Electric: ಆರ್ಥಿಕ ಮಿತವ್ಯಯಿ ಇಲೆಕ್ಟ್ರಿಕ್ ಹೆದ್ದಾರಿ ನನ್ನ ಕನಸು: ನಿತಿನ್ ಗಡ್ಕರಿ
Team Udayavani, Sep 14, 2023, 11:36 PM IST
ನವದೆಹಲಿ: ಆರ್ಥಿಕವಾಗಿ ಕಾರ್ಯಸಾಧ್ಯವಾಗುವ ದೇಶದ ಮೊದಲ ಇಲೆಕ್ಟ್ರಿಕ್ ಹೆದ್ದಾರಿಯ ನಿರ್ಮಾಣ ನನ್ನ ಕನಸು. ಪ್ರಾಯೋಗಿಕವಾಗಿ ಈ ಯೋಜನೆಯನ್ನು ನಾಗ್ಪುರದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಯೋಜನೆ ಅನುಷ್ಠಾನದ ನಿಮಿತ್ತ ಕೇಂದ್ರ ವಿದ್ಯುತ್ ಸಚಿವಾಲಯದ ಜತೆಗೆ ಮಾತುಕತೆ ನಡೆಸಿದ್ದೇನೆ. ವಾಣಿಜ್ಯಿಕ ವಿದ್ಯುತ್ಗೆ ಪ್ರತಿ ಯುನಿಟ್ಗೆ 11 ರೂ. ದರ ಇದೆ. ಆದರೆ, ಹೆದ್ದಾರಿ ಯೋಜನೆ ಹಿನ್ನೆಲೆಯಲ್ಲಿ ಪ್ರತಿ ಯುನಿಟ್ಗೆ 3.50 ರೂ.ನಂತೆ ಖರೀದಿ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೇನೆ’ ಎಂದರು. ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ಖಾಸಗಿ ಕಂಪನಿಗಳೂ ಅದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗುವ ಸುಳಿವನ್ನು ನೀಡಿದ್ದಾರೆ. ವಿದ್ಯುತ್ ಕೇಬಲ್ಗಳ ನಿರ್ವಹಣೆಯಲ್ಲಿ ಅವರು ಭಾಗಿಯಾಗಬಹುದು ಎಂದರು. ಈ ಮೊದಲು ದೇಶದ ಮೊದಲ ಇಲೆಕ್ಟ್ರಿಕ್ ಹೆದ್ದಾರಿಯನ್ನು ನವದೆಹಲಿ ಮತ್ತು ಜೈಪುರ ನಡುವೆ ನಿರ್ಮಿಸುವ ಇರಾದೆ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ