Adani: ಬಿಹಾರದಲ್ಲಿ ಅದಾನಿ ಗ್ರೂಪ್ 9 ಸಾವಿರ ಕೋಟಿ ಹೂಡಿಕೆ
Team Udayavani, Dec 14, 2023, 11:21 PM IST
ಪಾಟ್ನಾ: ಕೇಂದ್ರ ಸರಕಾರ ಅದಾನಿ ಗ್ರೂಪ್ಗೆ ವಿಶೇಷ ಆದ್ಯತೆ ನೀಡುತ್ತಿದೆ ಎಂಬ ಆರೋಪಗಳ ನಡುವೆಯೇ ಬಿಹಾರದಲ್ಲಿ ಅದಾನಿ ಗ್ರೂಪ್ ಹೆಚ್ಚುವರಿ ಯಾಗಿ 8,700 ಕೋಟಿ ರೂ. ಹೂಡಿಕೆ ಮಾಡಿದೆ. ಈ ಬಗ್ಗೆ ಪಾಟ್ನಾದಲ್ಲಿ ನಡೆದ ಬಿಹಾರ ಬ್ಯುಸಿ ನೆಸ್ ಸಮ್ಮೇಳನ ದಲ್ಲಿ ಅದಾನಿ ಎಂಟರ್ಪ್ರೈಸಸ್ನ ನಿರ್ದೇಶಕ ಪ್ರಣವ್ ಅದಾನಿ ಪ್ರಕಟಿಸಿದ್ದಾರೆ.
ಸದ್ಯ ಬಿಹಾರದಲ್ಲಿ ನಮ್ಮ ಸಂಸ್ಥೆ 850 ಕೋಟಿ ರೂ. ಹೂಡಿಕೆ ಮಾಡಿದೆ. ಅದಕ್ಕೆ ಹೆಚ್ಚುವರಿಯಾಗಿ ವಿವಿಧ ಕ್ಷೇತ್ರಗಳಲ್ಲಿ 8,700 ಕೋಟಿ ರೂ. ಮೊತ್ತವನ್ನು ಹೂಡಿಕೆ ಮಾಡುತ್ತೇವೆ. ಈ ಮೂಲಕ ಒಟ್ಟು 9,550 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದಂತಾ ಗುತ್ತದೆ. ಇದರಿಂದಾಗಿ 10 ಸಾವಿರ ಉದ್ಯೋಗ ಗಳು ಸೃಷ್ಟಿಯಾಗಲಿವೆ ಎಂದು ಪ್ರಣವ್ ಪ್ರಕಟಿಸಿದರು. ಈ ಸಂದರ್ಭದಲ್ಲಿ ಸಿಎಂ ನಿತೀಶ್ ಕುಮಾರ್ ಇದ್ದರು.