WFI: ಬಜರಂಗ್, ವಿನೇಶ್ ಪ್ರತಿಭಟನೆ ನಕಲಿ!- ಮಹಿಳಾ ಕುಸ್ತಿಪಟುವೊಬ್ಬರ ಆರೋಪ
Team Udayavani, Jan 2, 2024, 11:31 PM IST
ಹೊಸದಿಲ್ಲಿ: ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬೃಜ್ಭೂಷಣ್ ಶರಣ್ ಸಿಂಗ್ ವಿರುದ್ಧ ತೀವ್ರ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳಾದ ಬಜರಂಗ್ ಪುನಿಯ, ವಿನೇಶ್ ಫೋಗಟ್, ಸಾಕ್ಷಿ ವಿರುದ್ಧವೇ ಕೆಲವು ರಾಜ್ಯಗಳ ಕುಸ್ತಿಪಟುಗಳು ತಿರುಗಿಬಿದ್ದಿದ್ದಾರೆ.
ಈ ಮೂವರು ನಕಲಿ ಪ್ರತಿಭಟನೆ ನಡೆಸುತ್ತಿದ್ದಾರೆ, ಇವರು ದೇಶದ ಕುಸ್ತಿ ವ್ಯವಸ್ಥೆಯನ್ನು ಹಾಳು ಮಾಡಲು ಯತ್ನಿ ಸುತ್ತಿದ್ದಾರೆ ಎಂದು ಏಷ್ಯಾಡ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಮಹಿಳಾ ಕುಸ್ತಿಪಟುವೊಬ್ಬರು ಆರೋಪಿಸಿದ್ದಾರೆ. ವಿಶ್ವ ಕುಸ್ತಿ ಒಕ್ಕೂಟ ದೇಶದ ಕುಸ್ತಿಯನ್ನು ಕಾಪಾಡಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.