ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ; ಪೊಲೀಸರಿಂದ ಇಬ್ಬರ ಬಂಧನ
Team Udayavani, Sep 5, 2020, 6:31 PM IST
ಬೆಳಗಾವಿ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕ್ಯಾಂಪ್ ಪೊಲೀಸರು ಇಬ್ಬರನ್ನು ಬಂಧಿಸಿ 250 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕ್ಯಾಂಪ್ನ ಉತ್ಕರ್ಷ ಉರ್ಫ್ ಬಾಬ್ಯಾ ಸುನೀಲ ವರ್ಮಾ(22) ಹಾಗೂ ಮಹಾದ್ವಾರ ರೋಡ್ನ ಮಯೂರ ಸುಭಾಷ್ ರಾಹುತ್(25) ಎಂಬವರನ್ನು ಬಂಧಿಸಲಾಗಿದೆ. ಬೇರೆ ಕಡೆಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಈ ಇಬ್ಬರ ಬಗ್ಗೆ ಪೊಲೀಸರು ಮಾಹಿತಿ ಪಡೆದು ದಾಳಿ ನಡೆಸಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಖಡೇಬಜಾರ್ ಎಸಿಪಿ ಎ. ಚಂದ್ರಪ್ಪ, ಕ್ಯಾಂಪ್ ಇನ್ಸಪೆಕ್ಟರ್ ಡಿ. ಸಂತೋಷಕುಮಾರ ನೇತೃತ್ವದಲ್ಲಿ ಎಎಸ್ಐ ಬಿ.ಆರ್. ಡೂಗ್, ಸಿಬ್ಬಂದಿಗಳಾದ ಎ.ಕೆ. ಶಿಂತ್ರೆ, ಆರ್.ಎಸ್. ಪೂಜಾರಿ, ಎಂ.ಎ. ಪಾಟೀಲ, ಬಿ.ಎಂ. ನರಗುಂದ, ಬಿ.ಎಸ್.ರುದ್ರಾಪುರ, ಎ.ಬಿ. ಘಟ್ಟದ, ಯು.ಎಂ. ಥೈಕಾರ ದಾಳಿ ನಡೆಸಿದ್ದರು. ಈ ಕುರಿತು ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.