25 ಕೋಟಿ ಮೌಲ್ಯದ ನಿವೇಶನ ಕಬಳಿಸಲು ಬಿಜೆಪಿ ಸಂಚು : ಮಂಜುನಾಥ್‌ ಗಡಿಗುಡಾಳ್‌ ಗಂಭೀರ ಆರೋಪ

Team Udayavani, Apr 4, 2022, 4:17 PM IST

25 ಕೋಟಿ ಮೌಲ್ಯದ ನಿವೇಶನ ಕಬಳಿಸಲು ಬಿಜೆಪಿ ಸಂಚು : ಮಂಜುನಾಥ್‌ ಗಡಿಗುಡಾಳ್‌ ಗಂಭೀರ ಆರೋಪ

ದಾವಣಗೆರೆ: ಇಲ್ಲಿನ ಎಂಸಿಸಿ ಬಿ ಬ್ಲಾಕ್‌ನಲ್ಲಿ ಮಹಾನಗರಪಾಲಿಕೆಗೆ ಸೇರಿದ 25 ಕೋಟಿ ರೂ. ಮೌಲ್ಯದ ನಿವೇಶನ ಕಬಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ.ಎಸ್‌. ಮಂಜುನಾಥ್‌ ಗಡಿಗುಡಾಳ್‌ ಗಂಭೀರ ಆರೋಪ ಮಾಡಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಮಹಾನಗರಪಾಲಿಕೆಯ ನಿವೇಶನದಲ್ಲಿ ಒಳಾಂಗಣ ಕ್ರೀಡಾಂಗಣ, ವಾಣಿಜ್ಯ ಕಟ್ಟಡ, ನಗರಪಾಲಿಕೆ ಕಚೇರಿ ನಿರ್ಮಾಣಕ್ಕೆ ಮನವಿ ಮಾಡಲಾಗುತ್ತಿದೆ.

ಸ್ವತಃ ಶಾಸಕ ರವೀಂದ್ರನಾಥ್‌ ಕೂಡ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಆ ನಿವೇಶನ ಕಾರ್ಯಾಲಯಕ್ಕೆ ನಿವೇಶನ ಮಂಜೂರು ಮಾಡಿಕೊಡುವಂತೆ ಬಿಜೆಪಿ  ಜಿಲ್ಲಾಧ್ಯಕ್ಷರು ಮಹಾನಗರಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ. ಅದು ನಮ್ಮ ಜಾಗ ಮತ್ತು ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ನಿವೇಶನ ಬಿಟ್ಟುಕೊಡುವುದಿಲ್ಲ ಎಂದರು.

ಎಂಸಿಸಿ ಬಿ ಬ್ಲಾಕ್‌ನಲ್ಲಿ 3681/10, 3681/10ಎ, 3681/11 ಹಾಗೂ 3681/12 ಸರ್ವೇ ನಂಬರ್‌ನಲ್ಲಿ 131.23  -196.86 ಅಡಿ ಸುತ್ತಳತೆಯ ಮಹಾನಗರ ಪಾಲಿಕೆಗೆ ಸೇರಿದ ನಿವೇಶನ ಇದೆ. ಈಗಿನ ಮಾರುಕಟ್ಟೆ ಬೆಲೆ 25 ಕೋಟಿ ರೂ. ಆಗಬಹುದು.

ಅಂತಹ ಬೆಲೆ ಬಾಳುವ ಮತ್ತು ಸಾರ್ವಜನಿಕ ಅನುಕೂಲಕ್ಕೆ ಮೀಸಲಿಟ್ಟಿರುವ ಜಾಗವನ್ನ ಬಿಜೆಪಿ ಕಾರ್ಯಾಲಯಕ್ಕೆ ಮಂಜೂರು ಮಾಡಿಕೊಡಬೇಕು ಎಂದು ಜಿಲ್ಲಾಧ್ಯಕ್ಷ ಎಸ್‌. ಎಂ. ವೀರೇಶ್‌ ಹನಗವಾಡಿ ಜ. 20ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ನಿವೇಶನ ಕಬಳಿಸುವ ಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.

ನಾವು ಯಾವುದೇ ಕಾರಣಕ್ಕೂ ನಿವೇಶನ ಬಿಟ್ಟು ಕೊಡುವುದಿಲ್ಲ. ಕಾನೂನು ಹೋರಾಟ ಒಳಗೊಂಡಂತೆ ಎಲ್ಲ ಹಂತದ ಹೋರಾಟ ನಡೆಸುತ್ತೇವೆ. ಆ ಜಾಗವನ್ನು ಬಿಜೆಪಿ ಆಸ್ತಿಯನ್ನಾಗಿ ಮಾಡಿಕೊಳ್ಳಲು ಬಿಡುವುದೇ ಇಲ್ಲ. ಎಂತದ್ದೇ ತ್ಯಾಗಕ್ಕೂ ಸಿದ್ಧ ಎಂದು ಗುಡುಗಿದರು.

ಇದನ್ನೂ ಓದಿ :ಗ್ರಾಮಗಳಿಗೆ ಹೆಸರು ಬದಲಾವಣೆ ನಿರೀಕ್ಷೆ! | ಜಿಲ್ಲೆಯಲ್ಲೂ ಇವೆ ಹಲವು ಜಾತಿಸೂಚಕ ಗ್ರಾಮಗಳು

ಕಾಂಗ್ರೆಸ್‌ ಸದಸ್ಯ ಎ. ನಾಗರಾಜ್‌ ಮಾತನಾಡಿ, ಮಹಾನಗರ ಪಾಲಿಕೆ ಬಜೆಟ್‌ ಸಭೆಯಲ್ಲಿ ಏಕಾಏಕಿ ಸ್ವಯಂ ಘೋಷಣೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನ ವಿರೋಧಿ ಸಿ ಮುಂದಿನ ದಿನಗಳಲ್ಲಿ ಹಂತ ಹಂತದ ಹೋರಾಟ ನಡೆಸಲಾಗುವುದು. ಕೊರೊನಾ ಕಾರಣದಿಂದ ತೆರಿಗೆ ಹೆಚ್ಚಳ ಮಾಡದಂತೆ ಮನವಿ ಮಾಡಲಾಗಿತ್ತು.

ಆದರೂ ಬಜೆಟ್‌ ಸಭೆಯಲ್ಲಿ ಎಸ್‌ ಎಎಸ್‌ ಪದ್ಧತಿಯಡಿ ಶೇ. 3 ರಷ್ಟು ತೆರಿಗೆ ಹೆಚ್ಚಿಸಿರುವುರಿಂದ ಜನರಿಗೆ ಹೊರೆ ಅಗಲಿದೆ. 2005-06ರಲ್ಲಿ ನಿಗದಿಯಾಗಿರುವಂತೆ ತೆರಿಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

2020-21ನೇ ಸಾಲಿನಲ್ಲಿ ಜಿಲ್ಲಾಧಿಕಾರಿ ಅಧಿಕಾರಾವಧಿಯಲ್ಲಿ ವಸತಿ ವಲಯಕ್ಕೆ ಶೇ. 15, ವಾಣಿಜ್ಯ ಸಂಕೀರ್ಣಕ್ಕೆ ಶೇ. 17 ತೆರಿಗೆ ಹೆಚ್ಚಿಸಲಾಗಿದೆ. ಈಗ ಉಪ ನೋಂದಣಿ ಇಲಾಖೆ ಮೌಲ್ಯದ ಆಧಾರದಲ್ಲಿ ಶೇ. 3 ರಿಂದ 5ರಷ್ಟು ತೆರಿಗೆ ಹೆಚ್ಚಿಸಿರುವುದರಿಂದ ತೆರಿಗೆ ಪಾವತಿದಾರರಿಗೆ ಹೆಚ್ಚು ಹೊರೆ ಆಗಲಿದೆ. ಒಂದು ವರ್ಷ ತೆರಿಗೆ ಕಟ್ಟದೇ ಹೋದಲ್ಲಿ ಶೇ. 24ರಷ್ಟು ದಂಡ ಹಾಕಲಾಗುವುದು. ಮೂಲ ಕಂದಾಯಕ್ಕೆ ಸೆಸ್‌ ವಿಧಿ ಸಬೇಕು. ತೆರಿಗೆ ಹೆಚ್ಚಳ ಹಿಂದಕ್ಕೆ ಪಡೆಯಬೇಕು. ಇಲ್ಲದೆ ಹೋದರೆ ಕಾಂಗ್ರೆಸ್‌ ನಿಂದ ಹೋರಾಟ ಮಾಡಲಾಗುವುದು ಎಂದರು.

ಸದಸ್ಯ ಕೆ. ಚಮನ್‌ ಸಾಬ್‌ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು, ಜನರ ಬೇರೆಡೆ ಗಮನ ಸೆಳೆಯಲು ಹಿಜಾಬ್‌, ಕಾಶೀ¾ರ್‌ ಫೈಲ್ಸ್‌, ಈಗ ಜಟ್ಕಾ, ಹಲಾಲ್‌ ಕಟ್‌ ವಿಚಾರ ಕೈಗೆತ್ತಿಕೊಂಡಿವೆ ಎಂದು ದೂರಿದರು. ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ಗಣೇಶ್‌ ಹುಲ್ಮನೆ ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

8-

Charmadi ಘಾಟ್‌ನಲ್ಲಿ ಟಾಟಾ ಏಸ್‌ ಪಲ್ಟಿ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

8-

Charmadi ಘಾಟ್‌ನಲ್ಲಿ ಟಾಟಾ ಏಸ್‌ ಪಲ್ಟಿ

Prajadhwani 2; ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಮಾವೇಶ

Prajadhwani 2; ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.