ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಡಿಜಿಟಲ್‌ ಕರೆನ್ಸಿ ಜಾರಿ

Team Udayavani, Feb 2, 2022, 6:15 AM IST

ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಡಿಜಿಟಲ್‌ ಕರೆನ್ಸಿ ಜಾರಿ

2022-23ರ ಹಣಕಾಸು ವರ್ಷದಲ್ಲಿ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರ್ಧರಿಸಿದೆ.

ಇದನ್ನು “ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ’ (ಸಿಬಿಡಿಸಿ) ಎಂದು ಪರಿಗಣಿಸಲಾಗಿದೆ. ಡಿಜಿಟಲ್‌ ಕರೆನ್ಸಿಯಿಂದಾಗಿ, ಭಾರತದ ಡಿಜಿಟಲ್‌ ಆರ್ಥಿಕತೆಗೆ ಹೆಚ್ಚಿನ ಅನುಕೂಲವಾಗಲಿದೆ.

ಜೊತೆಗೆ, ಇದರಿಂದ ನೋಟು ಮಾದರಿಯ ಕರೆನ್ಸಿ ನಿರ್ವಹಣೆಯನ್ನು ಮತ್ತಷ್ಟು ಸರಳಗೊಳಿಸಲಿದ್ದು, ಅದರ ನಿರ್ವಹಣಾ ವೆಚ್ಚವನ್ನೂ ಕಡಿಮೆಗೊಳಿಸಲಿದೆ. ಬ್ಲಾಕ್‌ ಚೈನ್‌ ಹಾಗೂ ಇನ್ನಿತರ ತಂತ್ರಜ್ಞಾನಗಳ ಸಹಾಯದಿಂದ ಇದನ್ನು ಜಾರಿಗೊಳಿಸಲಾಗುತ್ತದೆ ಎಂದು ಬಜೆಟ್‌ ವರದಿಯಲ್ಲಿ ತಿಳಿಸಲಾಗಿದೆ.

ಏನಿದು ಬ್ಲಾಕ್‌ಚೈನ್‌ ಟೆಕ್ನಾಲಜಿ?
ಇದು ಒಂದು ನಿರ್ದಿಷ್ಟ ನೆಟ್‌ವರ್ಕ್‌ನಡಿ ಬರುವ ಎಲ್ಲಾ ಕಂಪ್ಯೂಟರ್‌ಗಳಲ್ಲಿಯೂ ನಗದು ವ್ಯವಹಾರಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ಸಂಗ್ರಹಿಸಿಡಬಲ್ಲಂಥ ವ್ಯವಸ್ಥೆ. ಇದು ಡೇಟಾ ಎಂಟ್ರಿ ವೇಳೆ ತಪ್ಪಾದರೂ ಕೂಡಲೇ ಅದನ್ನು ಮೂಲ ಸರ್ವರ್‌ನೊಂದಿಗೆ ಹೋಲಿಸಿ ಆ ತಪ್ಪನ್ನು ಸ್ವಯಂಚಾಲಿತವಾಗಿ ಸರಿಪಡಿಸಬಲ್ಲ ಹಾಗೂ ಸೈಬರ್‌ ದಾಳಿಕೋರರಿಂದ ಮಾಹಿತಿಯನ್ನು ಸಂರಕ್ಷಿಸಬಲ್ಲ ವ್ಯವಸ್ಥೆಯಾಗಿದೆ. ಬಿಟ್‌ಕಾಯಿನ್‌ನಂಥ ಕ್ರಿಪ್ಟೋ ಕರೆನ್ಸಿಯು ಈ ತಂತ್ರಜ್ಞಾನವನ್ನು ವಿಶ್ವವ್ಯಾಪಿಯಾಗಿ ಬಳಸುತ್ತಿದೆ. ಇದೇ ತಂತ್ರಜ್ಞಾನವನ್ನು ಡಿಜಿಟಲ್‌ ರೂಪಾಯಿ ವ್ಯವಸ್ಥೆಗೆ ಅಳವಡಿಸಿಕೊಳ್ಳಲು ಆರ್‌ಬಿಐ ನಿರ್ಧರಿಸಿದೆ.

ಬಳಕೆ ಹೇಗೆ?
ಆರ್‌ಬಿಐನಿಂದ ಅಂಗೀಕೃತಗೊಂಡ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ಅಡಿಯಲ್ಲಿ ಅಂಕಿ-ಸಂಖ್ಯೆಗಳ ಆಧಾರದಲ್ಲಿ ಈ ವ್ಯವಹಾರ ನಡೆಯಲಿದೆ. ಈಗಾಗಲೇ ಬ್ಯಾಂಕುಗಳ ಪಾಸ್‌ಬುಕ್‌ಗಳಲ್ಲಿ ಮುದ್ರಿಸಲ್ಪಡುವ ನಮ್ಮ ಬ್ಯಾಂಕ್‌ ಖಾತೆಗಳಲ್ಲಿನ ಹಣ, ಡಿಜಿಟಲ್‌ ಪೇಮೆಂಟ್‌ಗಳ ಮೂಲಕ ನಾವು ಮತ್ತೂಬ್ಬರಿಗೆ ಕಳಿಸುವ ಹಣ… ಇವೆಲ್ಲವೂ ಒಂದು ರೀತಿಯಲ್ಲಿ ಡಿಜಿಟಲ್‌ ರೂಪಾಯಿ ಆಧಾರಿತ ವ್ಯವಹಾರಗಳೇ. ಅದು ಇನ್ನು ಸರ್ವವ್ಯಾಪಿಯಾಗಲಿದೆಯಷ್ಟೆ.

ಮೂಲ ಉದ್ದೇಶ
ನೋಟುಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆಗೊಳಿಸಿ, ಆ ಮೂಲಕ ನೋಟುಗಳ ಮುದ್ರಣ ವೆಚ್ಚವನ್ನೂ ಕಡಿಮೆ ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಉದ್ದೇಶ ಇದರ ಹಿಂದಿದೆ.

 ಇದು ಕ್ರಿಪ್ಟೋ ಕರೆನ್ಸಿಯಲ್ಲ!
ಆರ್‌ಬಿಐ ಬಿಡುಗಡೆ ಮಾಡಲಿರುವ ಡಿಜಿಟಲ್‌ ಕರೆನ್ಸಿಯನ್ನು ಕ್ರಿಪ್ಟೋ ಕರೆನ್ಸಿಗಳೊಂದಿಗೆ ಹೋಲಿಸಿಕೊಂಡು ಗೊಂದಲಕ್ಕೊಳಗಾಗಬೇಕಿಲ್ಲ. ಅದೇ ಬೇರೆ, ಇದೇ ಬೇರೆ. ಕ್ರಿಪ್ಟೋ ಕರೆನ್ಸಿಯನ್ನು ವಚ್ಯುವಲ್‌ ಕರೆನ್ಸಿಯೆಂದೂ ಕರೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳ್ಳೋದಾದರೆ ಅದೊಂದು ರೀತಿಯ ಹೂಡಿಕೆ. ಆದರೆ, ಡಿಜಿಟಲ್‌ ಕರೆನ್ಸಿಯು ಈ ಮೇಲೆ ತಿಳಿಸಿದಂತೆ ನಮ್ಮ ಹಾಗೂ ಇತರರ ನಡುವೆ ನಡೆಯುವ ಹಣಕಾಸು ವ್ಯವಹಾರಗಳ ಡಿಜಿಟಲ್‌ ಸ್ವರೂಪ. ಹಾಗಾಗಿ, ಹೂಡಿಕೆ ಬೇರೆ, ನಗದು ರಹಿತ ವ್ಯವಹಾರ ಬೇರೆ. ಹಾಗಾಗಿ, ಪರಿಕಲ್ಪನೆ, ವ್ಯವಹಾರಿಕ ರೀತಿಗಳೆರಡಲ್ಲೂ ಇವರೆಡು ಪರಸ್ಪರ ವಿಭಿನ್ನ.

“ಕ್ರಿಪ್ಟೋ’ ಮೇಲೆ ಶೇ. 30ರಷ್ಟು ತೆರಿಗೆ
ದೇಶದಲ್ಲಿ ಕ್ರಿಪ್ಟೋ ಕರೆನ್ಸಿಯ ಬಳಕೆಯ ಬಗ್ಗೆ ಕೇಂದ್ರ ಸರ್ಕಾರ ಯಾವ ನಿಲುವನ್ನು ತಳೆಯಲಿದೆ ಎಂಬುದು ಈ ಬಾರಿಯ ಬಜೆಟ್‌ನಲ್ಲಿ ಸ್ಪಷ್ಟವಾಗಿದೆ. ಕ್ರಿಪ್ಟೋ ಕರೆನ್ಸಿ ಆಧಾರಿತ ಆದಾಯದ ಮೇಲೆ ಶೇ. 30ರಷ್ಟು ತೆರಿಗೆ ಹಾಕುವುದಾಗಿ ಕೇಂದ್ರ ಸರ್ಕಾರ ನಿರ್ಧರಿಸಿದೆ. ಕ್ರಿಪ್ಟೋ ಕರೆನ್ಸಿಯನ್ನು ಡಿಜಿಟಲ್‌ ಆಸ್ತಿಯೆಂದು ಪರಿಗಣಿಸುವುದಾಗಿಯೂ ವಿತ್ತ ಸಚಿವರು ಬಜೆಟ್‌ ಮಂಡನೆ ವೇಳೆ ತಿಳಿಸಿದ್ದಾರೆ. ಅಲ್ಲದೆ, ಇಂಥ ಡಿಜಿಟಲ್‌ ಆಸ್ತಿಯಿಂದ ಮಾಡುವ ಖರ್ಚುಗಳು, ಈ ಮಾದರಿಯ ಆಸ್ತಿಯ ವರ್ಗಾವಣೆ, ಈ ಸ್ವರೂಪದ ಆಸ್ತಿಯ ಮೇಲೆ ಪಡೆಯಬಹುದಾದ ಇತರ ಆರ್ಥಿಕ ಲಾಭಗಳೆಲ್ಲವೂ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು.

ಕ್ರಿಪ್ಟೋ ಕರೆನ್ಸಿಯನ್ನು ಭಾರತದಲ್ಲಿ ನಿಷೇಧಿಸಬಹುದು ಎಂಬ ಗುಮಾನಿ ಬಹುದಿನಗಳಿಂದ ಇತ್ತು. ಆದರೆ, ಇತ್ತೀಚೆಗೆ, ವಿತ್ತ ಸಚಿವರೇ ಇದನ್ನು ಡಿಜಿಟಲ್‌ ಆಸ್ತಿಯನ್ನಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದರು.

ಟಾಪ್ ನ್ಯೂಸ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.