IIT Delhi: ಮಧ್ಯಂತರ ಪರೀಕ್ಷೆ ಕೈಬಿಟ್ಟ ದೆಹಲಿ ಐಐಟಿ
Team Udayavani, Aug 14, 2023, 5:12 AM IST
ನವದೆಹಲಿ: ವಿದ್ಯಾರ್ಥಿಗಳ ಮೇಲಿನ ಒತ್ತಡ ತಗ್ಗಿಸಿ, ವಿದ್ಯಾಭ್ಯಾಸವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ದೆಹಲಿ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ತನ್ನ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದು, ಪ್ರತಿ ಸೆಮಿಸ್ಟರ್‌ಗಳಲ್ಲಿ ಇರುತ್ತಿದ್ದ ಮಧ್ಯಂತರ ಪರೀಕ್ಷೆಯನ್ನು ಕೈಬಿಟ್ಟಿದೆ. ಪ್ರತಿ ಸೆಮಿಸ್ಟರ್‌ನಲ್ಲಿ 3 ಪರೀಕ್ಷೆಗಳು ಇರುತ್ತಿತ್ತು. ಆದರೆ, ಇನ್ನು ಮೊದಲ ಪರೀಕ್ಷೆ ಹಾಗೂ ಅಂತಿಮ ಪರೀಕ್ಷೆಗಳನ್ನು ಮಾತ್ರ ಎಲ್ಲಾ ಸೆಮಿಸ್ಟರ್‌ಗಳು ಹೊಂದಿರಲಿವೆ.
ಮಧ್ಯಂತರ ಪರೀಕ್ಷೆಗಳನ್ನು ಕೈ ಬಿಡಲಾಗುವುದು ಎಂದು ಐಐಟಿ ದೆಹಲಿ ನಿರ್ದೇಶಕರಾದ ರಂಗನ್ ಬ್ಯಾನರ್ಜಿ ತಿಳಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಓದಿನ ಒತ್ತಡದಿಂದ ಎಲ್ಲೆಡೆ ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆ ಆಂತರಿಕ ಸಮೀಕ್ಷೆ ನಡೆಸಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಅಭಿಪ್ರಾಯವನ್ನು ಆಧರಿಸಿ ನಿರ್ಣಯ ತೆಗೆದುಕೊಂಡಿರುವುದಾಗಿಯೂ ಹೇಳಿದ್ದಾರೆ.