ಕೋಡಿಕಲ್ ಕ್ರಾಸ್ ಬಳಿ ಹೆದ್ದಾರಿ ಬದಿ ಬಿರುಕು?
Team Udayavani, May 17, 2022, 11:40 PM IST
ಪಣಂಬೂರು: ಕೊಟ್ಟಾರಚೌಕಿ ಬಳಿಯ ಕೋಡಿಕಲ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಮಿಸುತ್ತಿರುವ ಬೃಹತ್ ರಾಜಕಾಲುವೆ ಕಾಮಗಾರಿ ವಿಳಂಬವಾಗುತ್ತಿದ್ದು, ಸೋಮವಾರ ಸುರಿದ ಭಾರೀ ಮಳೆಗೆ ಇಲ್ಲಿ ಹಾಕಲಾದ ಮಣ್ಣು ಕೊಚ್ಚಿ ಹೋಗಿ ಬಿರುಕು ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಎಂಟು ತಿಂಗಳಿನಿಂದ ಇಲ್ಲಿನ ರಾಜಕಾಲುವೆ ಕಾಮಗಾರಿ ಹಾಗೂ ಸರ್ವಿಸ್ ರಸ್ತೆ ನಿರ್ಮಾಣದ ಕಾಮಗಾರಿ ಆಗುತ್ತಿದ್ದು, ರಾಜಕಾಲುವೆಯನ್ನು ಅವೈಜ್ಞಾನಿಕವಾಗಿ ತಿರುಗಿಸಿದ ಕಾರಣ ಸ್ಥಳೀಯರ ಪ್ರತಿಭಟನೆಗೆ ಕಾರಣವಾಗಿತ್ತು.
ಪಾಲಿಕೆ ಮತ್ತು ಹೆದ್ದಾರಿ ಇಲಾಖೆ ನಡುವೆ ಸಮನ್ವಯತೆಯ ಕೊರತೆಯಿಂದ ರಾಜಕಾಲುವೆ ನಿರ್ಮಾಣ ಹಳಿತಪ್ಪಿದೆ. ಇದೀಗ ಮಳೆಗಾಲ ಆರಂಭವಾಗಿದ್ದು ಕಾಮಗಾರಿ ಹೆದ್ದಾರಿಗೆ ಕಂಟಕವಾಗುವ ಭೀತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿಆರ್ಝಡ್ ನಿರ್ಬಂಧಿತ ಪ್ರದೇಶದ ಕಾಂಡ್ಲಾವನಕ್ಕೆ ಮಣ್ಣು
ಆರಂಭದಲಿಯೇ ಕ್ಷೀಣಿಸಿದ್ದ ಮುಂಗಾರು; ಮಂಗಳೂರಿನಲ್ಲಿ ಇನ್ನೂ ಸುರಿದಿಲ್ಲ ವಾಡಿಕೆ ಮಳೆ!
ನಾವೂರು: ಇನ್ನಷ್ಟು ಅನುದಾನ ಹರಿದು ಬಂದರೆ ಅಭಿವೃದ್ಧಿ ಮಲ್ಲಿಗೆ ಅರಳೀತು
ಶಿರಾಡಿ ಘಾಟಿ: ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಬಂದ್ ಬೇಡಿಕೆ
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲೆಜ್ ಹಬ್,ಧಾರ್ಮಿಕ ಪ್ರವಾಸಿ ಸರ್ಕೀಟ್