BJP: ಶಾ ಪ್ರವಾಸ ಬೆಂಗಳೂರಿಗಿಲ್ಲ; ಮೈಸೂರಿಗೆ ಮಾತ್ರ?
Team Udayavani, Feb 8, 2024, 12:46 AM IST
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಳೂರು ಭೇಟಿ ಕಾರ್ಯಕ್ರಮ ಬಹುತೇಕ ರದ್ದಾಗುವ ಸಾಧ್ಯತೆ ಇದ್ದು, ಅವರು ಮೈಸೂರಿನ ಸುತ್ತೂರು ಮಠದಲ್ಲಿ ಫೆ.
11ರಂದು ನಡೆಯುವ ಕಾರ್ಯಕ್ರಮದಲ್ಲಿ ಮಾತ್ರಭಾಗವಹಿಸಲಿದ್ದಾರೆ.
ಫೆ. 10ರಂದು ಅಮಿತ್ ಶಾ ಬೆಂಗಳೂರು ಪ್ರವಾಸ ಈ ಹಿಂದೆ ನಿಗದಿ ಯಾಗಿತ್ತು. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ಹಾಗೂ ಬೆಂಗಳೂರು ಕ್ಲಸ್ಟರ್ ಸಭೆಯಲ್ಲಿ ಅವರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಮೈಸೂರು ಭೇಟಿ ಮಾತ್ರ ಅಂತಿಮಗೊಂಡಿದೆ. ಮೈಸೂರು ಕ್ಲಸ್ಟರ್ ಸಮಿತಿ ಸಭೆ ನಡೆಯುವ ಸಾಧ್ಯತೆಯೂ ಕ್ಷೀಣವಾಗಿದೆ.