ಕೂಲಿ ಕಾರ್ಮಿಕರ ಮೇಲೆ ಗ್ರಾ.ಪಂ. ಅಧ್ಯಕ್ಷೆಯ ಪತಿಯಿಂದ ದಬ್ಬಾಳಿಕೆ : ರಕ್ಷಣೆ ನೀಡುವಂತೆ ಮನವಿ
Team Udayavani, Jan 5, 2022, 7:53 PM IST
ಕುಷ್ಟಗಿ: ತಾಲೂಕಿನ ಹೂಲಗೇರಾ ಗ್ರಾಮ ಪಂಚಾಯತ್ ಅಧ್ಯಕ್ಷೆಯ ಪತಿಯ ದಬ್ಬಾಳಿಕೆಗೆ ರೋಸಿ ಹೋದ ಉದ್ಯೊಗ ಖಾತ್ರಿ ಕೂಲಿಕಾರ್ಮಿಕರು ತಮಗೆ ರಕ್ಷಣೆ ನೀಡುವಂತೆ ಕುಷ್ಟಗಿ ತಾಲೂಕು ಪಂಚಾಯತ್ ಇಓ ಡಾ.ಜಯರಾಮ್ ಚೌವ್ಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮಾಡುವ ಕೂಲಿಕಾರರಿಗೆ ಗ್ರಾ.ಪಂ. ಅದ್ಯಕ್ಷೆಯ ಪತಿ ವಿನಾಕಾರಣ ಹಸ್ತಕ್ಷೇಪ ಮಾಡುತ್ತಿದ್ದು ಕೂಲಿಕಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಕೂಲಿಕಾರರು, ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು. ಕೆಲಸ ಕೇಳಿದರೆ ಅದ್ಯಕ್ಷೆ ಪತಿರಾಯ ಅವಾಶ್ಚವಾಗಿ ನಿಂದಿಸುತ್ತಿದ್ದಾರೆಂದು ಆರೋಪಿಸಿದರು.
ಅದೇ ವೇಳೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆಗಮಿಸಿ, ತಾ.ಪಂ. ಇಓ ಸಮಕ್ಷಮದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚ್ಯವಾಗಿ ಹೇಳಿದರು.
ಇದನ್ನೂ ಓದಿ : ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ : ರಾಜ್ಯ ನೇಕಾರ ಸಂಘದ ಒತ್ತಾಯ