ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳ


Team Udayavani, Jul 8, 2020, 5:59 AM IST

abini-jalashaya

ಎಚ್‌.ಡಿ.ಕೋಟೆ: ತಾಲೂಕಿನ ಕಬಿನಿ ಜಲಾಶಯದ ಒಡಲೀಗ ಮುಂಗಾರು ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಹಂತಹಂತವಾಗಿ ಭರ್ತಿಯಾಗುತ್ತಿದ್ದು, ಸೋಮವಾರ ಜಲಾಶಯದ ಒಳ ಹರಿವು 9 ಸಾವಿರ ಕ್ಯೂಸೆಕ್‌ ಇತ್ತು. ಮೇ ತಿಂಗಳ  ಕೊನೆಯ ವಾರದಲ್ಲಿ ಆರಂಭಗೊಳ್ಳಬೇಕಾದ ಮುಂಗಾರು ಮಳೆ ಪ್ರಸಕ್ತ ಸಾಲಿನಲ್ಲಿ ಮಳೆಯೇ ಬರದೆ ಜನ ಕಂಗಾಲಾಗುವಂತೆ ಮಾಡಿತ್ತು.

ಬಳಿಕ ಕಳೆದ ಕೆಲ ದಿನಗಳಿಂದ ಹೇಳಿಕೊಳ್ಳುವಂತಹ ಮಳೆ ಅಗದಿದ್ದರೂ ಸ್ವಲ್ಪಮಟ್ಟಿಗೆ  ಮಳೆಯಾಗುತ್ತಿದೆ. ಇದರಿಂದ ಮತ್ತು ನೆರೆಯ ಕೇರಳ ರಾಜ್ಯದ ವೈನಾಡಿನಲ್ಲಿ ಮಳೆ ಆರಂಭವಾಗಿದೆ. ಕಳೆದ 3 ದಿನಗಳ ಹಿಂದಿನಿಂದ ಜಲಾಶಯದ ಒಳ ಹರಿವಿನಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ದಿನೇದಿನೇ ಏರಿಕೆ: ಮೂರು ದಿನಗಳ ಹಿಂದೆ 3-4 ಸಾವಿರ ಕ್ಯೂಸೆಕ್‌ ಒಳ ಹರಿವು ಆರಂಭ  ಗೊಂಡು ಭಾನುವಾರ 6 ಸಾವಿರ ಕ್ಯೂಸೆಕ್‌ಗೆ ಏರಿಕೆ ಯಾದ ಒಳ ಹರಿವು ಸೋಮವಾರ ಮುಂಜಾನೆಯಿಂದ 9 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯದ ಒಳ ಹರಿವಿನಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗ ಳಿದ್ದು, ಜಲಾಶಯದ ಒಳ ಹರಿವಿನಲ್ಲಿಯೂ ಏರಿಕೆಯಾಗಲಿದೆ.

ತಡವಾದ ಮುಂಗಾರು: ಪ್ರತಿವರ್ಷ ಮೇ ಅಂತ್ಯ ಇಲ್ಲವೇ ಜೂನ್‌ ಮಾಹೆಯಲ್ಲಿ ಇಡೀ ರಾಜ್ಯದಲ್ಲಿಯೇ ಮೊದಲು ಭರ್ತಿಯಾಗುತ್ತಿದ್ದ ಜಲಾಶಯ, ಈ ವರ್ಷವೂ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದೆ. ಜುಲೈ ತಿಂಗಳು  ಆರಂಭಗೊಂಡರೂ ಮಳೆಯಾಗದೇ ಜಲಾಶಯ ಸಂಪೂರ್ಣ ಭರ್ತಿಯಾಗಲು ಹಲವು ದಿನ ಕಾಯಬೇಕಿದೆ.

ನೀರಿನ ಮಟ್ಟ ಎಷ್ಟು: ಜಲಾಶಯದ ಒಟ್ಟು ಗರಿಷ್ಠ ನೀರಿನ ಮಟ್ಟ 2,284 ಅಡಿಗಳಿದ್ದು, ಸೋಮವಾರ ಜಲಾಶಯದ ನೀರಿನ ಮಟ್ಟ 2,266.04 ಅಡಿಗಳಿತ್ತು. ಇನ್ನು ಜಲಾಶಯದ ನೀರಿನ ಮಟ್ಟ 2,267ಅಡಿಗಳಿದ್ದು, ಜಲಾಶಯದಿಂದ  1,500 ಸಾವಿರ ಕ್ಯೂಸೆಕ್‌ ನೀರನ್ನು ಪವರ್‌ಹೌಸ್‌ ಮೂಲಕ ಹೊರ ಹರಿಯ ಬಿಡಲಾಗಿದೆ. ಅಧಿಕ ಕ್ಯೂಸೆಕ್‌ ಕಳೆದ ಸಾಲಿನಲ್ಲಿ ಮುಂಗಾರು 2 ತಿಂಗಳು ತಡವಾಗಿ ಆರಂಭಗೊಳ್ಳುತ್ತಿದ್ದಂತೆಯೇ ಕಬಿನಿ ಜಲಾಶಯದ ಇತಿಹಾಸದಲ್ಲೇ ಹಿಂದೆಂದೂ ಕಂಡೂ ಕೇಳರಿಯದ 1ಲಕ್ಷ ಕ್ಯೂಸೆಕ್‌ ಒಳ ಹರಿವಿನೊಂದಿಗೆ ಅಷ್ಟೇ ಪ್ರಮಾಣದ  ನೀರನ್ನು ತನ್ನೊಡಲಿಂದ 4 ಕ್ರಸ್ಟ್‌ಗೇಟ್‌ ಮೂಲಕ ಬೋರ್ಗರೆದು ಹೊರ ಬಿಡಲಾಗಿತ್ತು.

ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಇದೇ ಜುಲೈ ತಿಂಗಳಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ 2,261 ಅಡಿಗಳಿತ್ತು. ಒಳ ಹರಿವಿನಲ್ಲಿಯೂ ತೀವ್ರ ಇಳಿಕೆ  ಇತ್ತು. ಈ ಬಾರಿ ಮಳೆ ತಡವಾಗಿ ಆರಂಭಗೊಂಡರೂ ದಿನೇದಿನೇ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಅತೀ ಶೀಘ್ರದಲ್ಲಿ ಜಲಾಶಯ ಭರ್ತಿಯಾಗಿ ತಾಲೂಕಷ್ಟೇ ಅಲ್ಲದೇ ಕಬಿನಿ ಜಲಾಶಯ ಪಾತ್ರದ ರೈತರು  ಸಮೃದ ಬೆಳೆ ಬೆಳೆಯುವಂತಾಗಬೇಕು.

* ಎಚ್.ಬಿ.ಬಸವರಾಜು

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.