಮೊಗ್ಗದ ಜಿಲ್ಲಾ ಧಿಕಾರಿಗಳು ಹಾಗೂ ಭದ್ರಾವತಿ ತಹಶೀಲ್ದಾರ್‌, ರೈತ ಸಂಘಟನೆಗಳು ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ಬರಬೇಕು. ಟನ್‌ಗೆ ಕನಿಷ್ಟ 4 ಸಾವಿರ ರೂ. ಕೊಡಿಸಬೇಕು.
ರಮೇಶ ನಾಯ್ಕ,
ಮುಸ್ಲಾಪುರ ರೈತ

ಪ್ರಕಾಶ್‌ಮೂರ್ತಿ ಏ.ಜೆ.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.