ವನಿತಾ ಟಿ20 ವಿಶ್ವಕಪ್‌: ಕೆರಿಬಿಯನ್ನರಿಗೆ ಹೊಡೆತವಿಕ್ಕಿದ ಕೌರ್‌ ಪಡೆ


Team Udayavani, Feb 16, 2023, 7:00 AM IST

ವನಿತಾ ಟಿ20 ವಿಶ್ವಕಪ್‌: ಕೆರಿಬಿಯನ್ನರಿಗೆ ಹೊಡೆತವಿಕ್ಕಿದ ಕೌರ್‌ ಪಡೆ

ಕೇಪ್‌ ಟೌನ್‌: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ವೆಸ್ಟ್‌ ಇಂಡೀಸ್‌ಗೆ 6 ವಿಕೆಟ್‌ ಸೋಲುಣಿಸಿದ ಭಾರತ ಸತತ 2 ಜಯದೊಂದಿಗೆ ಮೆರೆದಾಡಿದೆ.

ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ವೆಸ್ಟ್‌ ಇಂಡೀಸ್‌ 6 ವಿಕೆಟಿಗೆ 118 ರನ್‌ ಗಳಿಸಿದರೆ, ಭಾರತ 18.1 ಓವರ್‌ಗಳಲ್ಲಿ 4 ವಿಕೆಟಿಗೆ 119 ರನ್‌ ಬಾರಿಸಿತು. ಇದು ವಿಂಡೀಸ್‌ಗೆ ಎದುರಾದ ಸತತ 2ನೇ ಸೋಲು.

ಶಫಾಲಿ ವರ್ಮ ಮೊದಲ ಓವರ್‌ನಲ್ಲೇ 3 ಬೌಂಡರಿ ಬಾರಿಸಿ ಭಾರತಕ್ಕೆ ಸ್ಫೋಟಕ ಆರಂಭ ಒದಗಿಸಿದರು. ದ್ವಿತೀಯ ಓವರ್‌ನಲ್ಲಿ ಸ್ಮತಿ ಮಂಧನಾ ಮತ್ತು ಶಫಾಲಿ ಸೇರಿಕೊಂಡು ಮತ್ತೆ 3 ಫೋರ್‌ ಹೊಡೆದರು. ಎರಡೇ ಓವರ್‌ಗಳಲ್ಲಿ 28 ರನ್‌ ಹರಿದು ಬಂತು. ಆದರೆ ಮಂಧನಾ ಸ್ಟಂಪ್ಡ್ ಆಗಿ ನಿರ್ಗಮಿಸುವುದರೊಂದಿಗೆ ಭಾರತದ ರನ್‌ ಗತಿ ಕುಂಟಿತಗೊಂಡಿತು. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಮಂಧನಾ ಗಳಿಕೆ 10 ರನ್‌.

ಪಾಕಿಸ್ಥಾನ ವಿರುದ್ಧ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದ ಜೆಮಿಮಾ ಆಟ ಕೇವಲ ಒಂದೇ ರನ್ನಿಗೆ ಮುಗಿಯಿತು. ಸಿಡಿದು ನಿಂತಿದ್ದ ಶಫಾಲಿ 23 ಎಸೆತಗಳಿಂದ 28 ರನ್‌ ಮಾಡಿದರು (5 ಬೌಂಡರಿ). 8ನೇ ಓವರ್‌ ಆರಂಭದ ವೇಳೆ 43ಕ್ಕೆ 3 ವಿಕೆಟ್‌ ಬಿತ್ತು. 10 ಓವರ್‌ ಅಂತ್ಯಕ್ಕೆ ಈ ಮೊತ್ತ 64ಕ್ಕೆ ಏರಿತು.

ಹರ್ಮನ್‌ಪ್ರೀತ್‌ ಕೌರ್‌ ಮತ್ತು ರಿಚಾ ಘೋಷ್‌ ಸೇರಿಕೊಂಡು 72 ರನ್‌ ಜತೆಯಾಟ ನಿಭಾಯಿಸಿ ತಂಡವನ್ನು ಸುಲಭದಲ್ಲಿ ದಡ ಸೇರಿಸಿದರು. ಕೌರ್‌ 42 ಎಸೆತಗಳಿಂದ 33 ರನ್‌ (3 ಬೌಂಡರಿ), ರಿಚಾ 32 ಎಸೆತಗಳಿಂದ 44 ರನ್‌ ಮಾಡಿ ಅಜೇಯರಾಗಿ ಉಳಿದರು (5 ಬೌಂಡರಿ).

ವಿಂಡೀಸ್‌ ಸಾಮಾನ್ಯ ಮೊತ್ತ
ನಾಯಕಿ ಹ್ಯಾಲಿ ಮ್ಯಾಥ್ಯೂಸ್‌ (1) ಅವರನ್ನು ವಿಂಡೀಸ್‌ ಬೇಗನೇ ಕಳೆದುಕೊಂಡಿತು. ಪಂದ್ಯದ ದ್ವಿತೀಯ ಓವರ್‌ನ ಮೊದಲ ಎಸೆತದಲ್ಲೇ ಪೂಜಾ ಆಘಾತವಿಕ್ಕಿದರು. ಸ್ಕೋರ್‌ ಕೇವಲ 4 ರನ್‌ ಆಗಿತ್ತು. ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ಸ್ಟಫಾನಿ ಟಯ್ಲರ್‌ ಮತ್ತು ಶಿಮೇನ್‌ 12 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ 73 ರನ್‌ ಒಟ್ಟುಗೂಡಿಸಿದರು.

ಈ ಜೋಡಿಯನ್ನು ಬೇರ್ಪಡಿಸಿದ್ದು ದೀಪ್ತಿ ಶರ್ಮ. ಕ್ರೀಸ್‌ ಆಕ್ರಮಿಸಿಕೊಂಡು ಇಬ್ಬರನ್ನೂ ಅವರು ಒಂದೇ ಓವರ್‌ನಲ್ಲಿ ಉಡಾಯಿಸಿ ಮೇಲುಗೈ ಒದಗಿಸಿದರು. 15 ರನ್ನಿಗೆ 3 ವಿಕೆಟ್‌ ಕಿತ್ತ ದೀಪ್ತಿ ಭಾರತದ ಯಶಸ್ವಿ ಬೌಲರ್‌. ಇದರೊಂದಿಗೆ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್‌ ಉರುಳಿಸಿದ ಸಾಧನೆಗೈದರು.

40 ಎಸೆತಗಳಿಂದ 42 ರನ್‌ ಮಾಡಿದ ಟಯ್ಲರ್‌ (6 ಬೌಂಡರಿ) ವಿಂಡೀಸಿನ ಟಾಪ್‌ ಸ್ಕೋರರ್‌. ಕ್ಯಾಂಬೆಲ್‌ 36 ಎಸೆತ ಎದುರಿಸಿ 30 ರನ್‌ ಮಾಡಿದರು (3 ಬೌಂಡರಿ). ಇವರಿಬ್ಬರ ನಿರ್ಗಮನದ ಬಳಿಕ ಶೆಡೀನ್‌ ನೇಶನ್‌ (21) ಮತ್ತು ಶಬಿಕಾ ಗಜ°ಬಿ (15) ಒಂದಿಷ್ಟು ಹೋರಾಟ ತೋರಿದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-6 ವಿಕೆಟಿಗೆ 118 (ಸ್ಟಫಾನಿ ಟಯ್ಲರ್‌ 42, ಶಿಮೇನ್‌ ಕ್ಯಾಂಬೆಲ್‌ 30, ಶೆಡೀನ್‌ ನೇಶನ್‌ ಔಟಾಗದೆ 21, ದೀಪ್ತಿ 15ಕ್ಕೆ 3, ಪೂಜಾ 21ಕ್ಕೆ 1, ರೇಣುಕಾ 22ಕ್ಕೆ 1). ಭಾರತ-18.1 ಓವರ್‌ಗಳಲ್ಲಿ 4 ವಿಕೆಟಿಗೆ 119 (ರಿಚಾ ಔಟಾಗದೆ 44, ಕೌರ್‌ 33, ಶಫಾಲಿ 28, ಮಂಧನಾ 10, ಕರಿಷ್ಮಾ ರಮರ್ಯಾಕ್‌ 14ಕ್ಕೆ 2).

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.