Defense: 7,800 ಕೋ.ರೂ. “ರಕ್ಷಣಾ” ಖರೀದಿ
Team Udayavani, Aug 24, 2023, 10:05 PM IST
ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಬಲತುಂಬುವ ನಿಟ್ಟಿನಲ್ಲಿ 7,800 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಹಾಗೂ ತಂತ್ರಜ್ಞಾನಗಳ ಖರೀದಿಯ ಪ್ರಸ್ತಾಪಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ನೇತೃತ್ವದ ಡಿಎಸಿ (ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ) ಅನುಮೋದನೆ ನೀಡಿದೆ ಎಂದು ಗುರುವಾರ ರಕ್ಷಣಾ ಸಚಿವಾಲಯ ತಿಳಿಸಿದೆ.
ವಾಯುಪಡೆಗಳಲ್ಲಿನ ಸುರಕ್ಷತೆ ಹೆಚ್ಚಿಸಲು ಎಂಐ-17ವಿ5 ಹೆಲಿಕಾಪ್ಟರ್ಗಳಲ್ಲಿ ಎಲೆಕ್ಟ್ರಾನಿಕ್ ವಾರ್ಫೇರ್ ಸ್ಯೂಟ್ಗಳನ್ನು ಅಳವಡಿಸಲು ಯೋಜಿಸಲಾಗಿದ್ದು, ಅವುಗಳನ್ನು ಖರೀದಿಸಲು ಅನುಮೋದಿಸಲಾಗಿದೆ. ಜತೆಗೆ ಯುದ್ಧಭೂಮಿಯಲ್ಲಿನ ವಿವಿಧ ಕಾರ್ಯಾಚರಣೆಗಳಲ್ಲಿ ಅವಶ್ಯವಾಗಿರುವ ಕೆಲ ಸ್ವಾಯತ್ತ ತಂತ್ರಜ್ಞಾನ ವ್ಯವಸ್ಥೆ ಜತೆಗೆ 7.62.51 ಎಂಎಂ ಲೈಟ್ ಮಷಿನ್ ಗನ್, ಬ್ರಿಡ್ಜ್ ಲೇಯಿಂಗ್ ಟ್ಯಾಂಕ್ಗಳು ಮತ್ತು ನೌಕಾಪಡೆಯ ಬಲ ಹೆಚ್ಚಿಸಲು ಎಂಎಚ್-60ಆರ್ ಹೆಲಿಕಾಪ್ಟರ್ಗಳಿಗೆ ಶಸ್ತ್ರಾಸ್ತ್ರಗಳ ಖರೀದಿಗೂ ಅನುಮತಿಸಿದೆ.