Ahmedabad: ಬಿಜೆಪಿ ಸೇರಲು ಶಾಸಕನ ರಾಜೀನಾಮೆ
Team Udayavani, Jan 25, 2024, 9:05 PM IST
ಅಹಮದಾಬಾದ್: ಗುಜರಾತ್ನ ಸ್ವತಂತ್ರ ಶಾಸಕ ಧರ್ಮೇಂದ್ರ ಸಿಂಘ್ ವಘೇಲಾ ಅವರು ತಮ್ಮ ಶಾಸಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದರು. ಇದೇ ವೇಳೆ ತಾವು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ವಾಪಸಾಗುವುದಾಗಿ ಘೋಷಿಸಿದರು. ಗಾಂಧಿನಗರದಲ್ಲಿ ಗುಜರಾತ್ ವಿಧಾನಸಭೆ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ವಘೇಲಾ ರಾಜೀನಾಮೆ ಪತ್ರವನ್ನು ನೀಡಿದರು.
2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ವಘೇಲಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು. ಈಗಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಘೇಲಾ, ಬಿಜೆಪಿ ಅಭ್ಯರ್ಥಿ ಅಶ್ವಿನ್ ಪಟೇಲ್ ವಿರುದ್ಧ 14,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.