Hamas: ಹಮಾಸ್ ಉಗ್ರರು ಅಲ್ಖೈದಾ ಉಗ್ರರಿಗಿಂತ ದುಷ್ಟರು: ಬೈಡೆನ್
Team Udayavani, Oct 14, 2023, 10:04 PM IST
ವಾಷಿಂಗ್ಟನ್: ಹಮಾಸ್ ಉಗ್ರರು ಅಲ್ಖೈದಾ ಉಗ್ರರಿಗಿಂತ ದುಷ್ಟರು. ಇಸ್ರೇಲ್ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ 27 ಅಮೆರಿಕನ್ನರು ಸೇರಿದಂತೆ 1,000ಕ್ಕೂ ಹೆಚ್ಚು ಅಮಾಯಕರನ್ನು ಹತ್ಯೆ ಮಾಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಕಳೆದ ಶನಿವಾರ ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ 27 ಅಮೆರಿಕನ್ನರು ಮೃತಪಟ್ಟಿದ್ದು, 14 ಮಂದಿ ಕಾಣೆಯಾಗಿದ್ದಾರೆ. ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ಕೂಡ ದಾಳಿ ನಡೆಸಿದ್ದು, ಇದುವರೆಗೆ ಇಸ್ರೇಲ್ ಮತ್ತು ಗಾಜಾ ಪಟ್ಟಿಯಲ್ಲಿ 2,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.