Udayavni Special

ಜಿಲ್ಲಾಡಳಿತಕ್ಕೆ ಮತ್ತೊಂದು ಸವಾಲು ಸಂಭವ‌


Team Udayavani, May 12, 2020, 9:54 AM IST

savaalu sanmbhava

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿರುವ ಹೊತ್ತಿನಲ್ಲಿಯೇ, ಹೊರ ರಾಜ್ಯ ಮತ್ತು ವಿದೇಶಗಳಿಂದ ಮೈಸೂರಿಗೆ ಆಗಮಿಸುತ್ತಿರುವುದು ಈಗ ಜಿಲ್ಲಾಡಳಿತಕ್ಕೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಕೊರೊನಾದಿಂದ  ತತ್ತರಿಸಿರುವ ರಾಜ್ಯಗಳಲ್ಲಿ ವಾಸಿಸುವ ಸಾವಿರಾರು ಮಂದಿ ಮೈಸೂರಿಗೆ ಬರಲು ಅರ್ಜಿ ಸಲ್ಲಿಸುವುದರ ಜೊತೆಗೆ, ಸಾಕಷ್ಟು ಮಂದಿ ಈಗಾಗಲೇ ಮೈಸೂರಿಗೆ ಆಗಮಿಸಿದ್ದಾರೆ.

ಅಲ್ಲದೆ, ಕೊರೊನಾ ತತ್ತರಿಸಿರುವ ರಾಷ್ಟ್ರಗಳಿಂದಲೂ  ಭಾರತೀಯರು ವಾಪಾಸ್‌ ಆಗುತ್ತಿದ್ದು, ಮೈಸೂರಿಗೂ ಬರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಮೊದಲ ಹಂತದಲ್ಲಿಯೇ ಬೆಟ್ಟದಂತಹ ಕೋವಿಡ್‌-19 ಸವಾಲನ್ನುಸಮರ್ಥವಾಗಿ ಎದುರಿಸಿದ್ದ ಮೈಸೂರಿಗೆ ಮತ್ತೊಂದು ಸವಾಲು  ಎದುರಾಗಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಒಟ್ಟು 90 ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡವು. ಅವುಗಳಲ್ಲಿ 74 ನಂಜನಗೂಡಿನ ಜ್ಯುಬಿಲಿ ಯಂಟ್‌ಗೆ ಸಂಬಂಧಿಸಿದ್ದಾಗಿದ್ದವು.

ಇನ್ನುಳಿ ¨ ‌ವು ತಬ್ಲೀ ಹಾಗೂ ಹೈದರಾಬಾದ್‌, ದುಬೈ ಮೂಲವಾಗಿದ್ದವು. ಇಷ್ಟು ದೊಡ್ಡ ಸವಾಲನ್ನು ಮೈಸೂರಿನ ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿ, ವೈರಾಣು ಸಮುದಾಯಕ್ಕೆ ಹರಡುವುದನ್ನು ತಪ್ಪಿಸಿತು. ಹೀಗಾಗಿ ಜಿಲ್ಲೆಯಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಸವಾಲು  ಎದುರಾಗಿದೆ. ವಿವಿಧ ಕಾರಣಗಳಿಗಾಗಿ ಬೇರೆ ದೇಶ, ರಾಜ್ಯಗಳಲ್ಲಿ ವಾಸವಿದ್ದ ಮೈಸೂರಿನ ಜನತೆ ವಾಪಸ್ಸಾಗುತ್ತಿದ್ದಾರೆ. ಈಗಾಗಲೇ215ಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆ. ಇನ್ನೂ  2 ಸಾವಿರಕ್ಕೂ  ಹೆಚ್ಚು ಮಂದಿ ಜಿಲ್ಲೆಗೆ ಆಗಮಿಸಲು ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರನ್ನು ಪರೀಕ್ಷೆಗೆ ಒಳಪಡಿಸಿ, ಬಳಿಕ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಬೇಕಿದೆ.

ಏನಿದು ಸವಾಲು?: ಇದೀಗ ಲಾಕ್‌ಡೌನ್‌ ಸಡಿಲಗೊಂಡಿದ್ದು, ಅಂತರ ಜಿಲ್ಲೆಗಳ ನಡುವಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಹಂತದಲ್ಲಿ ಮುಖ್ಯವಾಗಿ ಬೇರೆ ಜಿಲ್ಲೆ, ರಾಜ್ಯಗಳಲ್ಲಿ ಸಿಲುಕಿ ದವರನ್ನು ಸ್ವಸ್ಥಾನಕ್ಕೆ ತೆರಳಲು ಅನುವು  ಮಾಡಿ  ಕೊಡಲಾಗಿದೆ. ಅದಕ್ಕಾಗಿ ಅವರಿಗೆ ಏಕಮುಖ ಪಾಸ್‌ ನೀಡಲಾಗುತ್ತಿದೆ. ಮಹಾರಾಷ್ಟ್ರ, ತ.  ನಾಡು, ಆಂಧ್ರ, ಗುಜರಾತ್‌, ತೆಲಂಗಾಣದಿಂದ ಹೆಚ್ಚು ಜನ ಮೈಸೂರಿಗೆ ಬರುತ್ತಿದ್ದಾರೆ. ಜೊತೆಗೆ ವಿದೇಶಗಳಲ್ಲಿರುವವರನ್ನೂ ಏರ್‌  ಲಿಫ್ಟ್ ಮೂಲಕ ಭಾರತಕ್ಕೆ ಕರೆತರುವ ಕೆಲಸಗಳು ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಮೈಸೂರಿ ನವರೂ ಇದ್ದಾರೆ. ಅಲ್ಲಿಂದ ಬರುವ ಸಹಸ್ರಾರು ಮಂದಿಯನ್ನು ಜಿಲ್ಲೆಯ ಜನರೊಂದಿಗೆ ಬೆರೆಯದಂತೆ ಕ್ವಾರಂಟೈನ್‌ ಮಾಡಿ, ಅಗತ್ಯವಿದ್ದರೆ ಸಮರ್ಪಕ ಚಿಕಿತ್ಸೆ ನೀಡುವುದು ಮುಂದಿನ ಸಾವಾಲಾಗಿದೆ.

ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ: ಜಿಲ್ಲಾಡಳಿತ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವವರ ಮೇಲೆ ಹದ್ದಿನ ಕಣ್ಣಿರಿಸಿದ್ದು, ಹೊರ ಜಿಲ್ಲೆಯಿಂದ ಬಂದ ಎಲ್ಲರ ಆರೋಗ್ಯ ತಪಾಸಣೆಮಾಡಿ, ಬಳಿಕ ಒಳಗೆ ಬಿಡಲಾಗುತ್ತಿದೆ. ಆರೋಗ್ಯ ಸಮಸ್ಯೆ ಇದ್ದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ. ಜೊತೆಗೆ ಹೊರ ರಾಜ್ಯಗಳಿಂದ ಬರುವವರನ್ನು ಹೋಂ ಕ್ವಾರಂಟೈನ್‌ ಬದಲಾಗಿ ವಸತಿಗೃಹ, ಹೋಟೆಲ್‌ ಮತ್ತು ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಮಾಡಲು ಕ್ರಮ ವಹಿಸಲಾಗಿದೆ.

ವಿವಿಧ ರಾಜ್ಯಗಳಿಂದ ಸುಮಾರು 215 ಮಂದಿ ಮೈಸೂರಿಗೆ ಬಂದಿದ್ದು, ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಬಿಲ್‌ ಪಾವತಿ ಮಾಡುತ್ತೇವೆ ಎಂದು ಹೇಳಿದರೆ ಅವರನ್ನು ಹೋಟೆಲ್‌ಗೆ ಸ್ಥಳಾಂತರಿಸಲಾಗುವುದು. ಈಗಾಗಲೇ ಕಮ್ಯುನಿಟಿ  ಹಾಲ್‌, ಹೋಟೆಲ್‌ಗ‌ಳನ್ನು ಎಲ್ಲಾ ತಾಲೂಕು ಗಳಲ್ಲೂ ಗುರುತಿಸಲಾಗಿದ್ದು, ವಿದೇಶದಿಂದ ಆಗಮಿಸುವವರನ್ನು ಕ್ವಾರಂಟೈನ್‌ ಮಾಡಲು ಸಿದಟಛಿತೆ ಮಾಡಿಕೊಳ್ಳಲಾಗಿದೆ.
-ಅಭಿರಾಂ ಜಿ.ಶಂಕರ್‌, ಜಿಲ್ಲಾಧಿಕಾರಿ

* ಸತೀಶ್‌ ದೇಪುರ

ಟಾಪ್ ನ್ಯೂಸ್

halapp-acgar

ವಿಜಯಪುರ: ಭೂಕಂಪದ ಆತಂಕ ಬೇಡವೆಂದ ಸಚಿವ ಹಾಲಪ್ಪ ಆಚಾರ್

70

ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

ಹಾಲಪ್ಪ ಆಚಾರ್

ಕಳೆದ ಬಾರಿ ಎಂ.ಸಿ.ಮನಗೂಳಿ ಗೆದ್ದಿದ್ದು ಕೊನೆಯ ಚುನಾವಣೆಯೆಂಬ ಅನುಕಂಪದಿಂದ: ಹಾಲಪ್ಪ ಆಚಾರ್

captain

ರೈತರ ಹೋರಾಟಕ್ಕೆ ಸೌಹಾರ್ದಯುತ ಪರಿಹಾರ?: ಮತ್ತೆ ಶಾ-ಕ್ಯಾಪ್ಟನ್ ಭೇಟಿ

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಅಭಿಮನ್ಯು ನೇತೃತ್ವದ ಗಜಪಡೆ ತವರಿಗೆ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

ಅಧಿಕಾರ ಮೊಟಕುಗೊಳಿಸಲು ಪ್ರತಾಪ್ ಸಿಂಹ, ಕೆ.ಮಹದೇವ್ ಒಳ ಒಪ್ಪಂದ:ಮಾಜಿ ಶಾಸಕ ಕೆ.ವೆಂಕಟೇಶ

Untitled-1

ಮಾಹಿತಿ ನೀಡಲು ವಿಫಲವಾದ ಹುಣಸೂರು ನಗರಸಭೆ ಅಧಿಕಾರಿಗೆ ಎರಡನೇ ಬಾರಿಗೆ 5 ಸಾವಿರ ರೂ ದಂಡ

Untitled-1

ಅತ್ತಿಕುಪ್ಪೆಯಲ್ಲಿ ಪಡಿತರ ಉಪಕೇಂದ್ರ ಉದ್ಘಾಟನೆ,ಡೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ವಾರದಲ್ಲಿ ವಿದ್ಯುತ್ ಸಂಪರ್ಕಕ್ಕೆ  ಶಾಸಕ ಮಂಜುನಾಥ್ ಆದೇಶ

ವಾರದಲ್ಲಿ ವಿದ್ಯುತ್ ಸಂಪರ್ಕಕ್ಕೆ ಶಾಸಕ ಮಂಜುನಾಥ್ ಆದೇಶ

MUST WATCH

udayavani youtube

ವಿಶೇಷ ಚೇತನ ಅಭಿಮಾನಿಯೊಬ್ಬನನ್ನು ಕಾಣಲು ಬಂದ ರಿಯಲ್ ಸ್ಟಾರ್ ಉಪೇಂದ್ರ!

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

ಹೊಸ ಸೇರ್ಪಡೆ

17gudi1_1710bg_2

ವರಾಹಗಿರಿ ಬೆಟ್ಟ ಪ್ರವಾಸಿ ತಾಣ ಮಾಡಲು ಸಿದ್ಧ

13

ಶಾಸಕ ಪಾಟೀಲ್‌ ಹೇಳಿಕೆಗೆ ರಾಜಕೀಯ ಧ್ವನಿ

halapp-acgar

ವಿಜಯಪುರ: ಭೂಕಂಪದ ಆತಂಕ ಬೇಡವೆಂದ ಸಚಿವ ಹಾಲಪ್ಪ ಆಚಾರ್

70

ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

ಗಂಗಾವತಿ: ಸಾಣಾಪುರ್ ಲೇಕ್; ಜಂಪಿಂಗ್ ಮಾಡಲು ಹೋಗಿ ಇಬ್ಬರು ಐಟಿ ಉದ್ಯೋಗಿಗಳು ನೀರು ಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.