ಐದು ಹಳ್ಳಿಗಳಲ್ಲಿ ಕೃಷಿ ಸಂಚಯಿ ಅನುಷ್ಠಾನ

Team Udayavani, Apr 10, 2022, 1:17 PM IST

10agree

ಆಳಂದ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವೊಲಿಸಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಮೂರು ಗಡಿ ಭಾಗದ ಐದು ಹಳ್ಳಿಗಳ ಜನರಿಗೆ ಜಲಾನಯನ ಸೇರಿದಂತೆ ಆರ್ಥಿಕ ಉತ್ತೇಜನಕಾರಿಗೆ ಪ್ರಧಾನಮಂತ್ರಿ ಕೃಷಿ ಸಂಚಯಿ ಯೋಜನೆ ಮಂಜೂರಾತಿಗೊಳಿಸಿ ಅನುಷ್ಠಾನಕ್ಕೆ ಮುಂದಾಗಿದ್ದು, ಅಧಿಕಾರಿಗಳು ಮತ್ತು ಸಾರ್ವಜನಿಕರು ಸೇರಿ ರೈತರಿಗೆ ಯೋಜನೆ ಲಾಭ ತಲುಪಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

ತಾಲೂಕಿನ ಗಡಿ ಗ್ರಾಮವಾದ ತಡೋಳಾ ಗ್ರಾಮದಲ್ಲಿ ಶನಿವಾರ ತಡೋಳಾ ಗ್ರಾಪಂನ ಶೇ. 100ರಷ್ಟು ಖಜೂರಿ ಶೇ. 10 ಮತ್ತು ನಿರಗುಡಿ ಗ್ರಾಪಂಗಳಿಗೆ ಸಂಬಂಧಿಸಿದಂತೆ ಶೇ. 25ರಷ್ಟು ಜಲಾನಯನ ಕಾಮಗಾರಿಯನ್ನು ಪ್ರಧಾನಮಂತ್ರಿ ಕೃಷಿ ಸಿಂಚಯಿ ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯೋಜನೆಗೆ ಪ್ರಧಾನಮಂತ್ರಿಗಳು ಮತ್ತು ಮುಖ್ಯ ಮಂತ್ರಿಗಳು ಸೇರಿ ಸುಮಾರು 11 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಮೂರುವರ್ಷದ ಯೋಜನೆಯನ್ನು ಎರಡು ವರ್ಷದಲ್ಲಿ ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಬೇಕು ಎಂದರು.

ಹೊಲದ ಮಣ್ಣು ಮಳೆ ನೀರಿಗೆ ಹರಿದು ಹೋಗದಂತೆ ಮತ್ತು ಮಳೆ ಬಂದು ನೀರು ಹರಿಯದೇ ಇಂಗಿಸುವ ಉದ್ದೇಶದ ಜೊತೆಗೆ ರೈತ ಮಹಿಳಾ ಸಂಘದ ಕಾರ್ಯಚಟುವಟಿಕೆಗೆ ಪ್ರೋತ್ಸಾಹಧನ, ಹೊಲಗಳಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬದು ನಿರ್ಮಾಣ ಚೆಕ್‌ ಡ್ಯಾಂಗಳಂತ ಕಾಮಗಾರಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸಂಘವನ್ನು ರಚಿಸಿ ಗ್ರಾಪಂ ಅಧ್ಯಕ್ಷರೇ ಇದರ ಅಧ್ಯಕ್ಷರಾಗಿರುತ್ತಾರೆ. ಎಲ್ಲರೂ ಕೂಡಿಕೊಂಡು ಯೋಜನೆ ಮಾದರಿಗೊಳಿಸಬೇಕು ಎಂದು ಹೇಳಿದರು.

ಗ್ರಾಪಂ ಖಜೂರಿ, ತಡೋಳಾ ಮತ್ತು ನಿರಗುಡಿ ಪಂಚಾಯಿತಿ ಆಯ್ಕೆ ಮಾಡಿದ್ದು, ತಡೋಳಾದ ಎಲ್ಲ ರೈತರಿಗೆ ಅನುಕೂಲವಾದರೆ ಖಜೂರಿ ಮತ್ತು ನಿರಗುಡಿ ವ್ಯಾಪ್ತಿಯ ಮಟಕಿ ಗ್ರಾಮದ ಭಾಗಶಃ ಹೊಲಗಳಿಗೆ ನೆರವಾಗಲಿದೆ. ಈ ಕಾಮಗಾರಿ ಅಚ್ಚುಕಟ್ಟಾಗಿ ನಡೆದರೆ ಈ ಭಾಗದಲ್ಲೇ ಮಾದರಿ ಜಲಾನಯನ ಕಾಮಗಾರಿಯಾಗಲಿದೆ ಎಂದರು.

ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗರು ಮಾತನಾಡಿ, ಜಿಲ್ಲೆಯ ಆಳಂದ ಮತ್ತು ಜೇವರ್ಗಿ ತಾಲೂಕಿಗೆ ಮಾತ್ರ ಕೃಷಿ ಸಂಚಯಿ ಯೋಜನೆ ಮಂಜೂರಾಗಿದೆ. ಆಳಂದಕ್ಕೆ ಯೋಜನೆ ತರುವಲ್ಲಿ ಶಾಸಕರು ಅನೇಕ ಬಾರಿ ಸರ್ಕಾರದ ಮಟ್ಟದಲ್ಲಿ ಸಚಿವರ ಗಮನಕ್ಕೆ ತಂದು ಮಂಜೂರಾತಿಗೆ ಶ್ರಮಿಸಿದ್ದಾರೆ. ಇದು ಒಳ್ಳೆಯ ಕೆಲಸವಾಗಿದ್ದು, ಶೇ. 60ರಷ್ಟು ಜಲಾನಯನ ಕೆಲಸ ಮಾಡಿದರೆ ಇನ್ನೂ ಶೇ. 40ರಷ್ಟು ಆದಾಯ ಹೆಚ್ಚುತ್ತದೆ ಎಂದರು.

ಆಯ್ಕೆಯಾದ ಮೂರು ಗ್ರಾಪಂನ ಐದು ಹಳ್ಳಿಗೆ 5.50 ಸಾವಿರ ಹೆಕ್ಟೇರ್‌ ಗಾಗಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆಗಾಗಿ ವೈಜ್ಞಾನಿಕವಾಗಿ ಕಾಮಗಾರಿ ಆಗಲಿದೆ. ಇದರಲ್ಲಿ ಕಾಲವೆ, ಗೋಕಟ್ಟೆ, ಚೆಕ್‌ ಡ್ಯಾಂ ಮತ್ತು ಕೃಷಿ ಹೊಂಡ ನಿರ್ಮಾಣ ನಡೆಯಲಿದೆ. ಮೂರು ವರ್ಷದ ಯೋಜನೆಯಾಗಿದೆ ಎಂದರು.

ಜಿಲ್ಲೆಯ 92 ಸಾವಿರ ಹೆಕ್ಟೇರ್‌ನಷ್ಟು ಮಾತ್ರ ನೀರಾವರಿ ಇದೆ. ಉಳಿದ 9.50 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಬೇಸಾಯ, ಮಳೆ ಬಂದರೆ ಮಾತ್ರ ಬೇಸಾಯವಿದೆ. ಇಂಥ ಪರಿಸ್ಥಿತಿ ಜಿಲ್ಲೆಯಲಿದೆ. ಬೇರೆ ಜಿಲ್ಲೆಗಳು ಗಮನಿಸಿದರೆ ಶೇ. 50ರಷ್ಟು ನೀರಾವರಿ ಇದೆ. ಬೆಳಗಾವಿಗೆ ಹೋದರೆ ಖರೀಪ್‌ ರಬ್ಬಿ ಬೇಸಿಗೆಯಲ್ಲೂ ಬೆಳೆ ತೆಗೆಯುತ್ತಾರೆ. ಅಲ್ಲಿ ಕಾಲುವೆಗಳಿರುವುದರಿಂದ ಇದು ಸಾಧ್ಯವಾಗುತ್ತಿದೆ. ಇಲ್ಲಿಯೂ ಆ ಮಾದರಿ ಅನುಸರಿಸಲು ನೆಲ, ಜಲದ ಕಾಮಗಾರಿ ಅರಣ್ಯವೃದ್ಧಿ, ಹೈನುಗಾರಿಕೆ, ರೈತ ಮಹಿಳಾ ಸಂಘಗಳ ಆರ್ಥಿಕ ವೃದ್ಧಿಯಂತ ಕಾರ್ಯಗಳು ಯೋಜನೆಯಲ್ಲಿ ಒಳಗೊಂಡಿವೆ ಎಂದರು.

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.