ಸಿ.ಎಸ್‌.ಶಿವಳ್ಳಿ ಪುತ್ರಿ ರೂಪಾಗೆ ಶೇ.76 ಅಂಕ

Team Udayavani, May 7, 2019, 3:05 AM IST

ಹುಬ್ಬಳ್ಳಿ: ತಂದೆಯ ಸಾವಿನ ದುಃಖದ ನಡುವೆಯೂ 10ನೇ ತರಗತಿ(ಸಿಬಿಎಸ್‌ಇ) ಪರೀಕ್ಷೆ ಬರೆದಿದ್ದ ಸಿ.ಎಸ್‌.ಶಿವಳ್ಳಿ ಅವರ ಪುತ್ರಿ ರೂಪಾ ಶೇ.76 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಕನ್ನಡ-87, ಇಂಗ್ಲೀಷ್‌-65, ಗಣಿತ-55, ವಿಜ್ಞಾನ-82, ಸಾಮಾಜಿಕ ವಿಜ್ಞಾನ-91 ಅಂಕ ಪಡೆದಿದ್ದಾರೆ.

ಇಂಗ್ಲಿಷ್‌ ವಿಷಯದ ಪರೀಕ್ಷಾ ಹಿಂದಿನ ದಿನವೇ ತಂದೆಯ ಅಕಾಲಿಕ ಸಾವು ಬಹುದೊಡ್ಡ ಆಘಾತ ತಂದಿತ್ತು. ತಂದೆ ಸಾವಿನ ನೋವಿನಲ್ಲೂ ಕಣ್ಣೀರಿಡುತ್ತಲೇ ಪರೀಕ್ಷಾ ಕೇಂದ್ರ ಪ್ರವೇಶಿಸಿದ್ದ ರೂಪಾ ಪರೀಕ್ಷೆ ಮುಗಿದ ಬಳಿಕ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಸಂತಸ ಪಡುತ್ತಿದ್ದರು: ಪರೀಕ್ಷೆಯ ಮುನ್ನಾ ದಿನ ಅಪ್ಪಾಜಿ ಹಾರೈಸಿದ್ದರು. ಹೆದರಬೇಡ ಎಂದು ಧೈರ್ಯ ಹೇಳಿದ್ದರು. ಅಪ್ಪಾಜಿಯೇ ನಮಗೆ ದೊಡ್ಡ ಶಕ್ತಿಯಾಗಿದ್ದರು. ನನ್ನ ಫ‌ಲಿತಾಂಶ ನೋಡಿದ್ದರೆ ಅಪ್ಪಾಜಿ ಸಾಕಷ್ಟು ಸಂತಸ ಪಡುತ್ತಿದ್ದರು. ಅವರ ಸಂತಸವನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮಗಿಲ್ಲದಂತಾಗಿದೆ.

ನನ್ನ ಗುರಿ ಶೇ.95 ಆಗಿತ್ತು. ಆದರೆ ಅಪ್ಪಾಜಿಯ ಅಗಲಿಕೆಯಿಂದ ನನಗೆ ಪರೀಕ್ಷೆಯೇ ಬೇಡವಾಗಿತ್ತು. ಎಲ್ಲರೂ ಒತ್ತಾಯ ಮಾಡಿ ಪರೀಕ್ಷೆ ಬರೆಸಿದರು. ಫ‌ಲಿತಾಂಶ ಚೆನ್ನಾಗಿ ಬಂದಿದೆ ಎಂದು ಅಮ್ಮ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನುವಾಗ ಕಣ್ಣಲ್ಲಿ ನೀರು ತುಂಬಿದವು.

ಐಎಎಸ್‌ ಅಧಿಕಾರಿಯಾಗುವೆ: ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ಬಂದಿವೆ. ಪಿಯುನಲ್ಲಿ ಹೆಚ್ಚಿನ ಅಂಕ ಗಳಿಸುವೆ. ಐಎಎಸ್‌ ಮಾಡಿ ಸಮಾಜದಲ್ಲಿ ತುಳಿತಕ್ಕೊಳಗಾದವರ ಸೇವೆ ಮಾಡಬೇಕೆಂದು ಅಪ್ಪಾಜಿ ಹೇಳುತ್ತಿದ್ದರು. ಅಪ್ಪಾಜಿ ಆಶಯದಂತೆ ಐಎಎಸ್‌ ಅಧಿಕಾರಿ ಇಲ್ಲವೆ ರಾಜಕಾರಣಿಯಾಗಿ ಜನರ ಸೇವೆಗೆ ಮುಂದಾಗುವೆ. ಪಿಯುನಲ್ಲಿ ವಿಜ್ಞಾನ ವಿಭಾಗ ಆಯ್ದುಕೊಳ್ಳುವೆ ಎಂದು ರೂಪಾ ಶಿವಳ್ಳಿ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ