ಮೌಡ್ಯ ಆಚರಣೆ ತಿರಸ್ಕರಿಸಿ ಸಶಕ್ತ ಭಾರತ ಕಟ್ಟೋಣ: ಮೆಂಗನ

Team Udayavani, Dec 6, 2021, 12:59 PM IST

14india

ಶಹಾಬಾದ: ಮೌಡ್ಯ ಆಚರಣೆಗಳನ್ನು ತಿರಸ್ಕರಿಸುವ ಮೂಲಕ ಸಶಕ್ತ ಭಾರತ ಕಟ್ಟಲು ಸಾಧ್ಯ ಎಂದು ಭೌದ್ಧ ಮಹಾಸಭಾದ ತಾಲೂಕಾಧ್ಯಕ್ಷ ಸುರೇಶ ಮೆಂಗನ ಹೇಳಿದರು.

ರವಿವಾರ ಹಳೆಶಹಾಬಾದನ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ ಪರಿನಿರ್ವಾಣ ದಿನದ ಅಂಗವಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ವತಿಯಿಂದ ಆಯೋಜಿಸಲಾಗಿದ್ದ ಮೌಡ್ಯ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು.

ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಮಶಾನದಲ್ಲಿ ಮೌಡ್ಯ ವಿರೋಧಿ ದಿನ ಆಚರಿಸುವ ಮೂಲಕ ವೈಚಾರಿಕ, ವೈಜ್ಞಾನಿಕ ಕಾರ್ಯಕ್ರಮಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್‌ ಚಿಂತನೆಗಳು ಅಪಾರ ಪ್ರಮಾಣದಲ್ಲಿ ಹರಡಿದರೂ ಇನ್ನೂ ಮೌಡ್ಯತೆ ಎನ್ನುವುದು ನಮ್ಮನ್ನು ಬಿಟ್ಟಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮೌಡ್ಯದಿಂದ ಹೊರಬಂದು ಆರೋಗ್ಯರ ಸಮಾಜದ ನಿರ್ಮಾಣವಾಗಬೇಕಾದರೆ ಮೊದಲು ನಾವೆಲ್ಲರೂ ವೈಜ್ಞಾನಿಕ ಹಾಗೂ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರಲ್ಲದೇ, ಹಲವಾರು ದೃಷ್ಟಾಂತಗಳನ್ನು ತೆರೆದಿಟ್ಟರು. ಹೋರಾಟಗಾರರಾದ ಬಸವರಾಜ ಮಯೂರ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಬಸವರಾಜ ಮದ್ರಕಿ ಮಾತನಾಡಿ, ದೇಶದಲ್ಲಿ ದೇವರ ಹೆಸರಿನಲ್ಲಿ ಹಲವು ರೀತಿಯಲ್ಲಿ ಮೌಡ್ಯದ ಆಚರಣೆ ನಡೆಯುತ್ತಿದೆ. ಇಂತಹ ಆಚರಣೆಗಳಿಗೆ ಒಳಗಾಗಿ ನಾವು ಅನಾಗರಿಕರಾಗಿ ಬದುಕುತ್ತಿದ್ದೇವೆ. ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ನಿವೃತ್ತ ಎಪಿಎಂಸಿ ಅಧಿಕಾರಿ ಬಸವರಾಜ ಪಾಟೀಲ ನರಿಬೋಳಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಅಧ್ಯಕ್ಷ ಗಿರಿಮಲ್ಲಪ್ಪ ವಳಸಂಗ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನ ಪೀಠಿಕೆ ಓದಿ ಪ್ರಮಾಣ ವಚನ ಪಡೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಲ್ಲಿನಾಥ ಪಾಟೀಲ ನಿರೂಪಿಸಿದರು, ಸಾಮಾಜಿಕ ಚಿಂತಕ ಲೋಹಿತ್‌ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಗೌಡ ಪಾಟೀಲ ಸ್ವಾಗತಿಸಿದರು, ರಮೇಶ ಜೋಗದನಕರ್‌ ವಂದಿಸಿದರು.

ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಬೆಳ್ಳಪ್ಪ ಕಣದಾಳ, ಬಸವರಾಜ ದಂಡಗುಲಕರ್‌, ವಿಜಯಕುಮಾರ ಕಂಠಿಕಾರ, ಚನ್ನಬಸಪ್ಪ ಸಿನ್ನೂರ್‌,ಗಿರಿರಾಜ ಪವಾರ,ಗಣೇಶ ಜಾಯಿ, ಶಿವಶಾಲಕುಮಾರ ಪಟ್ಟಣಕರ್‌, ಕುಪೇಂದ್ರ ತುಪ್ಪದ್‌, ರಮೇಶ ಮೀರಜಕರ್‌, ಲಾಲ ಅಹ್ಮದ್‌ ಮತ್ತಿತರರು ಇದ್ದರು.

ಟಾಪ್ ನ್ಯೂಸ್

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಇರಾಕ್‌: 11 ಯೋಧರನ್ನು ಕೊಂದ ಐಎಸ್‌ ನ ಉಗ್ರರು

ಇರಾಕ್‌: 11 ಯೋಧರನ್ನು ಕೊಂದ ಐಎಸ್‌ ನ ಉಗ್ರರು

ದ್ವಿತೀಯ ಪಿಯು ಪರೀಕ್ಷೆ ನೋಂದಣಿಗೆ 31 ಕೊನೇ ದಿನ

ದ್ವಿತೀಯ ಪಿಯು ಪರೀಕ್ಷೆ ನೋಂದಣಿಗೆ 31 ಕೊನೇ ದಿನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14electricity

ಸಿಂಗಲ್‌ ಫೇಸ್‌ ವಿದ್ಯುತ್‌ಗಾಗಿ ಪಾದಯಾತ್ರೆ

13childrens-killed

ಮಕ್ಕಳನ್ನು ಬಾವಿಗೆ ನೂಕಿ ಹತ್ಯೆಗೈದ ಹೆತ್ತ ತಾಯಿ

12street

ಬೀದಿ ವ್ಯಾಪಾರಿಗಳು ಸಂಘಟಿತರಾಗಲಿ: ಜಗನ್ನಾಥ

11govt

ಸರ್ಕಾರಿ ಯೋಜನೆ ಸದುಪಯೋಗ ಮಾಡಿಕೊಳ್ಳಿ: ಪಾಟೀಲ

10goal

ಕೆಕೆಆರ್‌ಡಿಬಿ ನಿಗದಿತ ಗುರಿ ಸಾಧಿಸದ್ದಕ್ಕೆ ಅಸಮಾಧಾನ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಮತ್ತೆ ಎಡವಿದ ಭಾರತಕ್ಕೆ ಸರಣಿ ಸೋಲು; ಮಲಾನ್‌-ಡಿ ಕಾಕ್‌ ಭರ್ಜರಿ ಆರಂಭ

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಕೋವಿಡ್‌ ಮಧ್ಯೆ ಮಂಗನ ಕಾಯಿಲೆ ಪತ್ತೆ! ಮಲೆನಾಡು ಜನರಲ್ಲಿ ಮತ್ತೆ ಭೀತಿ ಶುರು

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ: 2021ನೇ ಸಾಲಿನ ಪ್ರಶಸ್ತಿ ಪ್ರಕಟ

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಸ್ಗಹಜಕುಜಯಹಗ

ಮಂಜುಳಾ ಚಳ್ಳಕೆರೆ ನಗರಸಭೆ ಉಪಾಧ್ಯಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.