ಉಪ ಚುನಾವಣೆಯಲ್ಲಿ ಸಚಿವರಿಗೆ ಜವಾಬ್ದಾರಿ

ಪ್ರಚಾರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ; ಕೆಲವು ಸಚಿವರಿಗೆ ಸಂಪನ್ಮೂಲ ಕ್ರೋಢೀಕರಣದ ಹೊಣೆ

Team Udayavani, May 10, 2019, 6:00 AM IST

Dinesh-Gundurao-545-A

ಬೆಂಗಳೂರು: ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆಯಲ್ಲಿ ಜವಾಬ್ದಾರಿ ವಹಿಸಿರುವ ಉಸ್ತುವಾರಿ ಸಚಿವರು ಕಡ್ಡಾಯವಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ. ಚುನಾವಣಾ ಉಸ್ತುವಾರಿ ಸಚಿವರು ಮತ್ತು ಇತರ ಮುಖಂಡರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಈ ಕ್ರಮ ಕೈಗೊಂಡಿದೆ.

ಉಪ ಚುನಾವಣೆಯಲ್ಲಿ ಉಸ್ತುವಾರಿಯನ್ನಾಗಿ ನೇಮಿಸಿರುವ ಸಚಿವರ ಜತೆ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿರುವ ದಿನೇಶ್‌ ಗುಂಡೂರಾವ್‌ ತಮಗೆ ವಹಿಸಿರುವ ಜವಾಬ್ದಾರಿ ನಿಭಾಯಿಸುವಂತೆ ತಾಕೀತು ಮಾಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತದ ಉಸ್ತುವಾರಿಯಾಗಿ ಮೂವರು ಸಚಿವರು ಹಾಗೂ ಪ್ರತಿ ಜಿಲ್ಲಾ ಪಂಚಾಯಿತಿಗೂ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಆದರೆ, ಬಹುತೇಕ ಸಚಿವರು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದು, ತಮಗೂ, ಉಪ ಚುನಾವಣೆಗೂ ಸಂಬಂಧ ಇಲ್ಲದಂತೆ ನಡೆದುಕೊಂಡಿದ್ದರಿಂದ ಸಚಿವರ ಸಭೆ ಕರೆದು ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.

ಎರಡು ಕ್ಷೇತ್ರಗಳ ಉಪ ಚುನಾವಣೆ ಮೈತ್ರಿ ಸರ್ಕಾರಕ್ಕೆ ಮಹತ್ವದ್ದಾಗಿದ್ದು, ಎರಡೂ ಕ್ಷೇತ್ರಗಳ ಗೆಲುವು ಕಾಂಗ್ರೆಸ್‌ಗೆ ಮುಖ್ಯವಾಗಿದೆ. ಹೀಗಾಗಿ ಸಚಿವರು ತಮಗೆ ಸಂಬಂಧ ಇಲ್ಲದಂತೆ ದೂರ ಉಳಿಯುವುದರಿಂದ ಚುನಾವಣಾ ಫ‌ಲಿತಾಂಶದಲ್ಲಿ ವ್ಯತ್ಯಾಸವಾದರೆ, ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಗಂಭೀರವಾಗಿ ಕೆಲಸ ಮಾಡುವಂತೆ ಅಧ್ಯಕ್ಷರು ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ಚುನಾವಣೆಗೆ ಬೇಕಾದ ಅಗತ್ಯ ಸಂಪನ್ಮೂಲ ಕ್ರೋಢೀಕರಣದ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾ ಗಿದ್ದು, ಕೆಲವು ಸಚಿವರಿಗೆ ಸಂಪನ್ಮೂಲ ಕ್ರೋಢೀಕರಣದ ಜವಾಬ್ದಾರಿಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ್, ಸಚಿವರಾದ ಆರ್‌.ವಿ.ದೇಶಪಾಂಡೆ, ಸತೀಶ್‌ ಜಾರಕಿಹೊಳಿ, ಶಿವಾನಂದ ಪಾಟೀಲ್, ಶಿವಶಂಕರ ರೆಡ್ಡಿ, ಎಂ.ಟಿ.ಬಿ. ನಾಗರಾಜ್‌, ಪಿ.ಟಿ. ಪರಮೇಶ್ವರ್‌ ನಾಯ್ಕ, ಇ. ತುಕಾರಾಂ ಪಾಲ್ಗೊಂಡಿದ್ದರು. ಡಿಸಿಎಂ ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಜಮೀರ್‌ ಅಹಮದ್‌, ಯು.ಟಿ.ಖಾದರ್‌, ರಾಜಶೇಖರ ಪಾಟೀಲ್, ರಹೀಂ ಖಾನ್‌ ಸಭೆಗೆ ಹಾಜರಾಗಿರಲಿಲ್ಲ. ಈಗಾಗಲೇ ಕೆಲವು ಸಚಿವರು ಕ್ಷೇತ್ರಗಳಲ್ಲಿ ತಮಗೆ ವಹಿಸಿರುವ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಸಭೆಗೆ ಹಾಜರಾಗಿರಲಿಲ್ಲ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಸಭೆಯ ನಂತರ ಮಾತನಾಡಿದ ದಿನೇಶ್‌ ಗುಂಡೂರಾವ್‌, ‘2 ಕ್ಷೇತ್ರಗಳಲ್ಲಿ ಉಪ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಸಚಿವರೊಂದಿಗೆ ಚರ್ಚೆ ನಡೆಸಿದ್ದೇವೆ. ಎಲ್ಲ ಸಚಿವರೂ ನಾಳೆಯಿಂದ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಯಾರಿಗೆ ಯಾವ ಜವಾಬ್ದಾರಿ ನೀಡಿದ್ದೇವೆಯೋ ಅವರು ತಮಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ’ ಎಂದರು.

ಇದೇ ಸಂದರ್ಭದಲ್ಲಿ ಸಿ.ಎಸ್‌. ಶಿವಳ್ಳಿ ಅವರನ್ನು ನೆನೆದು ಸಚಿವ ಡಿ.ಕೆ. ಶಿವಕುಮಾರ್‌ ಭಾವುಕರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವಳ್ಳಿ ಜತೆಗೆ ಡಿ.ಕೆ. ಶಿವಕುಮಾರ್‌ ಅವರ ಒಡನಾಟ ಚೆನ್ನಾಗಿತ್ತು. ಶಿವಳ್ಳಿಯವರು ಕಾಂಗ್ರೆಸ್‌ಗೆ ಬರಲು ಡಿ.ಕೆ.ಶಿವಕುಮಾರ್‌ ಕಾರಣರಾಗಿದ್ದರು. ಹೀಗಾಗಿ ಅವರನ್ನು ನೆನೆದು ಭಾವುಕರಾಗಿದ್ದಾರೆ ಎಂದು ಹೇಳಿದರು.

ಟಾಪ್ ನ್ಯೂಸ್

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಭಾರತದ ನೈಜ ಭೀಮ ಪ್ರತಿಭೆ

ಭಾರತದ ನೈಜ ಭೀಮ ಪ್ರತಿಭೆ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸತತ ಠೇವಣಿ ಕಳೆದುಕೊಂಡರೆ ಸ್ಪರ್ಧೆಗೆ ಅನರ್ಹ?

ಸತತ ಠೇವಣಿ ಕಳೆದುಕೊಂಡರೆ ಸ್ಪರ್ಧೆಗೆ ಅನರ್ಹ?

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.