ಕುಂದಾಪುರ : ಮುಖ್ಯೋಪಾಧ್ಯಾಯರಿಂದಲೇ ಗೋಡೆಗೆ ಪೈಂಟಿಂಗ್
Team Udayavani, Mar 27, 2021, 1:20 AM IST
ಕುಂದಾಪುರ : ಮುಖ್ಯೋಪಾಧ್ಯಾಯರೊಬ್ಬರು ಶಾಲೆಯ ಶೌಚಾಲಯದ ಸಂಪೂರ್ಣ ಗೋಡೆಗೆ ಸ್ವತಃ ಬಣ್ಣ ಬಳಿಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೈಂದೂರು ವಲಯದ ಹೇರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಯಾನಂದ ಪಟೆಗಾರ್ ಅವರೇ ಶಾಲೆಯ ಶೌಚಾಲಯದ ಗೋಡೆಗೆ ಪೈಂಟಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಇದು ಮಕ್ಕಳು ಬಳಸುವ ಶೌಚಾಲಯ ಅಲ್ಲದಿದ್ದರೂ, ಯಾರಾದರೂ ಅಧಿಕಾರಿ ಗಳು, ಚುನಾವಣೆ ಸಮಯದಲ್ಲಿ ಬರುವ ಅಧಿಕಾರಿಗಳು, ಮತ್ತಿತರರ ಉಪ ಯೋಗಕ್ಕಾಗಿ ಈ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಆದರೆ ಇದಕ್ಕೆ ಪೈಂಟಿಂಗ್ ಆಗದೇ ಹಾಗೇ ಇದ್ದಿತ್ತು. ಅದಕ್ಕೆ ಮುಖ್ಯ ಶಿಕ್ಷಕ ಜಯಾನಂದ ಅವರು ಬಣ್ಣ ಬಳಿದಿದ್ದಾರೆ. ಇವರಿಗೆ ಹಳೆ ವಿದ್ಯಾರ್ಥಿಯೊಬ್ಬ ಸಾಥ್ ನೀಡಿದ್ದಾರೆ.
ಶ್ಲಾಘನೆ
ಹೇರಂಜಾಲು ಶಾಲೆಯ ಮುಖ್ಯ ಶಿಕ್ಷಕ ಜಯಾನಂದ ಪಟೆಗಾರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಶ್ಲಾಘನೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ