ಭಾರತದ್ದೇ ಒಂದು ಝೂಮ್‌ ತಯಾರಿಸಿ!

ಕೇಂದ್ರದಿಂದ 10 ಭಾರತೀಯ ಸಾಫ್ಟ್ ವೇರ್ ‌ ಕಂಪನಿಗಳಿಗೆ ಸವಾಲು, ಜೊತೆಗೆ ಆರ್ಥಿಕ ನೆರವು

Team Udayavani, May 26, 2020, 11:50 AM IST

ಭಾರತದ್ದೇ ಒಂದು ಝೂಮ್‌ ತಯಾರಿಸಿ!

ಕೋವಿಡ್ ಕಾಲಿಟ್ಟಿದ್ದೇ ಕಾಲಿಟ್ಟಿದ್ದು ಜಗತ್ತಿನಲ್ಲಿ ಚರ್ಚೆಯ ಕೇಂದ್ರಗಳೇ ಬದಲಾಗಿವೆ. ದೈಹಿಕ ಅಂತರ ಅನಿವಾರ್ಯವಾಗಿರುವುದರಿಂದ ಜನರು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಝೂಮ್‌ ಆ್ಯಪ್‌ ವಿಪರೀತ ಚಲಾವಣೆಗೆ ಬಂದಿದೆ. ಆದರೆ ಭಾರತ ಸರ್ಕಾರ ಆತ್ಮನಿರ್ಭರತೆಯ ಬೆನ್ನತ್ತಿರುವುದರಿಂದ, ಝೂಮ್‌ಗೆ ಸೆಡ್ಡು ಹೊಡೆಯುವ ಆ್ಯಪ್‌ ತಯಾರಿಗೆ ಪ್ರೇರಣೆ ನೀಡಿದೆ. ಈ ಸೂಚನೆಯ ಹಲವು ಆಯಾಮಗಳು ಇಲ್ಲಿವೆ.

ಝೂಮ್‌ ಯಾಕೆ ಬೇಕು?
ವಾಸ್ತವವಾಗಿ ಚೀನಾ ಮೂಲದ ಎರಿಕ್‌ ಯುವಾನ್‌ 1997ರಲ್ಲಿಯೇ ಅಮೆರಿಕಕ್ಕೆ ಹೋದರು. ಅಲ್ಲಿಯೇ 2011ರಲ್ಲಿ ಝೂಮ್‌ ಕಮ್ಯುನಿಕೇಷನ್ಸ್‌ ಆರಂಭಿಸಿದರು. 2013ರಲ್ಲಿ ವಿಡಿಯೊ ಸಂವಾದ ಆ್ಯಪ್‌ ಬಿಡುಗಡೆ ಮಾಡಿದರು. ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದವರೇ ಜಾಸ್ತಿ. ನಂತರ ಅಸಾಮಾನ್ಯ ವೇಗದಲ್ಲಿ ಬೆಳೆದ ಇದು, ಈಗ ದಿನವೊಂದಕ್ಕೆ 30 ಕೋಟಿ ಬಳಕೆದಾರರನ್ನು ಹೊಂದಿದೆ. ಕೊರೊನಾ ಬಂದ ಮೇಲೆ ಸಭೆಗಳನ್ನು ಆನ್‌ಲೈನ್‌ನಲ್ಲೇ ನಡೆಸಬೇಕಾಗಿರುವುದರಿಂದ ಝೂಮ್‌ಗೆ ಇನ್ನಷ್ಟು ಜನಪ್ರಿಯತೆ ಬಂದಿದೆ. ಈ ಆ್ಯಪ್‌ ಬಳಸಿ 40 ನಿಮಿಷ, 100 ಜನರೊಂದಿಗೆ ಉಚಿತವಾಗಿ ಸಭೆ ನಡೆಸಬಹುದು.

ಗೂಗಲ್‌ನಿಂದ ಮೀಟ್‌ ಉಚಿತ
ಝೂಮ್‌ ಒಂದೇ ಬಾರಿಗೆ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದನ್ನು ನೋಡಿ ಜಗತ್ತಿನ ಇತರೆ ಸಾಫ್ಟ್ವೇರ್‌ ದೈತ್ಯರಾದ ಗೂಗಲ್‌, ಫೇಸ್‌ಬುಕ್‌ಗಳು ಬೆಚ್ಚಿಬಿದ್ದಿವೆ. ಈ ಪೈಕಿ ಗೂಗಲ್‌ ತನ್ನ ಮೀಟ್‌ ಆ್ಯಪನ್ನು ಉಚಿತವಾಗಿಸಿದೆ. ಅದಕ್ಕೂ ಮುನ್ನ ಮೀಟ್‌ ಅನ್ನು ಹಣ ಕೊಟ್ಟು ಬಳಸಬೇಕಾಗಿತ್ತು. ಇದೇ ದಾರಿಯಲ್ಲಿ ಫೇಸ್‌ಬುಕ್‌ ಕೂಡ ಹೊರಟಿದೆ.

ಭಾರತದ್ದೇ ಆ್ಯಪ್‌ ಸೃಷ್ಟಿಸಲು ಕೇಂದ್ರ ಕರೆ
ಝೂಮ್‌ಗೆ ವಿಪರೀತ ಬೇಡಿಕೆ ಬಂದಿದ್ದರೂ, ಅದರಲ್ಲಿ ಭದ್ರತಾಲೋಪವಿದೆ. ಜನರ ಖಾಸಗಿ ಮಾಹಿತಿಗಳು ಬಯಲಾಗುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಭಾರತದಲ್ಲೇ ಝೂಮ್‌ ಮಾದರಿಯ ಆ್ಯಪ್‌ ಸೃಷ್ಟಿಸಲು ಕರೆ ನೀಡಿದೆ. ಪರಿಣಾಮ 10 ಕಂಪನಿಗಳ ಅಂತಿಮ ಪಟ್ಟಿ ತಯಾರಿಸಲಾಗಿದೆ. ಎಚ್‌ಸಿಎಲ್‌ ಟೆಕ್ನಾಲಜೀಸ್‌, ಜೊಹೊ ಕಾರ್ಪ್‌, ಪೀಪಲ್‌ಲಿಂಕ್‌, ಅರಿಯಾ ಟೆಲಿಕಾಮ್‌, ಸೈಬರ್‌ಹಾರಿಜನ್‌ ಕಾರ್ಪ್‌, ಇನ್‌ಸ್ಟ್ರೈವ್‌ ಸಾಫ್ಟ್ಲ್ಯಾಬ್ಸ್, ಡಾಟಾ ಎಂಜಿನಿಯರ್ಸ್‌ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ಕಂಪನಿಗಳು.

ಸರ್ಕಾರದಿಂದ ಆರ್ಥಿಕ ನೆರವು
ಮೊದಲ ಸುತ್ತಲ್ಲೇ ಆಯ್ಕೆಯಾದ ಎಲ್ಲ ಕಂಪನಿಗಳಿಗೂ ತಲಾ 5 ಲಕ್ಷ ರೂ. ನೀಡಲಾಗುತ್ತದೆ. ಎರಡನೇ ಸುತ್ತಿನಲ್ಲಿ ಮೂರು ಅಂತಿಮ ಆ್ಯಪ್‌ಗ್ಳನ್ನು ಆರಿಸಲಾಗುತ್ತದೆ. ಅವಕ್ಕೆ ತಲಾ 20 ಲಕ್ಷ ರೂ. ನೀಡಲಾಗುತ್ತದೆ. ಅಂತಿಮವಾಗಿ ಆಯ್ಕೆಯಾದ ಒಂದು ಕಂಪನಿಗೆ ತಮ್ಮ ಆ್ಯಪನ್ನು ಕೇಂದ್ರ ಹಾಗೂ ರಾಜ್ಯ
ಸರ್ಕಾರಿ ಕಂಪನಿಗಳಲ್ಲಿ ಅಳವಡಿಸಲು ಅನುಮತಿ ನೀಡಲಾಗುತ್ತದೆ. ಜೊತೆಗೆ ಒಂದು ಕೋಟಿ ರೂ.ಗಳನ್ನು 4 ವರ್ಷಗಳ ಮಟ್ಟಿಗೆ ನೀಡಲಾಗುತ್ತದೆ. 2ನೇ ವರ್ಷದಿಂದ ಮತ್ತೆ ತಲಾ 10 ಲಕ್ಷ ರೂ. ನೀಡಲಾಗುತ್ತದೆ.

ದೇಶದ್ದೇ ಯಾಕೆ ಬೇಕು?
ಡಾಟಾ ಎಂಜಿನಿಯರ್ಸ್‌ ಮುಖ್ಯಸ್ಥ ಅಜಯ್‌ ಪ್ರಕಾರ ದೇಶದ ಸಾಫ್ಟ್ವೇರ್‌ ಹೊಂದುವುದರಿಂದ ಹಲವು ಅನುಕೂಲಗಳಿವೆ. ಮುಖ್ಯವಾಗಿ, ಈ ಆ್ಯಪನ್ನು ಎಲ್ಲ ಭಾರತೀಯ ಭಾಷೆಗಳಿಗೆ ಪೂರಕವಾಗಿ ಅಭಿವೃದ್ಧಿಪಡಿಸಬಹುದು. ಅಂದರೆ ಸಾಫ್ಟ್ವೇರ್‌ಗಳಲ್ಲಿ ಭಾರತೀಯ ಲಿಪಿಗಳಿರಲು ಸಾಧ್ಯ. ಡೊಮೈನ್‌ ನಿಯಂತ್ರಣ ಭಾರತದಲ್ಲೇ ಇರುತ್ತದೆ. ವಿಡಿಯೊವನ್ನು ಕಾನೂನು ರಕ್ಷಣೆ ಕಾರಣದಿಂದ ಮುದ್ರಿಸಿಕೊಳ್ಳಬಹುದು. ಅದರ ಭದ್ರತಾ ಸಂಕೇತಗಳನ್ನೂ ನಮ್ಮಲ್ಲೇ ಇಟ್ಟುಕೊಳ್ಳಬಹುದು. ಆದರೆ ವಿದೇಶಿ ಆ್ಯಪ್‌ಗ್ಳಲ್ಲಿ ಈ ಸೌಲಭ್ಯಗಳು ಸಾಧ್ಯವಿಲ್ಲ.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.