ಗೋವಾ: ಇನ್ನು ಕೊಂಕಣ ರೈಲ್ವೆ ಮಾಲಿನ್ಯ ಮುಕ್ತ ಪ್ರಯಾಣ ಆರಂಭ
Team Udayavani, Mar 23, 2022, 6:00 PM IST
ಕೊಂಕಣ ರೈಲ್ವೆ, ಮಾಲಿನ್ಯ ಮುಕ್ತ ,ಪ್ರಯಾಣ, ವಿದ್ಯುದೀಕರಣ,
ಪಣಜಿ: ಕಳೆದ ಏಳು ವರ್ಷಗಳಿಂದ ನಡೆಯುತ್ತಿದ್ದ ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಇದರಿಂದಾಗಿ ಈ ಮಾರ್ಗ ಕೊಂಕಣ ರೈಲ್ವೆ ಮಾಲಿನ್ಯ ಮುಕ್ತ ಪ್ರಯಾಣ ಆರಂಭವಾಗಲಿದೆ.
ಕೊಂಕಣ ರೈಲ್ವೆ ಅಧಿಕಾರಿಗಳಿಂದ ಈ ಕುರಿತಂತೆ ಮಾಹಿತಿ ಲಭ್ಯವಾಗಿದೆ. ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, 25 ಕೆವಿ ವಿದ್ಯು ಪೂರೈಕೆಗೂ ಚಾಲನೆ ನೀಡಲಾಗಿದೆ. ರತ್ಯಾಗಿರಿಯಿಂದ ಗೋವಾದ ಥಿವಿಮ್ ಮಾರ್ಗದ ವಿದ್ಯುದೀಕರಣ ಕಾಮಗಾರಿಯನ್ನು ರೈಲ್ವೆ ಸುರಕ್ಷಾ ಆಯುಕ್ತ ಮನೋಜ್ ಅರೋರಾ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದೆ.
ರತ್ನಾಗಿರಿಯಿಂದ ಥಿವಿಮ್ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು ಅಂತಿಮವಾಗಿ ಸಿಆರ್ ಎಸ್ ತಪಾಸಣೆ ನಡೆಸಲಾಗುತ್ತಿದೆ. ನಂತರ ಕೊಂಕಣ ರೈಲ್ವೆ ಸಂಪೂರ್ಣ ಮಾರ್ಗದ ರೈಲುಗಳು ಡಿಸೇಲ್ ಬದಲಾಗಿ ವಿದ್ಯುತ್ ಎಂಜಿನ್ ಮೂಲಕ ಓಡಲು ಸಜ್ಜಾಗಲಿದೆ. ಇದರಿಂದಾಗಿ ಡೀಸೆಲ್ನಿಂದ ಉಂಟಾಗುತ್ತಿದ್ದ ಹೆಚ್ಚಿನ ಖರ್ಚು ಉಳಿತಾಯವಾಗಲಿದೆ. ಅಲ್ಲದೆಯೇ ಹೊಗೆಯಿಂದಾಗಿ ಉಂಟಾಗುವ ಮಾಲಿನ್ಯವನ್ನೂ ತಪ್ಪಿಸಬಹುದಾಗಿದೆ.